ಶುಕ್ರವಾರ, ಜೂನ್ 5, 2020
27 °C

ಬಾಲಿವುಡ್ ಯುವ ನಟ ಮೋಹಿತ್ ಬಘೇಲ್ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ‘ರೆಡಿ’ ಸಿನಿಮಾದಲ್ಲಿ ನಟ ಸಲ್ಮಾನ್‌ ಖಾನ್ ಜೊತೆ ಅಮರ್ ಚೌಧರಿಯಾಗಿ ನಟಿಸಿ ಜನಪ್ರಿಯರಾಗಿದ್ದ ನಟ ಮೋಹಿತ್ ಬಘೇಲ್ (26) ಕ್ಯಾನ್ಸರ್‌ನಿಂದಾಗಿ ಸಾವನ್ನಪ್ಪಿದ್ದಾರೆ. 

‌‘ಉತ್ತರ ಪ್ರದೇಶದ ಮಥುರಾದಲ್ಲಿ ಶನಿವಾರ ಬೆಳಿಗ್ಗೆ ಮೋಹಿತ್ ಸಾವನ್ನಪ್ಪಿದ್ದಾರೆ’ ಎಂದು ಚಿತ್ರಕಥೆಗಾರ ಮತ್ತು ನಿರ್ದೇಶಕ ರಾಜ್ ಶಾಂಡಿಲ್ಯ ತಿಳಿಸಿದ್ದಾರೆ. 

‘ಮೋಹಿತ್ ನವದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಆರು ತಿಂಗಳಿನಿಂದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಮೇ 15ರಂದು ಅವರೊಂದಿಗೆ ಕೊನೆಯ ಬಾರಿ ಮಾತನಾಡಿದ್ದೆ. ಆ ಸಮಯದಲ್ಲಿ ಆರೋಗ್ಯವಾಗಿರುವೆ ಎಂದು ತಿಳಿಸಿದ್ದ ಅವರು, ಚೇತರಿಕೆಯ ಹಾದಿಯಲ್ಲಿದ್ದರು. ಅಪ್ಪ–ಅಮ್ಮ ಮತ್ತು ಅಣ್ಣನೊಂದಿಗೆ ಮೋಹಿತ್ ಮಥುರಾದಲ್ಲಿ ನೆಲೆಸಿದ್ದರು’ ಎಂದು ಅವರು ಮಾಹಿತಿ ನೀಡಿದ್ದಾರೆ. 

ಮೋಹಿತ್ ‘ಮಿಲನ್ ಟಾಕೀಸ್’, ‘ಬಂಟಿ ಔರ್ ಬಬ್ಲೀ–2’ನಲ್ಲಿ ನನ್ನೊಂದಿಗೆ ಕೆಲಸ ಮಾಡಿದ್ದರು. ನನ್ನ ಮೊದಲ ನಿರ್ದೇಶನದ ಚಿತ್ರ ‘ಡ್ರೀಂ ಗರ್ಲ್‌’ನಲ್ಲಿ ಅವರು ಅಭಿನಯಿಸಬೇಕಿತ್ತು. ಆದರೆ, ದಿನಾಂಕ ಹೊಂದಾಣಿಕೆಯಾಗದ ಕಾರಣ ಇಬ್ಬರೂ ಒಟ್ಟಿಗೆ ಕೆಲಸ ಮಾಡಲಾಗಲಿಲ್ಲ’ಎಂದು ಶಾಂಡಿಲ್ಯ ಹೇಳಿದ್ದಾರೆ. 

‘ರೆಡಿ’, ‘ಕಾಮಿಡಿ ಸರ್ಕಸ್‌’, ‘ಜಬ್ರಿಯಾ ಜೋಡಿ’, ‘ಗಲಿ ಗಲೀ ಮೇ ಚೋರ್ ಹೈ’ ಸೇರಿದಂತೆ ಹಲವು ಚಿತ್ರಗಳಲ್ಲಿ ಮೋಹಿತ್ ನಟಿಸಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು