ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ವರ್ಷಗಳ ಬಳಿಕ ಮದುವೆಯ ವಿಡಿಯೊ ಬಿಡುಗಡೆ ಮಾಡಿದ ರಣವೀರ್‌–ದೀಪಿಕಾ

Published 26 ಅಕ್ಟೋಬರ್ 2023, 10:36 IST
Last Updated 26 ಅಕ್ಟೋಬರ್ 2023, 10:36 IST
ಅಕ್ಷರ ಗಾತ್ರ

ಮುಂಬೈ: ಹಿಂದಿಯಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವ ಕಾಫಿ ವಿತ್‌ ಕರಣ್ ಕಾರ್ಯಕ್ರಮದ ಎಂಟನೇ ಆವೃತ್ತಿ ಆರಂಭವಾಗಿದೆ. ಇದಕ್ಕೆ ಮೊದಲ ಅತಿಥಿಗಳಾಗಿ ಬಾಲಿವುಡ್‌ನ ಸ್ಟಾರ್‌ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ಭಾಗವಹಿಸಿದ್ದಾರೆ.

ರಣವೀರ್‌ –ದೀಪಿಕಾ ಮದುವೆಯಾಗಿ ಐದು ವರ್ಷಗಳೇ ಕಳೆಯುತ್ತಿದೆ. (2018ರ ನವೆಂಬರ್‌ 14 ರಂದು ವಿವಾಹವಾಗಿದ್ದರು) ಇದೀಗ ಕಾಫಿ ವಿತ್‌ ಕರಣ್‌ ಕಾರ್ಯಕ್ರಮದಲ್ಲಿ ಮದುವೆಯ ವಿಶೇಷ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದಾರೆ. ರಣವೀರ್‌ –ದೀಪಿಕಾ ಮದುವೆಯ ಮಧುರ ಕ್ಷಣಗಳ ವಿಡಿಯೊವನ್ನು The Wedding Filmer ಇನ್‌ಸ್ಟಾಗ್ರಾಮ್‌ ಖಾತೆ ಹಂಚಿಕೊಂಡಿದೆ.

ಕಾರ್ಯಕ್ರಮದಲ್ಲಿ ದೀಪಿಕಾ ಹಾಗೂ ರಣವೀರ್‌ ಬದುಕಿನಲ್ಲಿ ಎದುರಿಸಿದ ಸವಾಲುಗಳ ಬಗ್ಗೆ ಹಾಗೂ ಮದುವೆಯಾದ ನಂತರದ ಜೀವನದ ಬಗ್ಗೆ ಹಂಚಿಕೊಂಡಿದ್ದಾರೆ.

ದೀಪಿಕಾ ಸದ್ಯ ‘ಫೈಟರ್‌’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT