ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆ ಒಂದು ಫೋಟೊ ನಾಗ ಚೈತನ್ಯ ಸಮಂತಾಗೆ ಡಿವೋರ್ಸ್ ನೀಡಲು ಕಾರಣವಾಯಿತೆ?

ಬೆಂಗಳೂರು:‌ನಟ ನಾಗ ಚೈತನ್ಯ ಹಾಗೂ ನಟಿ ಸಮಂತಾ ಅವರ ನಾಲ್ಕು ವರ್ಷದ ದಾಂಪತ್ಯ ಜೀವನ ಅಂತ್ಯಗೊಂಡಿರುವುದು ದಕ್ಷಿಣ ಭಾರತದ ಸಿನಿರಂಗದಲ್ಲಿ ದೊಡ್ಡ ಚರ್ಚೆಯಾಯಿತು. ಈ ವಿಚ್ಚೇದನಕ್ಕೆ ಏನು ಕಾರಣ? ಎಂಬುದು ಇದುವರೆಗೆ ಬಹಿರಂಗವಾಗಿಲ್ಲ.

‘ಫ್ಯಾಮಿಲಿ ಮ್ಯಾನ್‌’ ಚಿತ್ರದಲ್ಲಿ ಸಮಂತಾ ಮಾಡಿದ್ದ ಬೋಲ್ಡ್ ದೃಶ್ಯಗಳೇ ಸಂಸಾರದಲ್ಲಿನ ಬಿರುಕಿಗೆ ಕಾರಣ ಎಂದು ದೊಡ್ಡ ಚರ್ಚೆಯಾಗಿತ್ತು.ಆದರೆ, ಇದೀಗ ಸಮಂತಾ ಫ್ಯಾಶನ್ ಡಿಸೈನರ್ ಒಬ್ಬರ ಜೊತೆ ಇದ್ದ ಸಲುಗೆಯೇ ವಿಚ್ಚೇದನಕ್ಕೆ ಕಾರಣವಾಯಿತು ಎಂದು ಕೆಲ ನೆಟ್ಟಿಗರು ಸಾಮಾಜಿಕ ತಾಣಗಳಲ್ಲಿ ಚರ್ಚಿಸುತ್ತಿದ್ದಾರೆ.

ಫ್ಯಾಶನ್ ಡಿಸೈನರ್ ಪ್ರೀತಮ್ ಜುಕಾಲ್‌ಕರ್ ಅವರು ಚಾಯ್–ಸಮಂತಾ ಡಿವೋರ್ಸ್‌ಗೆ ಕಾರಣ ಎಂದು ಕೆಲವರು ಈ ಇಬ್ಬರೂ ಒಟ್ಟಿಗೆ ಆತ್ಮೀಯತೆಯಿಂದ ಇರುವ ಫೋಟೊ ಒಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೊದಲ್ಲಿ ಪ್ರೀತಂ ಹಾಗೂ ಸಮಂತಾ ಸಲುಗೆಯಿಂದ ಇರುವುದು ಕಾಣುತ್ತದೆ.

ಆದರೆ, ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಪ್ರೀತಂ ಅವರು, ಚಾಯ್–ಸಮಂತಾ ಬೇರೆ ಬೇರೆಯಾಗಿದ್ದಕ್ಕೆ ನನಗೆ ಕೆಲವರು ಮಾನಸಿಕ ಕಿರುಕುಳ ಕೊಡುತ್ತಿದ್ದಾರೆ ಎಂದು ನೋವು ತೋಡಿಕೊಂಡಿದ್ದಾರೆ. ಪ್ರೀತಂ ಅವರ ಸಾಮಾಜಿಕ ಖಾತೆಗಗಳಲ್ಲಿ ಸಮಂತಾ ಫೋಟೊ ತುಂಬಿ ತುಳುಕುವುದನ್ನು ಕಾಣಬಹುದು ಎಂದು ಕೆಲವರು ಎತ್ತಿ ತೋರಿಸಿದ್ದಾರೆ.

ಸಮಂತಾ–ಪ್ರೀತಂ ಒಟ್ಟಿಗೆ ಇರುವ ಪೋಟೊ ಎಂದು ಟ್ವಿಟರ್‌ನಲ್ಲಿ ಕೆಲವರು ಹಾಕಿಕೊಂಡ ಫೋಟೊ
ಸಮಂತಾ–ಪ್ರೀತಂ ಒಟ್ಟಿಗೆ ಇರುವ ಪೋಟೊ ಎಂದು ಟ್ವಿಟರ್‌ನಲ್ಲಿ ಕೆಲವರು ಹಾಕಿಕೊಂಡ ಫೋಟೊ

ಕಳೆದ ಶನಿವಾರ ನಾಗ ಚೈತನ್ಯ ಹಾಗೂ ಖ್ಯಾತ ನಟಿ ಸಮಂತಾ ನಡುವಿನ ದಾಂಪತ್ಯ ಅಧಿಕೃತವಾಗಿ ಮುರಿದು ಬಿದ್ದಿತ್ತು. ವಿಚ್ಛೇದನಪಡೆಯುದಾಗಿ ತಾರಾ ಜೋಡಿಘೋಷಿಸಿತ್ತು

ಸ್ವತಃ ಈ ವಿಷಯವನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ್ದ ನಾಗ ಚೈತನ್ಯ, ‘ಹೆಚ್ಚು ಆಲೋಚನೆ ನಂತರ ಸಮಂತಾ ಮತ್ತು ನಾನು ನಮ್ಮ ಸ್ವಂತ ದಾರಿಯನ್ನು ಅನುಸರಿಸಲು ಹೆಜ್ಜೆ ಇಟ್ಟಿದ್ದೇವೆ. ಈ ಮೂಲಕ ಗಂಡ ಮತ್ತು ಹೆಂಡತಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ‘ ಎಂದು ಘೋಷಿಸಿದ್ದರು.

‘ಒಂದು ದಶಕದ ಈ ಸ್ನೇಹವನ್ನು ಅನುಭವಿಸಲು ನಾವು ಅದೃಷ್ಟಶಾಲಿಯಾಗಿದ್ದೇವು. ಅದು ನಮ್ಮ ಸಂಬಂಧದ ತಳಹದಿ. ಯಾವಾಗಲೂ ನಮ್ಮ ನಡುವೆ ಅದು ವಿಶೇಷ ಬಾಂಧವ್ಯವನ್ನು ಹೊಂದಿರುತ್ತದೆ. ಈ ಕಷ್ಟದ ಸಮಯದಲ್ಲಿ ನಮ್ಮ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮಗಳು ನಮ್ಮನ್ನು ಬೆಂಬಲಿಸಬೇಕು‘ ಎಂದು ನಾಗ ಚೈತನ್ಯ ಧನ್ಯವಾದ ಸಲ್ಲಿಸಿ ಟ್ವೀಟ್ ಮಾಡಿದ್ದರು.

2017 ರಲ್ಲಿ ನಾಗ ಚೈತನ್ಯ ಹಾಗೂ ಸಮಂತಾ ಅದ್ಧೂರಿಯಾಗಿ ಮದುವೆಯಾಗಿದ್ದರು.

ಸಮಂತಾ ಕೂಡ ಇನ್‌ಸ್ಟಾಗ್ರಾಂನಲ್ಲಿ ನಾಗ ಚೈತನ್ಯ ಹಾಕಿರುವ ಪೋಸ್ಟ್‌ನ್ನೇ ಹಾಕಿವಿಚ್ಚೇದನವನ್ನು ಖಚಿತಪಡಿಸಿದ್ದರು.ಕಳೆದ ಕೆಲವು ತಿಂಗಳಿನಿಂದ ಸಮಂತಾ ಹಾಗೂ ನಾಗಚೈತನ್ಯವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ವದಂತಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಜೋರಾಗಿ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT