ಬುಧವಾರ, ಆಗಸ್ಟ್ 5, 2020
25 °C

ನಟಿ ರೇಖಾ ನಿವಾಸದಸೆಕ್ಯೂರಿಟಿ ಗಾರ್ಡ್‌ಗೆ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್ ಚಿರಯೌವ್ವನೆ, ಹಿರಿಯ ನಟಿ ರೇಖಾ ಅವರ ಮುಂಬೈ ನಿವಾಸದ ಸೆಕ್ಯೂರಿಟಿ ಗಾರ್ಡ್‌ಗೆ ಕೊರೊನ ಸೋಂಕು ದೃಢಪಟ್ಟಿದೆ.

ಸೋಂಕು ದೃಢಪಡುತ್ತಲೇ ಬೃಹನ್‌ ಮುಂಬೈ ಮುನ್ಸಿಪಲ್‌ ಕಾರ್ಪೊರೇಷನ್‌ (ಬಿಎಂಸಿ)  ಸಿಬ್ಬಂದಿಯು ನಟಿ ರೇಖಾ ನಿವಾಸದ ಸೆಕ್ಯೂರಿಟಿ ಗಾರ್ಡ್‌ನನ್ನು ಬಾಂದ್ರಾ ಕೋವಿಡ್‌ ಆಸ್ಪತ್ರೆಗೆ ಸೇರಿಸಿದ್ದಾರೆ. ರೇಖಾ ನಿವಾಸದ ಎಲ್ಲ ಸಿಬ್ಬಂದಿಯ ಜತೆಗೆ ಪಕ್ಕದಲ್ಲಿರುವ ಜಾವೇದ್‌ ಅಖ್ತರ್ ನಿವಾಸದ ಎಲ್ಲ ಸಿಬ್ಬಂದಿಯನ್ನೂ  ಕೋವಿಡ್‌–19 ಪರೀಕ್ಷೆಗೆ ಕರೆದೊಯ್ದಿದ್ದಾರೆ.  

ಪಾಲಿಕೆಯ ಆರೋಗ್ಯ ಸಿಬ್ಬಂದಿ ಕೋವಿಡ್‌–19 ಪರೀಕ್ಷೆಗೆ ಒಳಗಾಗುವಂತೆ ನಟಿ ರೇಖಾ ಅವರಿಗೂ ಮನವಿ ಮಾಡಿದರು. ಅವರ ಮನವಿಯನ್ನು ನಿರಾಕರಿಸಿದ ರೇಖಾ, ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿ, ವರದಿ ಸಲ್ಲಿಸುವುದಾಗಿ ತಿಳಿಸಿದರು ಎಂದು ಹೇಳಲಾಗಿದೆ.

ಮುಂಬೈ ಪಾಲಿಕೆಯ ಸಿಬ್ಬಂದಿಯು ರೇಖಾ ಅವರ ನಿವಾಸವನ್ನು ಸೀಲ್‌ಡೌನ್‌ ಮಾಡಿಲ್ಲ. ಆದರೆ, ಅವರ ಮನೆಯ ಕಂಪೌಂಡ್‌ ದ್ವಾರದಲ್ಲಿ ಭದ್ರತಾ ಸಿಬ್ಬಂದಿ ವಾಸಿಸುತ್ತಿದ್ದ ಜೋಪಡಿಯನ್ನು ಮಾತ್ರ ಸೀಲ್‌ಡೌನ್‌ ಮಾಡಿದ್ದಾರೆ.

ಇದಕ್ಕೂ ಮೊದಲು ಕರಣ್‌ ಜೋಹರ್‌ ಮತ್ತು ಜಾಹ್ನವಿ ಕಪೂರ್‌ ಆಪ್ತ ಸಹಾಯಕ ಸಿಬ್ಬಂದಿಗೂ ಸೋಂಕು ದೃಢಪಟ್ಟಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು