ನಿರ್ದೇಶಕ, ನಿರ್ಮಾಪಕ ರಾಮ್‌ಗೋಪಾಲ್ ವರ್ಮಾ ತಮ್ಮ ಮುಂದಿನ ಪವರ್‌ಸ್ಟಾರ್ ಸಿನಿಮಾವನ್ನು ನಿರ್ದೇಶಿಸುವ ಜೊತೆಗೆ ನಟನೆಯನ್ನೂ ಮಾಡಲಿದ್ದಾರಂತೆ. ಸಿನಿಮಾದಲ್ಲಿ ಬಾಂದ್ಲಾ ಗಣೇಶ್ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಆರ್‌ಜಿವಿ. ಇದು ಅತಿಥಿ ಪಾತ್ರ ಎನ್ನಲಾಗುತ್ತಿದೆ.

ಈಗಾಗಲೇ ಅನೇಕ ಸಿನಿಮಾಗಳಿಗೆ ಹಾಡು ಹೇಳಿರುವ ಆರ್‌ಜಿವಿ ಆ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಹೊರ ಹಾಕಿದ್ದಾರೆ. ಅಲ್ಲದೇ ಆರ್‌ಜಿವಿ ಹಾಡುಗಳಿಗೆ ಅಭಿಮಾನಿಗಳಿಂದ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಈಗ ನಟನೆಯ ಮೂಲಕ ತಮ್ಮ ಇನ್ನೊಂದು ಪ್ರತಿಭೆ ಹೊರ ಹಾಕಲು ಸನ್ನದ್ಧರಾಗಿದ್ದಾರೆ ನಿರ್ದೇಶಕ.

ಪವರ್‌ಸ್ಟಾರ್ ಚಿತ್ರದಲ್ಲಿ ಚಿರಂಜೀವಿ, ನಾಗಬಾಬು, ಅಲ್ಲು ಅರವಿಂದ್, ತಿವಿಕ್ರಮ್ ಹಾಗೂ ಬಾಂದ್ಲಾ ಗಣೇಶ್ ಅವರನ್ನು ಹೋಲುವ ಅನೇಕ ಪಾತ್ರಗಳಿವೆ.

ಮೂಲಗಳ ಪ್ರಕಾರ ಆರ್‌ಜಿವಿ ಬಾಂದ್ಲಾ ಗಣೇಶ್ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರಂತೆ. ರಿಯಲ್ ವ್ಯಕ್ತಿಗಳಿಗೆ ಹೊಂದುವ ರೀಲ್ ವ್ಯಕ್ತಿಗಳನ್ನು ಪರಿಚಯಿಸುವುದು ಆರ್‌ಜಿವಿ ಸ್ಟೈಲ್. ಆದರೆ ಬಾಂದ್ಲಾ ಗಣೇಶ್‌ಗೂ ಆರ್‌ಜಿವಿಗೂ ಯಾವುದೇ ಹೋಲಿಕೆ ಇಲ್ಲ. ಆದರೂ ಆರ್‌ಜಿವಿ ಈ ಪಾತ್ರಕ್ಕೆ ಯಾವ ಕಾರಣಕ್ಕೆ ಬಣ್ಣ ಹಚ್ಚುತ್ತಿದ್ದಾರೆ ಎಂಬುದು ಮಾತ್ರ ತಿಳಿದುಬಂದಿಲ್ಲ.

ಆರ್‌ಜಿವಿ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಅಲ್ಲದೇ ಇವರಿಗೆ ಡೈಲಾಗ್‌ಗಳು ಹೆಚ್ಚಿಲ್ಲ. ಕೇವಲ ಒಂದು ನಿಮಿಷದ ಪಾತ್ರವಷ್ಟೇ ಎನ್ನಲಾಗುತ್ತಿದೆ.

ಒಟ್ಟಾರೆ ಪವರ್‌ಸ್ಟಾರ್ ಸಿನಿಮಾ ನೋಡಲು ಆರ್‌ಜಿವಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುವುದು ಮಾತ್ರ ಸುಳ್ಳಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.