ಮತ್ತೆ ಬಂದಳು ‘ಸೈರಾಟ್’ ಸುಂದರಿ

ಶನಿವಾರ, ಮೇ 25, 2019
27 °C

ಮತ್ತೆ ಬಂದಳು ‘ಸೈರಾಟ್’ ಸುಂದರಿ

Published:
Updated:
Prajavani

‘ಸೈರಾಟ್’ ಸಿನಿಮಾದ ಮುಗ್ಧ ಕಂಗಳ ಚೆಲುವೆ ರಿಂಕು ರಾಜ್‌ಗುರು ನೆನಪಿದೆಯೇ? ಪ್ರಬುದ್ಧ ಅಭಿನಯ ಮತ್ತು ತುಂಟತನದ ನೋಟದಿಂದ ದೇಶದ ಯುವ ಮನಸುಗಳನ್ನು ಸೆಳೆದಿದ್ದ ಈ ಚೆಲುವೆ, ಮೂರು ವರ್ಷಗಳ ದೀರ್ಘಕಾಲದ ಗ್ಯಾಪ್ ಬಳಿಕ ಮತ್ತೆ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮರಾಠಿ ಸಿನಿಮಾ ’ಕಾಗರ್‌’ನಲ್ಲಿ ರಾಣಿ ಅನ್ನುವ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಿಂಕು, ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಪ್‌ಡೇಟ್‌ಗಳನ್ನು ಅಭಿಮಾನಿಗಳಿಗೆ ತಿಳಿಸುವುದರಲ್ಲಿ ಮುಂಚೂಣಿಯಲ್ಲಿದ್ದಾರೆ. ಕಾರ್ಯಕ್ರಮದ ಫೋಟೊ ಮತ್ತು ವಿಡಿಯೊಗಳನ್ನು ಹಾಕುವ ಮೂಲಕ ಅಭಿಮಾನಿಗಳೊಂದಿಗೆ ಒಡನಾಟ ಹೊಂದಿರುವ ರಿಂಕು, ಸರಳ ಉಡುಗೆ ಮತ್ತು ಕನಿಷ್ಠ ಮೇಕಪ್‌ನಲ್ಲಿ ಕಾಣಿಸಿಕೊಳ್ಳುವ ರಿಂಕು, ತಾನು ಇತರ ನಟಿಯಂತರಲ್ಲ ಎಂಬುದನ್ನೂ ಸಾಬೀತು ಮಾಡಿದ್ದಾರೆ.

‘ಕಾಗರ್’ ಮರಾಠಿ ಸಿನಿಮಾದ ಮೂಲಕ ಸಿನಿರಂಗಕ್ಕೆ ಮರಳಿರುವುದು ಆಕೆಯ ಅಭಿಮಾನಿಗಳಿಗೆ ಖುಷಿ ತಂದಿದೆಯಂತೆ.  ರಾಷ್ಟ್ರಪ್ರಶಸ್ತಿ ಪುರಸ್ಕೃತ ಶುಭಂಕರ್ ತವ್ಡೆ ನಿರ್ದೇಶನ ‘ಕಾಗರ್’ ಈಗಾಗಲೇ ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದು, ಸಿನಿಮಾದ ಯಶಸ್ಸು ರಿಂಕುವನ್ನು ಮತ್ತೊಮ್ಮೆ ಬೆಳಗುವಂತೆ ಮಾಡುವುದೇ ಎಂಬ ಕುತೂಹಲ ಕಾಯ್ದಿಟ್ಟಿದ್ದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !