ಬುಧವಾರ, ಮಾರ್ಚ್ 29, 2023
23 °C

ಕುಟುಂಬದೊಂದಿಗೆ ದುಬೈನಲ್ಲಿ ರಿಷಭ್ ಶೆಟ್ಟಿ: ವಿಡಿಯೊ ಹಂಚಿಕೊಂಡು ಸಂತಸ

ಪ್ರಜಾವಾಣಿ ವೆಬ್‌ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾಂತಾರ ಸಿನಿಮಾದ ಅಭೂತಪೂರ್ವ ಯಶಸ್ಸಿನ ನಂತರ ಸಕ್ಷಸ್ ಮೀಟ್‌ಗಳಲ್ಲಿ ತೊಡಗಿಸಿಕೊಂಡಿದ್ದ ನಟ ನಿರ್ದೇಶಕ ರಿಷಭ್ ಶೆಟ್ಟಿ ಅವರು ಒಂದು ವಾರ ದುಬೈನಲ್ಲಿ ಕುಟುಂಬದೊಂದಿಗೆ ಕಾಲ ಕಳೆದು ಬಂದಿದ್ದಾರೆ.

ಅವರು ತಮ್ಮ ದುಬೈ ಪ್ರವಾಸದ ಸುಂದರ ಕ್ಷಣಗಳುಳ್ಳ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಪತ್ನಿ ಪ್ರಗತಿ ಶೆಟ್ಟಿ ಹಾಗೂ ತಮ್ಮ ಇಬ್ಬರು ಮಕ್ಕಳೊಂದಿಗೆ ದುಬೈಗೆ ಭೇಟಿ ನೀಡಿದ್ದ ರಿಷಭ್ ಅವರು ಅಲ್ಲಿನ ಸುಂದರ ಪ್ರವಾಸಿ ತಾಣಗಳನ್ನು ಸಂದರ್ಶಿಸಿ ಬಂದಿದ್ದಾರೆ. ಈ ವೇಳೆ ಅವರು ಮಕ್ಕಳೊಂದಿಗೆ ಬೋಟಿಂಗ್, ಡೆಸರ್ಟ್ ರೇಸ್, ಈಜು, ಸಾಹಸ ಕ್ರೀಡೆಗಳನ್ನು ಆಡಿ ಬಂದಿದ್ದಾರೆ.

‘ಸಾಟಿಯಿಲ್ಲದ ದುಬೈ ಪ್ರವಾಸ ಒಂದು ಸುಂದರ ಹಾಗೂ ಸ್ಮರಣೀಯ ಅನುಭವವನ್ನು ಕಟ್ಟಿಕೊಡುವಂತದ್ದು. ದುಬೈನ ಸ್ಥಳಗಳು ಹಾಗೂ ಅಲ್ಲಿನ ಜನರ ಆತಿಥ್ಯಕ್ಕೆ ನಾನು ಮನಸೋತೆ. ನನ್ನ ಮಕ್ಕಳು, ಮಡದಿಯೊಂದಿಗೆ ಬಿಡುವನ್ನು ಆನಂದಿಸಿದೆ ಎಂದು ಬರೆದುಕೊಂಡಿದ್ದಾರೆ.

ಕಾಂತಾರ ಸಿನಿಮಾ ನಂತರ ಬೆಲ್‌ ಬಾಟಮ್ 2 ಸಿನಿಮಾ ಹಾಗೂ ಕಾಂತಾರ 2 ಸಿನಿಮಾದಲ್ಲಿ ರಿಷಭ್ ಶೆಟ್ಟಿ ತೊಡಗಿಸಿಕೊಳ್ಳಲಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು