ಸ್ಯಾಂಡಲ್ವುಡ್ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಪ್ರೀತಿಗೆ ನಿನ್ನೆಗೆ (ಜ.23) 10 ವರ್ಷಗಳು ತುಂಬಿವೆ. ಪ್ರತಿ ಹಂತದಲ್ಲೂ ಜೊತೆಯಾಗಿ, ಸದಾ ಬೆನ್ನೆಲುಬಾಗಿ ನಿಂತಿರುವ ಪ್ರೀತಿಯ ಮಡದಿಗೆ ರಿಷಬ್ ಶೆಟ್ಟಿ ವಿಶೇಷ ವಿಡಿಯೊವೊಂದನ್ನು ಅರ್ಪಿಸಿದ್ದಾರೆ.
.ರಿಷಬ್ ಶೆಟ್ಟಿ ನಟನೆಯ ‘ಕಾಂತಾರ ಅಧ್ಯಾಯ 1’ ಶೀಘ್ರದಲ್ಲಿ ಕಿರುತೆರೆಗೆ.ಸುದೀಪ್ ನಟನೆಯ ಮಾರ್ಕ್ ಚಿತ್ರಕ್ಕೆ ಶುಭಕೋರಿದ ಅಶ್ವಿನಿ ಪುನೀತ್, ರಿಷಬ್ ಶೆಟ್ಟಿ .
ಕಾಂತಾರ ಸಿನಿಮಾ ಮೂಲಕ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ದಂಪತಿ ಖುಷಿಯಲ್ಲಿದ್ದಾರೆ. ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ 10 ವರ್ಷದ ಪ್ರೀತಿಗೆ ವಿಶೇಷ ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ.

ಅದರ ಜೊತೆಗೆ ‘ಪ್ರಗತಿ ಶೆಟ್ಟಿ ಬರುವ ಮೊದಲು, ಪ್ರಗತಿ ನನ್ನ ಜೀವನಕ್ಕೆ ಬಂದ ಮೇಲೆ ಇನ್ನೊಂದು ರೀತಿ’ ಎಂದು ಹೇಳುತ್ತಾ ಮುದ್ದಾದ ವಿಡಿಯೋ ಮಾಡಿ, ಪತ್ನಿಗೆ ಪ್ರೀತಿಯಿಂದ ಶುಭಾಶಯ ತಿಳಿಸಿದ್ದಾರೆ. ಆ ವಿಡಿಯೊ ಜೊತೆಗೆ ‘ಪ್ರೀತಿಗೆ ಪ್ರೀತಿಯಾಗಿ, ನಗುವಿಗೆ ನಗುವಾಗಿ, ಬಿಂಬಕ್ಕೆ ಪ್ರತಿಬಿಂಬವಾಗಿ, ಕೊನೆ ಕಾಣದ ಸೇತುವೆಯಂತೆ ಸದಾ ನನಗಾಗಿ ನಿಂತ ಪ್ರೀತಿಗೆ ದಶಕದ ಸಂವತ್ಸರ’ ಎಂದು ಬರೆದುಕೊಂಡಿದ್ದಾರೆ.

ಹತ್ತನೇ ವರ್ಷದ ಪ್ರೀತಿಯನ್ನು ಆಚರಣೆ ಮಾಡುತ್ತಿರುವ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಅವರಿಗೆ ರಣ್ವಿತ್ ಮತ್ತು ರಾದ್ಯಾ ಎಂಬ ಇಬ್ಬರು ಮಕ್ಕಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.