ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವಸಿಷ್ಠ ಸಿಂಹ ನಟನೆಯ ‘Love ಲಿ’ ಚಿತ್ರಕ್ಕೆ ರಿಷಬ್‌ ಶೆಟ್ಟಿ ಸಾಥ್‌

Published 7 ಜೂನ್ 2024, 0:51 IST
Last Updated 7 ಜೂನ್ 2024, 0:51 IST
ಅಕ್ಷರ ಗಾತ್ರ

ವಸಿಷ್ಠ ಸಿಂಹ ನಟನೆಯ ‘Love ಲಿ’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಟ್ರೇಲರ್‌ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. ‌

ರವೀಂದ್ರ ಕುಮಾರ್ ನಿರ್ಮಾಣದ ಚಿತ್ರಕ್ಕೆ ಚೇತನ್ ಕೇಶವ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದಿಂದ ನಾನು ವಸಿಷ್ಠ ಅವರ ಅಭಿನಯ ಹಾಗೂ ಕಂಠಕ್ಕೆ ಅಭಿಮಾನಿಯಾಗಿದ್ದೆ‌. ಈ ಚಿತ್ರದ ಟ್ರೇಲರ್ ತುಂಬಾ ಚೆನ್ನಾಗಿದೆ. ಚಿತ್ರ ಕೂಡ ಚೆನ್ನಾಗಿರುತ್ತದೆ ಎಂಬ ಭರವಸೆ ಇದೆ‌. ಚಿತ್ರ ಯಶಸ್ವಿಯಾಗಲಿ’ ಎಂದರು ರಿಷಬ್‌ ಶೆಟ್ಟಿ.

‘ಟ್ರೇಲರ್ ನೋಡಿದಾಗ ನಿಮಗೆ ಇದು ಆ್ಯಕ್ಷನ್ ಚಿತ್ರವೇ ಅಥವಾ ಭಾವನಾತ್ಮಕ ಚಿತ್ರವೇ ಎಂಬ ಪ್ರಶ್ನೆ ಮೂಡಬಹುದು. ಚಿತ್ರ ನೋಡುವಾಗ ನಿಮಗೆ ಉತ್ತರ ಸಿಗಲಿದೆ. ಚಿತ್ರ ಜೂನ್ 14 ರಂದು ತೆರೆಗೆ ಬರಲಿದೆ’ ಎಂದರು ನಿರ್ದೇಶಕರು. 

ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಅಶ್ವಿನ್ ಕೆನ್ನೆಡಿ ಛಾಯಾಚಿತ್ರಗ್ರಹಣ ಹಾಗೂ ಹರೀಶ್ ಕೊಮ್ಮೆ ಸಂಕಲನವಿದೆ. ಸ್ಟೆಫಿ ಪಟೇಲ್ ವಸಿಷ್ಠಗೆ ಜೋಡಿಯಾಗಿದ್ದಾರೆ. ಹಿರಿಯ ನಟ ದತ್ತಣ್ಣ, ನಟಿ ನಂದು, ಸಮೀಕ್ಷ, ಬೇಬಿ ವಂಶಿಕ ಮೊದಲಾದವರು ತಾರಾಗಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT