ಬಹುತೇಕ ರಂಗಭೂಮಿ ಹಿನ್ನೆಲೆಯುಳ್ಳವರೇ ಸೇರಿ ನಿರ್ಮಿಸಿರುವ ‘ರೋಣ’ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಸತೀಶ್ ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಿ.ಕೆ.ಆರ್ ಪ್ರೊಡಕ್ಷನ್ಸ್ ನಿರ್ಮಾಣದ ಚಿತ್ರವನ್ನು ಕನ್ನಡ ಪಿಚ್ಚರ್ ಅರ್ಪಿಸುತ್ತಿದೆ.

‘ಒಂಬತ್ತು ವರ್ಷಗಳಿಂದ ಸಿನಿಮಾರಂಗದಲ್ಲಿರುವೆ. ಇದು ನನ್ನ ನಿರ್ದೇಶನದ ಮೊದಲ ಸಿನಿಮಾ. ಎರಡು ವರ್ಷಗಳ ಹಿಂದೆ ಕಥೆ ಮಾಡಿಕೊಂಡು ನಾಯಕನನ್ನು ಹುಡುಕುತ್ತಿದ್ದೆ. ಆಗ ನಾಯಕ ರಘು ಸಿಕ್ಕರು. ನಾವೆಲ್ಲ ‘ಕೆರೆಬೇಟೆ’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೆವು. ‘ರೋಣ’ ಒಂದು ಕ್ಷೇತ್ರದ ದೇವಿಯ ಕುರಿತಾದ ಕಥೆ. ರಾಜಕೀಯ, ಧಾರ್ಮಿಕ, ವಿಜ್ಞಾನ ಮುಂತಾದ ಅಂಶಗಳ ಸುತ್ತ ಕಥೆ ಸಾಗುತ್ತದೆ. ಹೊಸಕೋಟೆ ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ’ ಎಂದರು ನಿರ್ದೇಶಕರು.

ರಘು ರಾಜನಂದಗೆ ಪ್ರಕೃತಿ ಪ್ರಸಾದ್ ಜೋಡಿಯಾಗಿದ್ದಾರೆ. ಶರತ್ ಲೋಹಿತಾಶ್ವ ತಂದೆಯ ಪಾತ್ರದಲ್ಲಿದ್ದು, ಮಾಲೂರು ವಿಜಯ್, ಚಿಲ್ಲರ್ ಮಂಜು, ಬಲ ರಾಜವಾಡಿ, ಸಂಗೀತ ಅನೀಲ್ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.

ಗಗನ್ ಬದೇರಿಯ ಸಂಗೀತ, ಅರುಣ್ ಕುಮಾರ್ ಛಾಯಾಚಿತ್ರಗ್ರಹಣ, ಜ್ಞಾನೇಶ್ ಬಿ ಮಠದ್ ಸಂಕಲನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.