ಶನಿವಾರ, ಏಪ್ರಿಲ್ 17, 2021
31 °C

‘ಸಾಹೊ’ ಸಿನಿಮಾ ಬಿಡುಗಡೆ ವಿಳಂಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿನಿಮಾ ಕತೆ ಹಾಗೂ ಗುಣಮಟ್ಟದಲ್ಲಿ ಯಾವುದೇ ರಾಜಿಯಾಗುವುದಿಲ್ಲ ಎಂದು ಘೋಷಿಸಿಕೊಂಡಿರುವ ಸಾಹೋ ಚಿತ್ರತಂಡ, ಸಿನಿಮಾ ಬಿಡುಗಡೆ ದಿನಾಂಕವನ್ನು ಆಗಸ್ಟ್‌ 30ಕ್ಕೆ ಮುಂದೂಡಿದೆ. 

ಈ ಚಿತ್ರ ಆಗಸ್ಟ್‌ 15 ಸ್ವಾತಂತ್ರ್ಯೋತ್ಸವದಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿತ್ತು. ಈ ಚಿತ್ರವು ಸಾಹಸಪ್ರಧಾನ ಚಿತ್ರವಾಗಿದ್ದು, ಇದರ ಸಾಹಸ, ಆಕ್ಷನ್‌ ದೃಶ್ಯಗಳನ್ನು ವಿದೇಶದಲ್ಲಿ ಚಿತ್ರೀಕರಿಸಲಾಗಿತ್ತು. ಇದರಲ್ಲಿ ಅತಿ ಹೆಚ್ಚು ಸಾಹಸ ದೃಶ್ಯಗಳಿವೆ. ಈಚೆಗೆ ಚಿತ್ರದ ಚಿತ್ರೀಕರಣ ಮುಗಿದಿದ್ದು, ಸಂಕಲನಕ್ಕೆ ಕೊಂಚ ಸಮಯ ಬೇಕು. ಹಾಗಾಗಿ ಚಿತ್ರ ಬಿಡುಗಡೆ ದಿನಾಂಕವನ್ನು ತಂಡ ಮುಂದೂಡಿದೆ ಎನ್ನಲಾಗಿದೆ. 

‘ಚಿತ್ರದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ, ವೀಕ್ಷಕರಿಗೆ ಉತ್ತಮ ಸಿನಿಮಾ ನೀಡಬೇಕು’ ಎಂದು ಹೇಳಿಕೊಂಡಿರುವ ತಂಡ, ‘ನಾವು ವೀಕ್ಷಕರಿಗೆ ಅತ್ಯುತ್ತಮವಾದದ್ದನ್ನು ನೀಡಬೇಕು. ಇದರಲ್ಲಿ ಅತಿ ಉದ್ದದ ಆ್ಯಕ್ಷನ್‌ ದೃಶ್ಯಗಳಿವೆ. ಅವುಗಳ ಗ್ರಾಫಿಕ್‌ ಎಫೆಕ್ಟ್‌, ಎಡಿಟಿಂಗ್‌ಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದೇವೆ. ಆದರೆ ಆಗಸ್ಟ್‌ ತಿಂಗಳಲ್ಲಿಯೇ ಚಿತ್ರ ಬಿಡುಗಡೆ ಮಾಡಬೇಕು ಎಂಬ ನಿರ್ಧಾರಕ್ಕೆ ಬದ್ಧರಾಗಿದ್ದೇವೆ’ ಎಂದು ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು