ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ ತಿಂಗಳಲ್ಲಿ ‘ಸಾಲ’

Last Updated 26 ಏಪ್ರಿಲ್ 2022, 7:04 IST
ಅಕ್ಷರ ಗಾತ್ರ

ಸ್ವಸಹಾಯ ಸಂಘಗಳಲ್ಲಿ ಸಾಲ ಪಡೆದವರ ಫಜೀತಿ ಹೇಗಿರುತ್ತದೆ? ಅದು ಮಹಿಳೆಯರ ವೈಯಕ್ತಿಕ ಬದುಕಿನ ಮೇಲೆ ಮಾಡುವ ಪರಿಣಾಮ ಏನು ಎಂಬುದನ್ನು ಹೇಳಲಿದೆ ‘ಸಾಲ’.

ಅಂದಹಾಗೆ ಈ ಕಥೆ 2018ರ ಪ್ರಜಾವಾಣಿ ‘ದೀಪಾವಳಿ’ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದಿತ್ತು. ಮೂಲಕಥೆ ‘ಸಣ್ಣ ಸಾಲ’. ದುಡ್ಡನಹಳ್ಳಿ ಮಂಜುನಾಥ್‌ ಅವರು ಈ ಕಥೆ ಬರೆದವರು. ಈ ಚಿತ್ರ ಮೇಯಲ್ಲಿ ತೆರೆ ಕಾಣಲಿದೆ.

ಎಂ.ಆರ್.ನಟೇಶ್‌ಕುಮಾರ್ ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಮಹಿಳಾ ಪ್ರಧಾನ ಹಾಗೂ ಸಮಾಜಮುಖಿ ಸಿನಿಮಾ ಆಗಿದ್ದು, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಲ್ಲಿ ಮತ್ತು ಇತರ ಕಡೆ ಕಡಿಮೆ ಬಡ್ಡಿಗಾಗಿ ಸಾಲ ಪಡೆಯುವುದರಿಂದ ಹೆಣ್ಣಿನ ವೈಯಕ್ತಿಕ ಜೀವನದಲ್ಲಿ ಆಗುವ ಅನಾಹುತಗಳನ್ನು ಹಾಸ್ಯ, ಸೆಂಟಿಮೆಂಟ್ ಮೂಲಕ ತೋರಿಸಲಾಗಿದೆ. ಬಡ, ಮಧ್ಯಮ ವರ್ಗದದವರ ಜೀವನದ ವಾಸ್ತವಿಕತೆಗೆ ಬಹಳ ಹತ್ತಿರವಾಗಿದೆ ಎಂದಿದೆ ಚಿತ್ರ ತಂಡ.

ತಾರಾಗಣದಲ್ಲಿ ಸಿಂಚನಾಗೌಡ, ಭೈರವಿ ಬೀರೂರು, ಸುನಿಲ್‌ ಕುಮಾರ್, ಸುಹಾಸ ಆರಾಧ್ಯ, ಸತೀಶ್‌ಗೌಡ, ಮೈತ್ರಿ, ಮಂಜು ನಂಜನಗೂಡು, ಮುನಿ, ದೇವಿಪ್ರಸಾದ್, ಧನುಷ್ ಇದ್ದಾರೆ. ವಿನುಮನಸು ಸಂಗೀತ, ಕೃಷ್ಣಸಾರಥಿ ಛಾಯಾಗ್ರಹಣ, ವಿನಯ್‌ಕುಮಾರ್ ಕೂರ್ಗ್ ಸಂಕಲನವಿದೆ. ಕುಣಿಗಲ್, ಮೈಸೂರು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಸಿರಿ ಮ್ಯೂಸಿಕ್ ಹೊರತಂದಿರುವ ಮೂರು ಹಾಡುಗಳ ಪೈಕಿ ಎರಡು ಗೀತೆಗಳಿಗೆ ಮಾನಸಹೊಳ್ಳ ಧ್ವನಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT