ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್‌ನತ್ತ ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್?

Last Updated 25 ಏಪ್ರಿಲ್ 2022, 15:29 IST
ಅಕ್ಷರ ಗಾತ್ರ

ಮುಂಬೈ: ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಅವರು ವಿಶಿಷ್ಟ ಕಾರಣಗಳಿಗಾಗಿ ಆಗಾಗ ಸುದ್ದಿಯಾಗುತ್ತಿರುತ್ತಾರೆ.

ಆಕೆಯ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಸ್ಟೈಲಿಶ್ ಪೋಸ್ಟ್‌ಗಳು, ಆಕರ್ಷಕ ಚಿತ್ರಗಳು ಮತ್ತು ಪ್ರವಾಸದ ನೆನಪುಗಳಿಂದ ತುಂಬಿಹೋಗಿದೆ. ಡಿಸೆಂಬರ್ 2021ರಲ್ಲಿ ಅವರು ಮಾಡೆಲಿಂಗ್‌ಗೆ ಪದಾರ್ಪಣೆ ಮಾಡಿದಾಗ, ಸಾರಾ ಇನ್ನೇನು ಬಾಲಿವುಡ್‌ಗೆ ಬಂದೇಬಿಟ್ಟರು ಎಂಬ ವದಂತಿಗಳು ಹಬ್ಬಿದ್ದವು. ಸದ್ಯ, ಆ ಕಾಲ ಸನ್ನಿಹಿತವಾಗಿದೆ ಎಂಬ ಸೂಚನೆಗಳು ಬರುತ್ತಿವೆ.

ಬಾಲಿವುಡ್‌ ಲೈಫ್‌ ಜಾಲತಾಣಕ್ಕೆ ಮೂಲವೊಂದು ನೀಡಿರುವ ಮಾಹಿತಿ ಪ್ರಕಾರ, ‘ಸಾರಾ ಶೀಘ್ರದಲ್ಲೇ ಬಾಲಿವುಡ್‌ಗೆ ಪದಾರ್ಪಣೆ ಮಾಡಬಹುದು. ಅವರು ನಟನೆಯಲ್ಲಿ ತುಂಬಾ ಆಸಕ್ತಿ ಹೊಂದಿದ್ದಾರೆ. ಕೆಲವು ಜಾಹೀರಾತುಗಳನ್ನು ಮಾಡುವ ಮೂಲಕ ಅವರು ನಟನಾ ಪಾಠಗಳನ್ನು ಸಹ ಕಲಿತುಕೊಂಡಿದ್ದಾರೆ’.

‘ಹೈ ಪ್ರೊಫೈಲ್ ಎಂಬಂತೆ ಎಲ್ಲಿಯೂ ತೋರಿಸಿಕೊಳ್ಳದ ಸಾರಾ, ತನ್ನ ನಟನಾ ಕೌಶಲ್ಯದ ಮೂಲಕ ಪ್ರೇಕ್ಷಕರನ್ನು ಅಚ್ಚರಿಗೊಳಿಸಬಹುದು. ಅವರು ಅತ್ಯಂತ ಪ್ರತಿಭಾವಂತರಾಗಿದ್ದು, ಅವರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಆಕೆಯ ಪೋಷಕರು ಬೆಂಬಲ ನೀಡುತ್ತಾರೆ’ ಎಂದು ಮೂಲ ಹೇಳಿದೆ.

ಡಿಸೆಂಬರ್ 2021ರಲ್ಲಿ, ನಟಿ ಬನಿತಾ ಸಂಧು ಮತ್ತು ತಾನಿಯಾ ಶ್ರಾಫ್ ಅವರೊಂದಿಗೆ ಸಾರಾ ಕಾಣಿಸಿಕೊಂಡಿರುವ ವಿಡಿಯೊ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದು ಸಾರಾ ಅವರ ಚೊಚ್ಚಲ ಮಾಡೆಲಿಂಗ್ ವಿಡಿಯೊ ಆಗಿದ್ದು, ಜಾಲತಾಣಿಗರನ್ನು ಮಂತ್ರಮುಗ್ಧಗೊಳಿಸಿತ್ತು.

ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಶಾಲಾ ಶಿಕ್ಷಣ ಮುಗಿಸಿದ ಸಾರಾ, ಲಂಡನ್‌ನಲ್ಲಿ ಪದವಿ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT