ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೈಫ್‌ ಬೆಸ್ಟ್‌ ‘ಅಬ್ಬಾ’ ಅಂತೆ!

Published 22 ಜೂನ್ 2024, 5:23 IST
Last Updated 22 ಜೂನ್ 2024, 5:23 IST
ಅಕ್ಷರ ಗಾತ್ರ

ಫಾದರ್ಸ್‌ ಡೇ ಬೆನ್ನಲ್ಲಿಯೇ ಸೈಫ್‌ ಅಲಿಖಾನ್‌ ಬೆಸ್ಟ್‌ ಅಬ್ಬಾ (ಅಪ್ಪ) ಅಂತ ಮಗಳು ಸಾರಾ ಅಲಿ ಖಾನ್‌ ಮತ್ತು ಇಬ್ರಾಹಿಂ ಅಲಿ ಖಾನ್‌ ಇಬ್ಬರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಫಾದರ್ಸ್‌ ಡೇಗೆ ಇಬ್ರಾಹಿಂ ಅಪ್ಪನೊಂದಿಗೆ ತನ್ನ ಬಾಲ್ಯದ ಚಿತ್ರವನ್ನು ಹಂಚಿಕೊಂಡಿದ್ದು, ನನ್ನ ಅಬ್ಬಾ ಯಾವತ್ತಿಗೂ ನನ್ನ ಶಕ್ತಿ ಎಂದು ಹೇಳಿಕೊಂಡಿದ್ದಾರೆ. ಸಾರಾ ಅವರಪ್ಪನೊಂದಿಗೆ ಟ್ವಿನ್ನಿಂಗ್‌ ಕಾಸ್ಟ್ಯೂಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಇಬ್ಬರೂ ಕಪ್ಪು ಸೂಟ್‌ನಲ್ಲಿ ಒಂದು ಕಡೆ ಮಿಂಚುತ್ತಿದ್ದರೆ ಇನ್ನೊಂದು ಕಡೆ ಜೈಲರ್‌ ಉಡುಗೆಯಲ್ಲಿ ಸಾರಾ, ಕೈದಿ ಉಡುಗೆಯಲ್ಲಿ ಸೈಫ್‌ ನಿಂತಿರುವ ಫೋಟೊ ಹಂಚಿಕೊಂಡಿದ್ದಾರೆ. ಜೊತೆಗೆ ಫ್ರೆಂಡ್‌, ಫಿಲಾಸಫರ್‌, ಗೈಡ್‌ ಅಬ್ಬಾ ಅಂತಲೂ ಬಣ್ಣಿಸಿದ್ದಾರೆ.

ಅಮೃತಾ ಸಿಂಗ್ ಮತ್ತು ಸೈಫ್‌ ಅಲಿ ಖಾನ್‌ ಮಕ್ಕಳಾಗಿರುವ ಸಾರಾ ಮತ್ತು ಇಬ್ರಾಹಿಂ, ತಮ್ಮ ತಂದೆಯ ಕುರಿತ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಅಮೃತಾರಿಂದ ವಿಚ್ಛೇದನ ಪಡೆದಿರುವ ಸೈಫ್‌ ಅಲಿ ಖಾನ್‌ ಕರೀನಾ ಕಪೂರ್‌ ಅವರೊಂದಿಗೆ ಮದುವೆಯಾಗಿದ್ದಾರೆ.

ಸದ್ಯ ಲಂಡನ್‌ನಲ್ಲಿ ಕರೀನಾ ಕಪೂರ್‌ ತೈಮೂರ್‌ ಮತ್ತು ಜೇ ಜೊತೆಗೆ ರಜೆಯಲ್ಲಿರುವ ಸೈಫ್‌ ಅಲಿ ಖಾನ್‌ ಒಳ್ಳೆಯ ಫಾದರ್‌ ಎಂದು ಕರೀನಾ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕರೀನಾ ಕಪೂರ್‌ ಸೈಫ್‌ ಜೊತೆಗೆ ಪೀಟ್ಜಾ ಸವಿಯುವ, ಜೊತೆಗೆ ನಡೆಯುವ ಚಿತ್ರಗಳನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT