ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'Salaar' Movie | ದೂಳೆಬ್ಬಿಸಿದ ಪ್ರಭಾಸ್‌: ಮೊದಲ ದಿನ ₹178 ಕೋಟಿ ಗಳಿಕೆ

collection day 1: Prabhas-starrer moves earns Rs 178 crore in India on opening day
Published 23 ಡಿಸೆಂಬರ್ 2023, 10:26 IST
Last Updated 23 ಡಿಸೆಂಬರ್ 2023, 10:26 IST
ಅಕ್ಷರ ಗಾತ್ರ

ಬೆಂಗಳೂರು: ತೆಲುಗಿನ ಪ್ರಭಾಸ್‌ ನಟಿಸಿ, ‘ಕೆ.ಜಿ.ಎಫ್‌’ ಖ್ಯಾತಿಯ ಪ್ರಶಾಂತ್‌ ನೀಲ್‌ ನಿರ್ದೇಶಿಸಿರುವ ‘ಸಲಾರ್‌’ ಚಿತ್ರ ನಿನ್ನೆ ಬಿಡುಗಡೆಯಾಗಿದ್ದು ಜಾಗತಿಕವಾಗಿ ಭರ್ಜರಿ ಓಪನಿಂಗ್‌ ಪಡೆದುಕೊಂಡಿದೆ.

ಬಾಕ್ಸ್‌ಆಫೀಸ್‌ನಲ್ಲಿ ‘ಸಲಾರ್‌‘ ದಾಖಲೆಗಳು ಪುಡಿ ಪುಡಿ ಮಾಡಿದ್ದು ಜಾಗತಿಕವಾಗಿ ಈ ಚಿತ್ರದ ಒಂದು ದಿನದ ಗಳಿಕೆ ₹ 178.7 ಕೋಟಿ (ಪ್ರಾಥಮಿಕ ಮಾಹಿತಿ) ಎಂದು ನಟ ಪೃಥ್ವಿರಾಜ್‌ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮತ್ತೊಬ್ಬ ಸಿನಿಮಾ ವಹಿವಾಟು ವಿಶ್ಲೇಷಕ ರಮೇಶ್ ಬಾಲಾ ಅವರು ಸಹ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಸಿನಿಮಾ ವಹಿವಾಟು ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

 ಈ ವರ್ಷಾಂತ್ಯದಲ್ಲಿ ಸಲಾರ್‌ ಸಿನಿಮಾ ಬಿಡುಗಡೆಯಾಗಿದೆ. ಭಾರತ ಮಾತ್ರವಲ್ಲದೇ ಅಮೆರಿಕ, ಯುರೋಪ್‌, ಆಸ್ಟ್ರೇಲಿಯಾ ಸೇರಿದಂತೆ ಅರಬ್‌ ದೇಶಗಳಲ್ಲಿ ಸಿನಿಮಾ ಬಿಡುಗಡೆಯಾಗಿದ್ದು ಭರ್ಜರಿ ಓಪನಿಂಗ್‌ ಪಡೆದುಕೊಂಡಿದೆ. 

ಭಾರತದಲ್ಲಿ ಈ ಚಿತ್ರ ಮೊದಲ ದಿನ ₹ 95 ಕೋಟಿ ವಹಿವಾಟು ನಡೆಸಿದೆ. ಈ ಪೈಕಿ ತೆಲುಗು ಪ್ರದೇಶಗಳಲ್ಲಿ ಶೇಕಡ 80ರಷ್ಟು ಗಳಿಕೆ ಕಂಡಿದೆ ಎಂದು ಮೂಲಗಳು ತಿಳಿಸಿವೆ. ಜಾಗತಿಕವಾಗಿ ಈ ಸಿನಿಮಾ ಒಟ್ಟಾರೆ ₹ 178.7 ಕೋಟಿ ವಹಿವಾಟು ನಡೆಸಿದೆ.

ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ₹ 70 ಕೋಟಿ, ಕರ್ನಾಟಕದಲ್ಲಿ ₹12 ಕೋಟಿ, ಕೇರಳದಲ್ಲಿ ₹ 5 ಕೋಟಿ ಕಲೆಕ್ಷನ್ ಮಾಡಿದೆ. 

ಶಾರುಕ್‌ ಖಾನ್ ಅಭಿನಯದ ಪಠಾಣ್, ಜವಾನ್ ಮತ್ತು ರಣಬೀರ್ ಕಪೂರ್ ಅವರ ಅನಿಮಲ್ ಸಿನಿಮಾವನ್ನು ಸೋಲಿಸಿ 2023ರಲ್ಲಿ ಅತಿದೊಡ್ಡ ಓಪನಿಂಗ್‌ ಪಡೆದ ಸಿನಿಮಾ ಎಂಬ ಖ್ಯಾತಿ ಪಡೆದಿದೆ. ಭಾರತದಲ್ಲಿ ಪಠಾಣ್‌ ಮೊದಲ ದಿನ ₹ 57 ಕೋಟಿ, ಜವಾನ್ ₹ 75 ಕೋಟಿ ಮತ್ತು ಅನಿಮಲ್ ₹ 63 ಕೋಟಿ ವಹಿವಾಟು ನಡೆಸಿದ್ದವು. ಈ ಎಲ್ಲಾ ದಾಖಲೆಗಳನ್ನು ಮುರಿದ ‘ಸಲಾರ್‌‘ ಮೊದಲ ದಿನ ₹ 95 ಕೋಟಿ ಗಳಿಸಿದೆ.

ಸದ್ಯ ಸಲಾರ್‌ ಸಿನಿಮಾ ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ವಾರಾಂತ್ಯ ಹಾಗೂ ಕ್ರಿಸ್‌ಮಸ್‌ ರಜೆಯೂ ಇದಕ್ಕೆ ಕಾರಣ ಎಂದು ಬಾಕ್ಸ್‌ಆಫೀಸ್‌ ಮೂಲಗಳು ತಿಳಿಸಿವೆ. 

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಚಿತ್ರದಲ್ಲಿ ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್‌ ಮುಖ್ಯಭೂಮಿಕೆಯಲ್ಲಿದ್ದಾರೆ. ತಾಂತ್ರಿಕವಾಗಿ ‘ಕೆಜಿಎಫ್‌’ ತಂಡವೇ ಇದೆ. ರವಿ ಬಸ್ರೂರು ಸಂಗೀತ, ಭುವನ್‌ ಗೌಡ ಛಾಯಾಗ್ರಹಣ ಚಿತ್ರಕ್ಕಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT