ಶನಿವಾರ, ಸೆಪ್ಟೆಂಬರ್ 25, 2021
28 °C

55ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಾಲಿವುಡ್‌ನ ಖ್ಯಾತ ನಟ ಸಲ್ಮಾನ್‌ ಖಾನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಭಾಯಿಜಾನ್’ ಎಂದೇ ಕರೆಸಿಕೊಳ್ಳುವ ಬಾಲಿವುಡ್‌ನ ಖ್ಯಾತ ನಟ ಸಲ್ಮಾನ್ ಖಾನ್ ಇಂದು 55ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಸಲ್ಲುಮಿಯಾ ಹುಟ್ಟುಹಬ್ಬ ಎಂದರೆ ಕೇವಲ ಕುಟುಂಬ ಹಾಗೂ ಸ್ನೇಹಿತರು ಮಾತ್ರವಲ್ಲ ಅಭಿಮಾನಿಗಳಿಗೂ ಸಡಗರ. ದೇಶದಾದ್ಯಂತ ಅಪಾರ ಅಭಿಮಾನಿಗಳು ಹೊಂದಿರುವ ಸಲ್ಲು ಇಂದಿಗೂ ‘ಮೋಸ್ಟ್ ಬಾಚ್ಯುಲರ್‌’ ಎನ್ನಿಸಿಕೊಂಡಿದ್ದಾರೆ. ಪ್ರತಿ ವರ್ಷ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಶುಭ ಕೋರುವ ಸಲುವಾಗಿ ಮುಂಬೈನಲ್ಲಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ ಎದುರು ಅಭಿಮಾನಿಗಳ ಗುಂಪು ಸೇರುತ್ತಿತ್ತು.

ಆದರೆ ಈ ವರ್ಷ ಹುಟ್ಟುಹಬ್ಬಕ್ಕೆ ಕೆಲ ದಿನಗಳು ಇರುವಾಗಲೇ ಅಭಿಮಾನಿಗಳಲ್ಲಿ ಸಲ್ಮಾನ್ ಮನವಿ ಮಾಡಿದ್ದರು. ಅಲ್ಲದೇ ಕೊರೊನಾ ಕಾರಣದಿಂದ ಯಾರೂ ತಮ್ಮ ಮನೆಯ ಬಳಿ ಬರಬೇಡಿ ಎಂದು ವಿನಂತಿಸಿಕೊಂಡಿದ್ದರು.

‘ಪ್ರತಿವರ್ಷದ ಹುಟ್ಟುಹಬ್ಬಕ್ಕೆ ನೀವು ನನ್ನ ಮೇಲಿನ ಪ್ರೀತಿ, ಅಭಿಮಾನದಿಂದ ಮನೆಯ ಬಳಿ ಸೇರುತ್ತಿದ್ದಿರಿ, ಜೊತೆಗೆ ನಿಮ್ಮ ಶುಭಾಶಯಗಳ ಮೂಲಕ ಹುಟ್ಟುಹಬ್ಬಕ್ಕೆ ಇನ್ನಷ್ಟು ಸಡಗರ ಸೇರುತ್ತಿತ್ತು. ಆದರೆ ಈ ಬಾರಿ ಕೋವಿಡ್ ಇರುವ ಕಾರಣ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅಗತ್ಯವಾಗಿದೆ. ಹಾಗಾಗಿ ಯಾರೂ ಮನೆಯ ಬಳಿ ಬಂದು ಗುಂಪು ಸೇರಬೇಡಿ’ ಎಂದು ಮನೆಯ ಹೊರಗೆ ನೋಟಿಸ್ ಅಂಟಿಸಿದ್ದಾರೆ.

ಸಲ್ಲು ಹುಟ್ಟುಹಬ್ಬಕ್ಕೆ ಬಾಲಿವುಡ್‌ ಖ್ಯಾತ ನಟ–ನಟಿಯರು ಶುಭಾಶಯ ಕೋರಿದ್ದಾರೆ.

ಇದನ್ನೂ ಓದಿ: 

ನಟಿ ಕರೀನಾ ಕಪೂರ್ ತಮ್ಮ ಸಲ್ಲು ಜೊತೆಗಿರುವ ಫೋಟೊ ಹಂಚಿಕೊಂಡು ‘ಹುಟ್ಟುಹಬ್ಬದ ಶುಭಾಶಯಗಳು, ಆದಷ್ಟು ಬೇಗ ಮದುವೆ ಆಗು’ ಎಂದು ಬರೆದುಕೊಂಡಿದ್ದಾರೆ.

ಬಾಲಿವುಡ್‌ನಲ್ಲಿ ಲಾಕ್‌ಡೌನ್‌ ಬಳಿಕ ಮೊದಲು ಶೂಟಿಂಗ್‌ ಆರಂಭಿಸಿದ ನಟ ಸಲ್ಮಾನ್‌. ಇವರು ಪ್ರಭುದೇವ ನಿರ್ದೇಶನದ ‘ರಾಧೆ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇವರೊಂದಿಗೆ ದಿಶಾ ಪಟಾನಿ ತೆರೆ ಹಂಚಿಕೊಂಡಿದ್ದಾರೆ. 2020ರ ಮೇ 22ಕ್ಕೆ ರಾಧೆ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ ಕೋವಿಡ್‌–19 ಕಾರಣದಿಂದ ಶೂಟಿಂಗ್ ಮುಂದಕ್ಕೆ ಹಾಕಲಾಗಿತ್ತು.

ಸದ್ಯ ಸಲ್ಮಾನ್ ಬಿಗ್‌ ಬಾಸ್ 14ನೇ ಆವೃತ್ತಿಯನ್ನು ನಡೆಸಿಕೊಡುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು