ಬೆಂಗಳೂರು: ತೆಲುಗು ನಟ ನಾಗ ಚೈತನ್ಯ ಜತೆಗಿನ ವಿವಾಹ ಮುರಿದು ವಿಚ್ಛೇದನ ಪಡೆದುಕೊಂಡು ಸುದ್ದಿಯಾಗಿದ್ದ ನಟಿ ಸಮಂತಾ ಈಗ ಮತ್ತೊಮ್ಮೆ ಸದ್ದು ಮಾಡಿದ್ದಾರೆ.
ನಾಗ ಚೈತನ್ಯಗೆ ಡಿವೋರ್ಸ್ ನೀಡಿ ಬೇರ್ಪಟ್ಟ ಬಳಿಕ ಸಮಂತಾ, ತಮ್ಮ ಸಾಮಾಜಿಕ ತಾಣಗಳ ಖಾತೆಯಲ್ಲಿದ್ದ ‘ಅಕ್ಕಿನೇನಿ’ ಹೆಸರನ್ನ ಅಳಿಸಿ ಹಾಕಿದ್ದರು. ಬಳಿಕ ತಮ್ಮ ಪೂರ್ತಿ ಹೆಸರು ಸಮಂತಾ ರುತ್ ಪ್ರಭು ಎಂದಷ್ಟೇ ಉಳಿಸಿಕೊಂಡಿದ್ದರು.
ಈ ಬಾರಿ ಸಮಂತಾ, ನಾಗ ಚೈತನ್ಯ ಜತೆಗಿನ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಂ ಮತ್ತು ಇತರ ಸಾಮಾಜಿಕ ತಾಣಗಳ ಖಾತೆಯಿಂದ ತೆಗೆದುಹಾಕಿದ್ದಾರೆ.
ನಾಗಚೈತನ್ಯ ಅವರ ನೆನಪನ್ನು ಅಳಿಸಿ ಹಾಕಲು ಸಮಂತಾ ಮುಂದಾಗಿದ್ದು, ಗೆಳೆಯರ ಜತೆ ಒಟ್ಟಿಗೆ ಇರುವ ಫೋಟೊಗಳನ್ನು ಮಾತ್ರ ಹಾಗೆಯೇ ಉಳಿಸಿಕೊಂಡಿದ್ದಾರೆ.
ಉಳಿದಂತೆ, ನಾಗ ಚೈತನ್ಯ ಮತ್ತು ಸಮಂತಾ ಇಬ್ಬರೂ ಜತೆಯಾಗಿ ಕಾಣಿಸಿಕೊಂಡಿದ್ದ ಎಲ್ಲ ಫೋಟೊ, ಪೋಸ್ಟ್‌ಗಳನ್ನು ಸಮಂತಾ ಡಿಲೀಟ್ ಮಾಡುವ ಮೂಲಕ ಸಂಬಂಧದ ನೆನಪನ್ನು ಸಂಪೂರ್ಣವಾಗಿ ಅಳಿಸಿಹಾಕಲು ಮುಂದಾಗಿದ್ದಾರೆ.