ಭಾನುವಾರ, ಮಾರ್ಚ್ 26, 2023
24 °C

ಟ್ರೆಂಡ್ ಆದ ಸಮಂತಾ ಡ್ರೆಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌ನಲ್ಲಿ ನಡೆದ ತೆಲುಗು ವಾಹಿನಿಯ ಸಿನಿ ಅವಾರ್ಡ್ಸ್‌ ಕಾರ್ಯಕ್ರಮಕ್ಕೆ ಸಮಂತಾ ಅಕ್ಕಿನೇನಿ ತೊಟ್ಟು ಬಂದಿದ್ದ ಹಳದಿ ಬಣ್ಣದ ಲೇಸ್‌ ಉಡುಪು ಈಗ ಹೊಸ ಟ್ರೆಂಡ್‌ ಸೃಷ್ಟಿಸಿದೆ.

 
 
 
 

 
 
 
 
 
 
 
 
 

💓 #zeeawards #superdeluxe #vaembu #2020 🙌🤓

A post shared by Samantha Akkineni (@samantharuthprabhuoffl) on

ಅರೆ ಪಾರದರ್ಶಕ ತಿಳಿ ಹಳದಿ ಬಣ್ಣದ ಲೇಸ್‌ ಉಡುಪು ಸಮಂತಾ ಸೌಂದರ್ಯವನ್ನು ಇಮ್ಮಡಿಗೊಳಿಸಿತ್ತು. ಎಲ್ಲರ ಗಮನ ಸೆಳೆದ ತಿಳಿಹಾಲುಗಲ್ಲದ ಈ ಬೆಡಗಿ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದರು. ಈ ಧಿರಿಸಿನಲ್ಲಿರುವ ಅವರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. 

ಎಸೆಮಿಟ್ರಿಕ್‌ ಲೈನ್ ಕಟ್‌ ಹೊಂದಿರುವ ಯೆಲ್ಲೊ ಓಕ್ ಬಣ್ಣದ ಲೇಸ್‌ ಟಾಪ್‌ ತಯಾರಿದ್ದು ಜೊನಾಥನ್ ಸಿಮ್‌ಖೈ ಫ್ಯಾಷನ್ ಹೌಸ್‌. ಈ ಬಟ್ಟೆಯ ಬೆಲೆ ₹95 ಸಾವಿರ. ಇದಕ್ಕೆ ಹೊಂದುವ ಹಳದಿ ಬಣ್ಣದ ₹73 ಸಾವಿರದ ಲೆದರ್‌ನ ಪಂಪ್‌ ಪಾಂಯಿಟ್‌ ಹೀಲ್ಡ್‌ ಶೂ ಧರಿಸಿದ್ದರು. ಈ ಶೂ ಮನೊಲೊ ಬ್ಲಾಹ್ನಿಕ್ ಬ್ರಾಂಡ್‌ನದ್ದು.

ತಮ್ಮ ದೇಹ ಸಿರಿ ಚಂದ ಕಾಣಿಸುವಾಗ ಹೆಚ್ಚಿನ ಆಭರಣಗಳ ಅಗತ್ಯವಿಲ್ಲ ಎಂಬಂತೆ ಸಮಂತಾ ಯಾವುದೇ ಆಭರಣ ಧರಿಸಿರಲಿಲ್ಲ. ಕಿವಿಗೆ ಹೌಸ್ ಆಫ್ ಅಯಾಂತ್‌ ಬ್ರಾಂಡ್‌ನ ಹರಳಿನ ಆಕರ್ಷಕ ಓಲೆ ಧರಿಸಿದ್ದರು. ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಕಾಕ್‌ಟೇಲ್‌ ಲುಕ್‌ನಲ್ಲಿ ಬಂದ ಸಮಂತಾ ‘ಓ ಬೇಬಿ’, ‘ಮಜಿಲಿ’ ಸಿನಿಮಾಗಳಿಗೆ ಅತ್ತ್ಯುತ್ತಮ ನಟಿ ಪ್ರಶಸ್ತಿ ಪಡೆದರು.

 
 
 
 

 
 
 
 
 
 
 
 
 

Pc @chayakkineni 💚

A post shared by Samantha Akkineni (@samantharuthprabhuoffl) on

ಇದನ್ನೂ ಓದಿ: ಸಮಂತಾ, ಶರ್ವಾನಂದ್‌ ಜೋಡಿಯ ‘96

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು