ಗುರುವಾರ , ಮೇ 26, 2022
23 °C

‘ಪುಷ್ಪ’ ಚಿತ್ರದಲ್ಲಿ ಮಾದಕ ನೃತ್ಯ: ಸಮರ್ಥಿಸಿಕೊಂಡ ನಟಿ ಸಮಂತಾ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Samantha Ruth Prabhu

ಬೆಂಗಳೂರು: ನಟಿ ಸಮಂತಾ ರುತ್ ಪ್ರಭು ಅವರು ಅಲ್ಲು ಅರ್ಜುನ್ ನಟನೆಯ ‘ಪುಷ್ಪ‘ ಚಿತ್ರದಲ್ಲಿ ‘ಊ ಅಂಟಾವಾ’ ಎಂಬ ಐಟಂ ಡ್ಯಾನ್ಸ್‌ನಲ್ಲಿ ಕುಣಿದು ಸುದ್ದಿಯಾಗಿದ್ದರು.

ಆದರೆ, ಸಮಂತಾ ಅವರ ಮಾದಕ ನೃತ್ಯಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು.

ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದ ಸಮಂತಾ ಅವರು ವಿರೋಧದ ಮಾತುಗಳನ್ನು ಕೇಳುವ ಜತೆಗೆ ಟ್ರೋಲ್‌ಗೆ ಒಳಗಾಗಿದ್ದರು.

ಟೀಕೆಗಳಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಉತ್ತರಿಸಿರುವ ಅವರು, ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

‘ನಾನು ಉತ್ತಮವಾಗಿ ನಟನೆ ಮಾಡಿದ್ದೇನೆ, ಕೆಟ್ಟದಾಗಿಯೂ ನಟಿಸಿದ್ದೇನೆ, ಒಮ್ಮೊಮ್ಮೆ ತಮಾಷೆ, ಮಗದೊಮ್ಮೆ ಗಂಭೀರವಾಗಿರುತ್ತೇನೆ. ಚಾಟ್ ಶೋನ ನಿರೂಪಕಿಯೂ ಆಗಿದ್ದೆ. ಮಾಡುವ ಎಲ್ಲ ಕೆಲಸಗಳಲ್ಲೂ ಉತ್ತಮ ಸಾಧನೆ ಮಾಡಲು ನಾನು ನಿಜವಾಗಿಯೂ ಶ್ರಮಿಸುತ್ತೇನೆ. ಅದೇ ರೀತಿ, ಮಾದಕವಾಗಿ ಕಾಣುವುದು ಮುಂದಿನ ಹಂತದ ಪರಿಶ್ರಮವಾಗಿದೆ‘ ಎಂದು ಅವರು ಹೇಳಿದ್ಧಾರೆ.

ಸಮಂತಾ ಅವರ ಈ ನಿಲುವಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು