ವಿಡಿಯೊ | ‘ಹೂ ಅಂತಿಯಾ ಮಾವ..’ ಡ್ಯಾನ್ಸ್ ಹಿಂದಿನ ಕಷ್ಟವನ್ನು ವಿವರಿಸಿದ ಸಮಂತಾ

ಬೆಂಗಳೂರು: ನಟಿ ಸಮಂತಾ ರುತ್ ಪ್ರಭು ಅವರು ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಸುಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ಪುಷ್ಪ’ ಸಿನಿಮಾದ ‘ಹೂ ಅಂತಿಯಾ ಮಾವ.. ಊ ಊ ಅಂತಿಯಾ’ ಹಾಡಿಗೆ ಸಮಂತಾ ಮೈ ಚಳಿ ಬಿಟ್ಟು ಸೊಂಟ ಬಳುಕಿಸಿದ್ದಾರೆ.
ಸಿನಿಮಾ ಗೆಲುವಿನಲ್ಲಿ ಚಿತ್ರದ ವಿಶೇಷ ಹಾಡು ಪ್ರಮುಖ ಪಾತ್ರ ವಹಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ಹಾಡಿಗೆ ಡ್ಯಾನ್ಸ್ ಮಾಡುವುದು ಸುಲಭದ ಮಾತಾಗಿರಲಿಲ್ಲ ಎಂದು ಸಮಂತಾ ವಿಡಿಯೊದಲ್ಲಿ ವಿವರಿಸಿದ್ದಾರೆ.
ಡ್ಯಾನ್ಸ್ ಹೇಳಿಕೊಡುತ್ತಿರುವ ಯಾರೂ ಕೂಡ ಬೆವರುತ್ತಿರಲಿಲ್ಲ. ಆದರೆ, ಸಮಂತಾ ಮುಖದಲ್ಲಿ ಬೆವರು ನೀರು ಹರಿದಂತೆ ಹರಿದು ಬರುತ್ತಿತ್ತು. ಅಲ್ಲದೆ, ತಾವು ತುಂಬಾ ಸುಸ್ತಾಗಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಸದ್ಯ, ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 9.71 ಲಕ್ಷಕ್ಕೂ ಅಧಿಕ ಮಂದಿ ವಿಡಿಯೊ ವೀಕ್ಷಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯುಟ್ಯೂಬ್‌ನಲ್ಲಿ ತೆಲುಗಿನ ‘ಊ ಅಂಟಾವಾ ಮಾವ..’ ಹಾಡು ಬರೋಬ್ಬರಿ 12.17 ಕೋಟಿ ವೀಕ್ಷಣೆ ಕಂಡಿದೆ.
ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ಕಾಣಿಕೊಂಡಿದ್ದಾರೆ. ಸದ್ಯ ಯಶಸ್ಸು ಗಳಿಸಿರುವ ಈ ಚಿತ್ರ ಈವರೆಗೆ ₹306 ಕೋಟಿಗೂ ಹೆಚ್ಚು ಹಣ ಗಳಿಸಿದೆ.
ಇದನ್ನೂ ಓದಿ... 'ಪುಷ್ಪ' ಹಾಡು ಕೇಳಿ: ಬೋಲ್ಡ್ ಲುಕ್‌ನಲ್ಲಿ ’ಹೂ ಅಂತಿಯಾ ಮಾಮ' ಅಂದ್ರು ಸಮಂತಾ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.