ಬುಧವಾರ, ಮಾರ್ಚ್ 29, 2023
30 °C

ಸಮಂತಾ ಗೆಳೆಯ ಪ್ರೀತಂಗೆ ಬೆದರಿಕೆ ಕರೆಗಳು?

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಚಾಯ್(ನಾಗಚೈತನ್ಯ )–ಸಮಂತಾ ಸಂಬಂಧ ಡಿವೋರ್ಸ್‌ ಮೂಲಕ ಅಂತ್ಯವಾದ ಬಳಿಕ ಸಮಂತಾರ ಆತ್ಮೀಯ ಗೆಳೆಯ, ಫ್ಯಾಶನ್ ಡಿಸೈನರ್ ಪ್ರೀತಮ್ ಜುಕಾಲ್‌ಕರ್ ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ವರದಿಯಾಗಿದೆ.

ನಾಗಚೈತನ್ಯ ಅಭಿಮಾನಿಗಳು ಪ್ರೀತಂ ಜುಕಾಲ್‌ಕರ್ ಅವರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಪ್ರೀತಂ ಆಪ್ತರು ಆರೋಪಿಸಿದ್ದಾರೆ. ಆದರೆ ಇಲ್ಲಿಯವರೆಗೂ ಪ್ರೀತಮ್‌ ಯಾವುದೇ ದೂರು ದಾಖಲಿಸಿಲ್ಲ. ಹಾಗೇ ಸಾಮಾಜಿಕ ಜಾಲತಾಣಗಳಲ್ಲೂ ಬೆದರಿಕೆ ಬಂದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

ಪ್ರೀತಂ ಹಾಗೂ ಸಮಂತಾ ನಡುವೆ ಆತ್ಮೀಯವಾದ ಸಲುಗೆ ಇರುವುದೇ ವಿಚ್ಛೇದನಕ್ಕೆ ಕಾರಣ ಎಂದು ಅಕ್ಕಿನೇನಿ ಅಭಿಮಾನಿಗಳು ಬಲವಾಗಿ ನಂಬಿದ್ದಾರೆ. ಹಾಗೇ ಕೆಲ ಯುಟ್ಯೂಬರ್‌ಗಳು ಕೂಡ ಪ್ರೀತಂ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಪ್ರೀತಂ ಆಪ್ತರು ದೂರಿದ್ದಾರೆ.

ತಮ್ಮ ಮತ್ತು ಸಮಂತಾ ನಡುವಿನ ಸಂಬಂಧದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರುವವರ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಪ್ರೀತಂ, ಚಾಯ್–ಸಮಂತಾ ಬೇರೆ ಬೇರೆಯಾಗಿದ್ದಕ್ಕೆ ನನಗೆ ಕೆಲವರು ಮಾನಸಿಕ ಕಿರುಕುಳ ಕೊಡುತ್ತಿದ್ದಾರೆ ಎಂದು ಕೆಲವು ದಿನಗಳ ಹಿಂದೆ ನೋವು ತೋಡಿಕೊಂಡಿದ್ದರು.

ಹಲವು ವರ್ಷಗಳಿಂದ ಪ್ರೀತಂ ಅವರು ಸಮಂತಾ ಅವರಿಗೆ ವಸ್ತ್ರ ವಿನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರೀತಂ ಅವರ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಸಮಂತಾ ಫೋಟೊಗಳೇ ಹೆಚ್ಚಿವೆ. ಪ್ರೀತಂ ತೊಡೆಯ ಮೇಲೆ ಸಮಂತಾ ಕಾಲು ಹಾಕಿಕೊಂಡು ಮಲಗಿದ್ದ ಫೋಟೊ ಕೆಲ ದಿನಗಳ ಹಿಂದೆ ವೈರಲ್‌ ಆಗಿತ್ತು. ಈ ಸಲುಗೆಯೇ ಚಾಯ್‌–ಸಮಂತಾ ಸಂಬಂಧ ಮುರಿದುಬಿಳಲು ಕಾರಣ ಎಂದು ಟಾಲಿವುಡ್‌ ಅಂಗಳದಲ್ಲಿ ಚರ್ಚೆಯಾಗಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು