ತೆಲುಗಿನ ನಟ ಸಾಯಿದುರ್ಗಾ ತೇಜ್ ನಟಿಸುತ್ತಿರುವ ಪ್ಯಾನ್-ಇಂಡಿಯಾ ಸಿನಿಮಾ ‘ಸಂಬರಲ ಏಟಿಗಟ್ಟು’ ಗ್ಲಿಮ್ಸ್ ಬಿಡುಗಡೆಯಾಗಿದೆ. ಪ್ರೈಮ್ ಶೋ ಎಂಟರ್ಟೇನ್ಮೆಂಟ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿರುವ ಈ ಝಲಕ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಭರ್ಜರಿ ಆ್ಯಕ್ಷನ್ ಮೂಲಕ ಅಬ್ಬರಿಸಿರುವ ಸಾಯಿದುರ್ಗಾ ತೇಜ್ ಮನರಂಜನಾತ್ಮಕವಾದ ಕಥೆಯೊಂದಿಗೆ ಪ್ರೇಕ್ಷಕರ ಎದುರಿಗೆ ಬರಲಿದ್ದಾರೆ. ಚಿತ್ರದಲ್ಲಿ ಸಾಯಿಗೆ ಜೋಡಿಯಾಗಿ ಐಶ್ವರ್ಯ ಲಕ್ಷ್ಮೀ ಸಾಥ್ ಕೊಟ್ಟಿದ್ದಾರೆ. ಜಗಪತಿ ಬಾಬು, ಸಾಯಿಕುಮಾರ್, ಶ್ರೀಕಾಂತ್ ಹಾಗೂ ಅನನ್ಯ ನಾಗಲ್ಲ ತಾರಾಬಳಗದಲ್ಲಿದ್ದಾರೆ. ಸಿನಿಮಾಗೆ ರೋಹಿತ್ ಕೆ.ಪಿ. ಆ್ಯಕ್ಷನ್ ಕಟ್ ಹೇಳಿದ್ದು, ವೆಟ್ರಿವೇಲ್ ಪಳನಿಸ್ವಾಮಿ ಛಾಯಾಚಿತ್ರಗ್ರಹಣ, ಬಿ.ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ನವೀನ್ ವಿಜಯಕೃಷ್ಣ ಸಂಕಲನವಿದೆ.

‘ಹನುಮಾನ್’ನಂತಹ ಹಿಟ್ ಕೊಟ್ಟಿರುವ ಕೆ.ನಿರಂಜನ್ ರೆಡ್ಡಿ ಹಾಗೂ ಚೈತನ್ಯ ರೆಡ್ಡಿ ಪ್ರೈಮ್ ಶೋ ಎಂಟರ್ಟೇನ್ಮೆಂಟ್ ಬ್ಯಾನರ್ನಡಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ತೆಲುಗು, ಕನ್ನಡ, ಮಲಯಾಳ, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.