ಸೋಮವಾರ, ಏಪ್ರಿಲ್ 12, 2021
23 °C
‘ಯುವರತ್ನ’ ಚಲನಚಿತ್ರದ ತಾರಾ ಬಳಗದಿಂದ ಕಲಬುರ್ಗಿಯಲ್ಲಿ ಮನರಂಜನೆ

‘ಯುವರತ್ನ’ ಚಲನಚಿತ್ರ ಪ್ರಚಾರ: ಪುನೀತ್‌ ರಾಜ್‌ಕುಮಾರ್ ಕಾರ್ಯಕ್ರಮ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ನಟ ಪುನೀತ್‌ ರಾಜ್‌ಕುಮಾರ್‌ ಅಭಿನಯಿಸಿದ ‘ಯುವರತ್ನ’ ಚಲನಚಿತ್ರ ಪ್ರಚಾರಕ್ಕಾಗಿ ಇಲ್ಲಿನ ಏಷ್ಯನ್‌ ಮಾಲ್ ಪಕ್ಕದಲ್ಲಿರುವ ಮೈದಾನದಲ್ಲಿ ಮಾರ್ಚ್‌ 21ರಂದು ಬೆಳಿಗ್ಗೆ 10.30ಕ್ಕೆ‘ಯುವ ಸಂಭ್ರಮ’ ಎಂಬ ಬೃಹತ್‌ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ವತಃ ನಟ ಪುನೀತ್‌ ಸೇರಿದಂತೆ ಹಲವು ತಾರೆಯರು ಈ ಕಾರ್ಯಕ್ರಮದಲ್ಲಿ ರಂಜಿಸಲಿದ್ದಾರೆ.

ಅಂದು ನಡೆಯುವ ಸಮಾರಂಭದಲ್ಲಿ ಚಿತ್ರದ ತಾರಾಗಣದಲ್ಲಿರುವ ರವಿಶಂಕರ್, ಧನಂಜಯ್, ಸೋನುಗೌಡ, ಪ್ರಕಾಶ್ ರೈ, ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸೇರಿದಂತೆ ‘ಯುವರತ್ನ’ ಸಿನೆಮಾ ತಂಡ ಪೂರ್ತಿ ಪಾಲ್ಗೊಳ್ಳಲಿದೆ.

ಏಪ್ರಿಲ್ 1ರಂದು ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಏಕಕಾಲಕ್ಕೆ 1000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕನ್ನಡ, ತೆಲಗು ಭಾಷೆಯಲ್ಲಿ ಈ ಚಿತ್ರ ತೆರೆ ಕಾಣಲಿದೆ. ಈ ಚಿತ್ರವನ್ನು ಸಂತೋಷ ಆನಂದ್‍ರಾಮ್ ನಿರ್ದೇಶನ ಮಾಡಿದ್ದು, ಬಹುಭಾಷಾ ನಟಿ ಸಾಯೆಷಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಹಾಡುಗಳು ಮತ್ತು ಟೀಸರ್ ಈಗಾಗಲೇ ಸಾಕಷ್ಟು ಪ್ರಸಿದ್ಧಿ ಪಡೆದಿದ್ದು, ಯುವ ಹೃದಯಗಳನ್ನು ಸೆಳೆಯುತ್ತಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು