ಬೆಂಗಳೂರು: ಮೂತ್ರಕೋಶ (ಬ್ಲಾಡರ್) ಕ್ಯಾನ್ಸರ್ನಿಂದ ಬಳಲುತ್ತಿದ್ದ ನಟ ಶಿವರಾಜ್ಕುಮಾರ್ ಅಮೆರಿಕದಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಪೂರೈಸಿಕೊಂಡು ತಾಯ್ನಾಡಿಗೆ ಭಾನುವಾರ ಮರಳಿದರು.

ಬಳಿಕ ಹೆಬ್ಬಾಳದ ಸ್ವಗೃಹದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ‘ಚಿಕಿತ್ಸೆಗೆ ಹೋಗುವಾಗ ಬಹಳ ಭಯವಿತ್ತು. ಆದರೆ ವೈದ್ಯರು, ಪತ್ನಿ ಗೀತಾ, ಕುಟುಂಬದವರು ಧೈರ್ಯ ತುಂಬಿದರು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಈಗ ಆರಾಮವಾಗಿದ್ದೇನೆ. ‘ಕಿಂಗ್ ಈಸ್ ಬ್ಯಾಕ್’ ಎಂದು ಸಿನಿಮಾ ಶೈಲಿಯಲ್ಲಿಯೇ ಡೈಲಾಗ್ ಹೇಳಿದರು.

‘ಶಸ್ತ್ರ ಚಿಕಿತ್ಸೆ ಬಳಿಕ ಸಮಯ ತೆಗೆದುಕೊಂಡು ವಾಕಿಂಗ್ ಪ್ರಾರಂಭಿಸಿದೆ. ನಿಧಾನಕ್ಕೆ ಆರೋಗ್ಯ ಸರಿ ಹೋಯಿತು. ಗೀತಾ ಅಷ್ಟೂ ದಿನ ಜೊತೆಗಿದ್ದು ನನ್ನನ್ನು ತಾಯಿ ರೀತಿ ನೋಡಿಕೊಂಡಿದ್ದಾರೆ. ನಾನು ಅದೃಷ್ಟವಂತ ಅನಿಸುತ್ತಿದೆ. ಈಗ ತುಂಬಾ ಸ್ಟ್ರಾಂಗ್ ಆಗಿದ್ದೇನೆ. ಎಲ್ಲರ ಆಶೀರ್ವಾದ ನನಗೆ ಸಿಕ್ಕಿದೆ. ಕೆಲ ಸಮಯ ವಿಶ್ರಾಂತಿ ಪಡೆದು ಸಿನಿಮಾ ಚಟುವಟಿಕೆ ಪ್ರಾರಂಭಿಸುವೆ’ ಎಂದರು.

ವಿಮಾನ ನಿಲ್ದಾಣದ ಬಳಿಯೇ ಕುಟುಂಬ ವರ್ಗದವರು, ಆಪ್ತರು, ಅಭಿಮಾನಿಗಳು ಶಿವಣ್ಣ ಆಗಮನಕ್ಕಾಗಿ ಕಾದು ನಿಂತಿದ್ದರು. ಮಾರ್ಗ ಮಧ್ಯದಲ್ಲಿ ಅಭಿಮಾನಿಗಳು ಸೇಬಿನ ಹಾರ ಹಾಕಿ ಅವರನ್ನು ಸ್ವಾಗತಿಸಿದರು.
.ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ ನಟ ಶಿವರಾಜ್ಕುಮಾರ್.ಡಿ.24ಕ್ಕೆ ಶಸ್ತ್ರಚಿಕಿತ್ಸೆ, ಅದರ ಮೊದಲು ‘ಯುಐ’ ನೋಡುವೆ: ಶಿವರಾಜ್ಕುಮಾರ್ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.