ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಿಚ್‌..’ನಲ್ಲಿ ವಿಜಯ್‌ಸೂರ್ಯ

Published 10 ಮಾರ್ಚ್ 2024, 23:57 IST
Last Updated 10 ಮಾರ್ಚ್ 2024, 23:57 IST
ಅಕ್ಷರ ಗಾತ್ರ

‘ಅಗ್ನಿಸಾಕ್ಷಿ’ ಧಾರಾವಾಹಿಯಿಂದ ಜನಪ್ರಿಯರಾಗಿದ್ದ ನಟ ವಿಜಯ್‌ಸೂರ್ಯ ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಮ್ಮೆ ಅಗ್ನಿಪರೀಕ್ಷೆಗಿಳಿದಿದ್ದಾರೆ. ಅವರು ನಾಯಕನಾಗಿ ನಟಿಸಿರುವ ‘ಸ್ವಿಚ್‌ ಕೇಸ್‌’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ.

ಚೇತನ್ ಶೆಟ್ಟಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಚಿತ್ರವನ್ನು ನಿರ್ದೇಶನ ಮಾಡಿದ್ದು, ಕೊಂಡಾಣ ಫಿಲ್ಮ್ಸ್‌ ಬಂಡವಾಳ ಹೂಡಿದೆ.

‘ಸಾಮಾನ್ಯವಾಗಿ ಸಾಫ್ಟ್‌ವೇರ್ ಕಂಪನಿಗಳಲ್ಲಿ ಉದ್ಯೋಗಿಗಳು ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ಸೇರುವ ಸಂದರ್ಭದಲ್ಲಿ ಈ ಪದ ಬಳಸುತ್ತಾರೆ. ಇದನ್ನೇ ಚಿತ್ರದ ಶೀರ್ಷಿಕೆಯಾಗಿಸಿದ್ದೇವೆ. ಐಟಿ ಲೋಕದ ಕಥೆಯನ್ನು ಹೊಂದಿರುವ ಚಿತ್ರ’ ಎಂದರು ನಿರ್ದೇಶಕರು. 

ಶ್ವೇತಾ ವಿಜಯ್‌ಕುಮಾರ್ ಚಿತ್ರದ ನಾಯಕಿ. ಉಳಿದಂತೆ ಬಲರಾಜವಾಡಿ, ಸಂತೋಷ್ ಕಾರ್ಕಿ, ಪೃಥ್ವಿರಾಜ್ ಮುಂತಾದವರು ನಟಿಸಿದ್ದಾರೆ. ಭೃತ್ತ್ವ ಶ್ಯಾಲೆಬ್ ಸಂಗೀತವಿದ್ದು, ಒಂದು ಹಾಡಿಗೆ ಚಂದನ್‌ಶೆಟ್ಟಿ-ದೀಪಕ್‌ ದೊಡ್ಡೇರ ಧ್ವನಿಯಾಗಿದ್ದಾರೆ. ಛಾಯಾಗ್ರಹಣ ಮತ್ತು ಸಂಕಲನ ಪ್ರಶಾಂತ್ ಗಿರಿಯಪ್ಪ ಅವರದ್ದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT