ಶುಕ್ರವಾರ, ಏಪ್ರಿಲ್ 10, 2020
19 °C

ನಿಮಗೆ ವಯಸ್ಸಾಗಿದೆ ಎಂದ ನೆಟ್ಟಿಗನಿಗೆ ಅನು ಪ್ರಭಾಕರ್ ನೀಡಿದ ಉತ್ತರವೇನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ನಟ, ನಟಿಯರನ್ನು ನೆಟ್ಟಿಗರು ಟೀಕಿಸುವುದು, ಹೊಗಳುವುದು ಸರ್ವೇ ಸಾಮಾನ್ಯ. ಕೆಲವು ಬಾರಿ ಕಲಾವಿದರು ನೆಟ್ಟಿಗರ ಟೀಕೆಗಳಿಗೆ ಅಷ್ಟೇ ಖಾರವಾಗಿ ಉತ್ತರಿಸುತ್ತಾರೆ. ಈಗ ಖಾರವಾಗಿ ಉತ್ತರಿಸುವ ಸರದಿ ನಟಿ ಅನು ಪ್ರಭಾಕರ್‌ ಅವರದ್ದು. ನೆಟ್ಟಿಗರೊಬ್ಬರ ಪ್ರತಿಕ್ರಿಯೆಗೆ ಅವರು ಖಡಕ್‌ ಆಗಿ ಉತ್ತರಿಸಿದ್ದಾರೆ.

ಅನು ಪ್ರಭಾಕರ್‌ ಚಿತ್ರರಂಗ ಪ್ರವೇಶಿಸಿ ಎರಡು ದಶಕ ತುಂಬಿದೆ. ಸಂಸಾರದ ಜವಾಬ್ದಾರಿಯ ಕಾರಣಕ್ಕಾಗಿ ಅವರು ನಟನೆಯಿಂದ ಕೊಂಚ ಬಿಡುವು ಪಡೆದಿದ್ದು ಉಂಟು. ಕಳೆದ ವರ್ಷ ಬಿಡುಗಡೆಗೊಂಡ ‘ಅನುಕ್ತ’ ಸಿನಿಮಾದಲ್ಲಿ ಅವರು ಅತಿಥಿ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.

ಪ್ರಸ್ತುತ ಲೇಖಕಿ ಸಾರಾ ಅಬೂಬಕರ್‌ ಅವರ ಕಾದಂಬರಿ ಆಧಾರಿತ ನಿರ್ದೇಶಕಿ ಆರ‍್ನಾ ಸಾಧ್ಯ (ಶ್ವೇತಾ ಶೆಟ್ಟಿ) ನಿರ್ದೇಶಿಸುತ್ತಿರುವ ‘ಸಾರಾ ವಜ್ರ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅವರದು ಕಾದಂಬರಿಯ ಜೀವಾಳವಾದ ‘ನಫಿಜಾ’ ಪಾತ್ರವಂತೆ. ಈ ಸಿನಿಮಾ ಡಬ್ಬಿಂಗ್‌ ಹಂತದಲ್ಲಿದ್ದು, ಶೀಘ್ರವೇ ಆಡಿಯೊ ಬಿಡುಗಡೆಯಾಗಲಿದೆ. 

ಈ ನಡುವೆ ಮಧುಸೂದನ್‌ ಎಂಬಾತ ‘ಈಗ ಸ್ವಲ್ಪ ವಯಸ್ಸಾಗಿದೆ ಬಿಡಿ ಸಾಕು’ ಎಂದು ಅನು ಪ್ರಭಾಕರ್‌ ಅವರ ನಟನೆ ಬಗ್ಗೆ ಟ್ವಿಟರ್‌ನಲ್ಲಿ ಟೀಕಿಸಿದ್ದಾರೆ. ಇದಕ್ಕೆ ಅನು ಅವರು, ‘ವಯಸ್ಸು  ಆದ್ರೆ ಕೆಲಸ ನಿಲ್ಲಿಸಬೇಕಾ ಮಧು? ನೀವು ನನ್ನ ಸಿನಿಮಾ ನೋಡೋ ಅವಶ್ಯಕತೆ ಇಲ್ಲ ಬಿಡಿ!!! ಕಲಾವಿದರಾಗಿ ನಮ್ಮನ್ನಾ ಇಷ್ಟಪಡೋರು ನೋಡತಾರೆ!’ ಎಂದು ಟಾಂಗ್ ಕೊಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)