ಶುಕ್ರವಾರ, ಫೆಬ್ರವರಿ 21, 2020
19 °C

ಚಂದನವನ: ಮಾಲ್ಗುಡಿ ಡೇಸ್‌, ಜಂಟಲ್‌ಮನ್ ಸೇರಿ ಈ ವಾರ 11 ಸಿನಿಮಾಗಳು ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಈ ವಾರ ಕನ್ನಡದಲ್ಲಿ ಒಟ್ಟು 11 ಸಿನಿಮಾಗಳು ತೆರೆಗೆ ಬರುತ್ತಿವೆ. ಇವುಗಳಲ್ಲಿ ಪ್ರಜ್ವಲ್‌ ದೇವರಾಜ್ ನಾಯಕನಾಗಿರುವ ‘ಜಂಟಲ್‌ಮನ್’ ಹಾಗೂ ವಿಜಯ್‌ ರಾಘವೇಂದ್ರ ನಟಿಸಿರುವ ಮಾಲ್ಗುಡಿ ಡೇಸ್‌ ಸಿನಿಮಾ ನಿರೀಕ್ಷೆ ಹುಟ್ಟಿಸಿವೆ.

ಜಂಟಲ್‍ಮನ್

ಪ್ರಜ್ವಲ್‌ ದೇವರಾಜ್ ನಾಯಕನಾಗಿರುವ ‘ಜಂಟಲ್‌ಮನ್’ ಚಿತ್ರ ತೆರೆ ಕಾಣುತ್ತಿದೆ. ಗುರುದೇಶಪಾಂಡೆ ಇದಕ್ಕೆ ಬಂಡವಾಳ ಹೂಡಿದ್ದಾರೆ. ಈ ಚಿತ್ರ ನಿರ್ದೇಶಿಸಿರುವುದು ಜಡೇಶ್‌ಕುಮಾರ್. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಡಿಫರೆಂಟ್ ಡ್ಯಾನಿ, ಮಾಸ್ ಮಾದ ಮತ್ತು ವಿನೋದ್ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ. ನಿಶ್ವಿಕಾ ನಾಯ್ಡು ಇದರ ನಾಯಕಿ. ಸುಧಾಕರ್ ಶೆಟ್ಟಿ ಅವರ ಛಾಯಾಗ್ರಹಣವಿದೆ. ಬೇಬಿ ಆರಾಧ್ಯ ತಾರಾಗಣದಲ್ಲಿದ್ದಾಳೆ.

ಬಿಲ್‌ಗೇಟ್ಸ್

ಸಿ. ಶ್ರೀನಿವಾಸ ನಿರ್ದೇಶನದ ‘ಬಿಲ್‌ಗೇಟ್ಸ್‌’ ಸಿನಿಮಾ ಬಿಡುಗಡೆಯಾಗುತ್ತಿದೆ. ವಸಂತ್‌ಕುಮಾರ್ ಬಿ.ಎಂ., ನಾಗನಹಳ್ಳಿ ಯತೀಶ್, ಅರವಿಂದ್ ಕುಮಾರ್, ಸತ್ಯನಾರಾಯಣ ಎಸ್., ಗಿರೀಶ್ ಬಿ.ಎನ್., ರಾಧೇಶ್ ಕೆ.ಆರ್., ರಂಗಸ್ವಾಮಿ ಎಂ.ಎ., ಸಿಮೆಂಟ್ ರಾಮಚಂದ್ರ, ಎಲ್. ಆದಿನಾರಾಯಣ ರಮೇಶ್, ಮುನಿಕೃಷ್ಣ ಎಂ.ವಿ., ಎಚ್.ಸಿ. ಕುಮಾರಸ್ವಾಮಿ (ಹಂಚ್ಯಾ), ಕುಮಾರ್ ಬಿ.ಕೆ., ಎನ್.ಎಲ್. ಶಿವಶಂಕರ್, ಅನನ್ಯ, ವಿನಮ್ಯ ಬಂಡವಾಳ ಹೂಡಿದ್ದಾರೆ. 

ರಾಕೇಶ್ ಸಿ. ತಿಲಕ್ ಅವರ ಛಾಯಾಗ್ರಹಣವಿದೆ. ನೋಬಿನ್ ಪೌಲ್ ಸಂಗೀತ ನೀಡಿದ್ದಾರೆ. ಪಿ. ಮರಿಸ್ವಾಮಿ ಅವರ ಸಂಕಲನವಿದೆ. ಚಿಕ್ಕಣ್ಣ, ಶಿಶಿರ, ರೋಜಾ, ಅಕ್ಷರಾ ರೆಡ್ಡಿ ತಾರಾಗಣದಲ್ಲಿದ್ದಾರೆ.

ದಿಯಾ

ಕೃಷ್ಣ ಚೈತನ್ಯ ನಿರ್ಮಾಣದ ಅಶೋಕ್ ಕೆ.ಎಸ್. ನಿರ್ದೇಶನದ ‘ದಿಯಾ’ ಚಿತ್ರ ಬಿಡುಗಡೆಯಾಗುತ್ತಿದೆ. ವಿಶಾಲ್ ವಿತ್ತರ್ ಮತ್ತು ಸೌರಭ್ ವಾಘ್ಮರೆ ಅವರ ಛಾಯಾಗ್ರಹಣವಿದೆ. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ನವೀನ್ ರಾಜ್‌ ಅವರ ಸಂಕಲನವಿದೆ. ವರದರಾಜ್ ಕಾಮತ್ ಅವರ ಕಲಾ ನಿರ್ದೇಶನವಿದೆ. ಖುಷಿ, ದೀಕ್ಷಿತ್ ಶೆಟ್ಟಿ, ಪೃಥ್ವಿ ಅಂಬರ್, ಪವಿತ್ರಾ ಲೋಕೇಶ್ ತಾರಾಬಳಗದಲ್ಲಿದ್ದಾರೆ.

3rd ಕ್ಲಾಸ್

7 ಹಿಲ್ಸ್ ಸ್ಟುಡಿಯೊದಿಂದ ನಿರ್ಮಿಸಿರುವ ‘3rd ಕ್ಲಾಸ್’ ಸಿನಿಮಾ ತೆರೆ ಕಾಣುತ್ತಿದೆ. ಅಶೋಕ್ ದೇವ್‌ ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ನಮ್ ಜಗದೀಶ್‌ ಈ ಚಿತ್ರದ ನಾಯಕ. ಜಸ್ಸಿ ಗಿಫ್ಟ್ ಸಂಗೀತ ನೀಡಿದ್ದಾರೆ. ಬಿ.ಕೆ. ಶ್ಯಾಮ್‌ರಾಜ್ ಅವರ ಛಾಯಾಗ್ರಹಣವಿದೆ. ಶ್ರೀಕಾಂತ್ ಅವರ ಸಂಕಲನವಿದೆ. ಶಶಿ ನಾಯಕ್ ಬಂಡವಾಳ ಹೂಡಿದ್ದಾರೆ. ಮಾಸ್ ಮಾದ ಸಾಹಸ ನಿರ್ದೇಶಿಸಿದ್ದಾರೆ. ಎಲ್‌. ಚಂದ್ರಕಲಾಬಾಯಿ ಸಹ ನಿರ್ಮಾಪಕಿಯಾಗಿದ್ದಾರೆ. ರೂಪಿಕಾ, ಅವಿನಾಶ್, ಸಂಗೀತ, ಪವನ್‌ಕುಮಾರ್, ರಾಜು, ದಿವ್ಯರಾವ್, ವಿಕಾಸ್ ತಾರಾಗಣದಲ್ಲಿದ್ದಾರೆ.

ಮಾಲ್ಗುಡಿ ಡೇಸ್‌

ಸ್ವಯಂಪ್ರಭ ಎಂಟರ್‌ಟೈನ್‍ಮೆಂಟ್ ಮತ್ತು ಪ್ರೊಡಕ್ಷನ್‌ ಲಾಂಛನದಡಿ ಕೆ. ರತ್ನಾಕರ್ ಕಾಮತ್‌ ನಿರ್ಮಿಸಿರುವ ‘ಮಾಲ್ಗುಡಿ ಡೇಸ್’ ಸಿನಿಮಾ ತೆರೆ ಕಾಣುತ್ತಿದೆ.

ವಿಜಯ್‌ ರಾಘವೇಂದ್ರ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ಈ ಚಿತ್ರಕ್ಕೆ ಕಿಶೋರ್ ಮೂಡಬಿದ್ರೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಉದಯ್ ಲೀಲಾ ಅವರ ಛಾಯಾಗ್ರಹಣವಿದೆ. ಪ್ರದೀಪ್ ನಾಯಕ್ ಸಂಕಲನವಿದೆ. ಗಗನ್ ಖಡೇರಿಯಾ ಸಂಗೀತ ನೀಡಿದ್ದಾರೆ. ಗ್ರೀಷ್ಮಾ ಶ್ರೀಧರ್, ಧನರಾಜ್, ಗೋಪಿನಾಥ್ ಭಟ್, ರೂಪೇಶ್, ತೇಜಸ್ವಿನಿ, ಸಂದೇಶ್ ಜೈನ್‌ ತಾರಾಗಣದಲ್ಲಿದ್ದಾರೆ.

ಮತ್ತೆ ಉದ್ಭವ 

ವೈಟ್ ಪ್ಯಾಂಥರ್ಸ್ ಕ್ರಿಯೇಟರ್ಸ್‌ ಸಂಸ್ಥೆಯಿಂದ ನಿರ್ಮಿಸಿರುವ ಕೋಡ್ಲು ರಾಮಕೃಷ್ಣ ನಿರ್ದೇಶನದ ‘ಮತ್ತೆ ಉದ್ಭವ’ ಚಿತ್ರ ಬಿಡುಗಡೆಯಾಗುತ್ತಿದೆ.

ವಿ. ಮನೋಹರ್ ಅವರ ಸಂಗೀತ ನಿರ್ದೇಶನವಿದೆ. ಮೋಹನ್ ಅವರ ಛಾಯಾಗ್ರಹಣವಿದೆ. ಎಸ್. ಮೋಹನ್ ಸಂಭಾಷಣೆ ಬರೆದಿದ್ದಾರೆ. ವಸಂತ್‍ರಾವ್ ಕುಲಕರ್ಣಿ ಅವರ ಕಲಾ ನಿರ್ದೇಶನವಿದೆ. ಅಪೇಕ್ಷಾ ಪುರೋಹಿತ್ ಅವರ ವಸ್ತ್ರವಿನ್ಯಾಸವಿದೆ. ಗುರುಪ್ರಸಾದ್ ಮುದ್ರಾಡಿ  ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ‘ಪ್ರಿಮಿಯರ್ ಪದ್ಮಿನಿ’ ಖ್ಯಾತಿಯ ಪ್ರಮೋದ್ ನಾಯಕರಾಗಿದ್ದಾರೆ. ಮಿಲನ ನಾಗರಾಜ್ ನಾಯಕಿಯಾಗಿದ್ದಾರೆ. ಅವಿನಾಶ್, ರಂಗಾಯಣ ರಘು, ಮೋಹನ್, ಸುಧಾ ಬೆಳವಾಡಿ, ಶುಭ ರಕ್ಷಾ, ಮಂಡ್ಯ ರವಿ, ಪಿ.ಡಿ. ಸತೀಶ್‌ ತಾರಾಬಳಗದಲ್ಲಿದ್ದಾರೆ.

ಡೆಡ್ಲಿ ಅಫೇರ್

ಓಂ ಶ್ರೀಸಿನಿಮಾ ಸಂಸ್ಥೆಯಡಿ ರಾಜೇಶ್ ಮೂರ್ತಿ ನಿರ್ಮಿಸಿರುವ ‘ಡೆಡ್ಲಿ ಅಫೇರ್’ ಚಿತ್ರ ತೆರೆ ಕಾಣುತ್ತಿದೆ. ರಾಜೇಶ್ ಮೂರ್ತಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ವಿನೋದ್ ಆರ್. ಅವರ ಛಾಯಾಗ್ರಹಣವಿದೆ. ನಿತಿನ್ ಕುಮಾರ್ ಸಂಗೀತ ನೀಡಿದ್ದಾರೆ. ರಾಹುಲ್ ಸೋಮಣ್ಣ ಅವರ ಸಂಭಾಷಣೆಯಿದೆ. ನಾಗರಾಜ್ ಮಹೇಶ್ವರಪ್ಪ ಸಾಹಿತ್ಯ ಬರೆದಿದ್ದಾರೆ. ಎಂ. ಸತೀಶ್‌ ಅವರ ಸಂಕಲನವಿದೆ. ಸ್ವಪನ್ ಕೃಷ್ಣ, ಗುಂಜನ್ ಅರಸ್, ರಾಜೇಶ್ ಮಿತ್ರಾ, ಮಾಸ್ಟರ್‌ ವಿಶ್ರುತ್, ರೀತು ಕಿಂಗರ್ ತಾರಾಗಣದಲ್ಲಿದ್ದಾರೆ.

ಓಜಸ್

ಬಿ.ಎನ್. ಸ್ವಾಮಿ ಅರ್ಪಿಸುವ ರಜತ್ ರಘುನಾಥ್‌ ಪ್ರೊಡಕ್ಷನ್ಸ್ ಲಾಂಛನದಡಿ ರಜತ್ ರಘುನಾಥ್ ಹಾಗೂ ಡಾ.ಎಡ್ವರ್ಡ್ ಡಿಸೋಜ ನಿರ್ಮಿಸಿರುವ ‘ಓಜಸ್’ ಸಿನಿಮಾ ಬಿಡುಗಡೆಯಾಗುತ್ತಿದೆ.

ಸಿ.ಜೆ. ವರ್ಧನ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಪಿ.ವಿ.ಆರ್. ಸ್ವಾಮಿ ಅವರ ಛಾಯಾಗ್ರಹಣವಿದೆ. ಕಾರ್ತಿಕ್ ವೆಂಕಟೇಶ್ ಸಂಗೀತ ನೀಡಿದ್ದಾರೆ. ಕೆ. ಗುರುಪ್ರಸಾದ್ ಅವರ ಸಂಕಲನವಿದೆ. ಕಪಿಲ್ ಅವರ ನೃತ್ಯ ನಿರ್ದೇಶನವಿದೆ. ವಿನಯ್ ಸಂಭಾಷಣೆ ಬರೆದಿದ್ದಾರೆ.

ಭವ್ಯಾ, ನೇಹಾ ಸಕ್ಸೇನ, ಯತಿರಾಜ್, ಡಿಂಗ್ರಿ ನಾಗರಾಜ್, ಮೈಸೂರು ರಮಾನಂದ್, ದುಬೈ ರಫೀಕ್, ಡಾ.ಎಡ್ವರ್ಡ್ ಡಿಸೋಜ, ರಜತ್ ರಘುನಾಥ್ ತಾರಾಗಣದಲ್ಲಿದ್ದಾರೆ.

ಪುರ್ ಸೊತ್ ರಾಮ, ಅರಿಷಡ್ವರ್ಗ, ಜಿಲ್ಕ ಸಿನಿಮಾಗಳು ಸಹ ಬಿಡುಗಡೆಯಾಗಲಿವೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು