ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Parak Movie: ‘ಪರಾಕ್‌’ ಎಂದ ರೋರಿಂಗ್‌ ಸ್ಟಾರ್‌

Published 18 ಡಿಸೆಂಬರ್ 2023, 23:30 IST
Last Updated 18 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

‘ಬಘೀರ’ ಚಿತ್ರದ ಟೀಸರ್‌ ಬಿಡುಗಡೆ ದಿನದಂದೇ ರೋರಿಂಗ್ ಸ್ಟಾರ್‌ ಶ್ರೀಮುರಳಿಯ ಹೊಸ ಪ್ರಾಜೆಕ್ಟ್‌ ಘೋಷಣೆಯಾಗಿದೆ. ಹೊಸಬರ ಜೊತೆ ಶ್ರೀಮುರಳಿ ಕೈಜೋಡಿಸಿದ್ದು, ಟೈಟಲ್‌ ಪೋಸ್ಟರ್‌ ರಿಲೀಸ್‌ ಆಗಿದೆ. 

ರೋರಿಂಗ್ ಸ್ಟಾರ್ ಜನ್ಮದಿನದಂದು ‘ಪರಾಕ್‌’ ಚಿತ್ರದ ಶೀರ್ಷಿಕೆ ಘೋಷಣೆಯಾಗಿದ್ದು, ಹಾಲೇಶ್ ಕೋಗುಂಡಿ ಸಾರಥ್ಯ ಚಿತ್ರಕ್ಕಿದೆ. ಒಂದಷ್ಟು ಕಿರು ಚಿತ್ರಗಳನ್ನು ನಿರ್ದೇಶಿಸಿ ಅನುಭವವಿರುವ ಹಾಲೇಶ್‌ಗೆ ‘ಪರಾಕ್’ ಚೊಚ್ಚಲ ಸಿನಿಮಾ. ಹಾಲೇಶ್‌ಗೆ  ಮಂಜುನಾಥ್ ಬರವಣಿಗೆಯಲ್ಲಿ ಜೊತೆಯಾಗಿದ್ದಾರೆ. ಆ್ಯಕ್ಷನ್ ಸಸ್ಪೆನ್ಸ್ ಥ್ರಿಲ್ಲರ್ ಜಾನರ್‌ನ ಈ ಸಿನಿಮಾವನ್ನು ಬ್ರ್ಯಾಂಡ್ ಕೋಆಪರೇಟ್ಸ್ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್ ನಿರ್ಮಾಣ ಮಾಡುತ್ತಿದೆ. ಕೋಗುಂಡಿ ಅಖಿಲೇಶ್ ಹಾಗೂ ಆಶಿಕ್ ಮಾಡಾಲ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ದಾವಣಗೆರೆ ಪ್ರತಿಭೆಗಳೇ ಒಂದಾಗಿ ಮಾಡುತ್ತಿರುವ ‘ಪರಾಕ್’ ಚಿತ್ರದ ಟೈಟಲ್ ಪೋಸ್ಟರ್ ಕುತೂಹಲ ಮೂಡಿಸುತ್ತಿದ್ದು, ಹೊಸ ಅವತಾರದಲ್ಲಿ ಶ್ರೀಮುರಳಿ ಕಾಣಿಸಿಕೊಳ್ಳಲಿದ್ದಾರೆ. ‘ಪರಾಕ್’ ಚಿತ್ರತಂಡ 2024ರ ಮೇ ಅಥವಾ ಜೂನ್ ತಿಂಗಳಿನಿಂದ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT