ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೋನಿಗೆ ₹2 ಲಕ್ಷ ನೀಡಿದ್ದ ಅಂಬರೀಷ್: ನೆನಪು ಮೆಲುಕು ಹಾಕಿದ ಸಂಸದೆ ಸುಮಲತಾ

Last Updated 22 ಆಗಸ್ಟ್ 2021, 9:15 IST
ಅಕ್ಷರ ಗಾತ್ರ

ಬೆಂಗಳೂರು: ರೆಬೆಲ್‌ ಸ್ಟಾರ್‌ ಅಂಬರೀಷ್‌ ಅವರು ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್‌.ಧೋನಿ ಅವರಿಗೆ ನಗದು ಬಹುಮಾನ ನೀಡಿದ್ದ ವಿಚಾರವನ್ನು ಸಂಸದೆ ಸುಮಲತಾ ಅಂಬರೀಷ್‌ ನೆನಪಿಸಿಕೊಂಡಿದ್ದಾರೆ.

ಈ ಕುರಿತು ಫೇಸ್‌ಬುಕ್‌ ನಲ್ಲಿ ಪೋಸ್ಟ್‌ ಮಾಡಿರುವ ಸುಮಲತಾ, ‘ಅಂಬರೀಷ್ ಅವರ ಅನೇಕ ಕೊಡುಗೆ, ಕೆಲಸಗಳು ಸಾಮಾನ್ಯವಾಗಿ ಯಾರಿಗೂ ತಿಳಿದಿಲ್ಲ. ಅದಕ್ಕೆ ಕಾರಣ, ಅವರು ಇದನ್ನೆಲ್ಲ ಪ್ರಚಾರಕ್ಕೆ ಬಯಸದೆ ಮಾಡಿರುವುದಾಗಿದೆ. ಹಾಗಾಗಿ ಈ ರೀತಿಯ ಮಾಹಿತಿಯನ್ನು ಅನಿರೀಕ್ಷಿತವಾಗಿ ಓದಿದಾಗ ಅಥವಾ ಕೇಳಿದಾಗ ಸ್ವತಃ ನನಗೂ ಅಚ್ಚರಿಯಾಗುತ್ತದೆ. ಈ ಕಾರಣಕ್ಕಾಗಿಯೇ ಜನರು ಪ್ರೀತಿಯಿಂದ ಅವರನ್ನು ‘ದಾನ ಶೂರ ಕರ್ಣ’ ಅಂತ ಕರೆಯುವುದು’ ಎಂದು ಬರೆದುಕೊಂಡಿದ್ದಾರೆ.

2004ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕ್ರಿಕೆಟ್ ಪಂದ್ಯದ ನಂತರ, ಭರವಸೆಯ ಕ್ರಿಕೆಟಿಗನಾಗಿ ಬೆಳೆಯುತ್ತಿದ್ದ ಎಂ.ಎಸ್ ಧೋನಿಯನ್ನು ಅಂಬರೀಷ್‌ ಅವರು ಭೇಟಿಯಾಗಿದ್ದರು. ರಾಂಚಿಯ ಒಬ್ಬ ಬಡ ಹುಡುಗ ಚೆನ್ನಾಗಿ ಆಡಿದ್ದಾನೆ ಮತ್ತು ಅವನಿಗೆ ಸಿಗಬಹುದಾದ ಎಲ್ಲಾ ಪ್ರೋತ್ಸಾಹದ ಅಗತ್ಯವಿದೆ ಎಂದು ಹೇಳಿದರು. ಅಲ್ಲದೇ ಧೋನಿಗೆ ₹2 ಲಕ್ಷ ಮೊತ್ತದ ಚೆಕ್ ಕೂಡ ನೀಡಿದ್ದರು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT