ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಕಿನಿ ಫೋಟೊ ಹಂಚಿಕೊಂಡ ನಟಿ ಸಾರಾ ಅಲಿಖಾನ್

Last Updated 5 ಆಗಸ್ಟ್ 2020, 10:13 IST
ಅಕ್ಷರ ಗಾತ್ರ

ಸಾರಾ ಅಲಿಖಾನ್‌ ಬಾಲಿವುಡ್‌ನ ಬೋಲ್ಡ್‌ ಬೆಡಗಿ. ಸಾಮಾಜಿಕ ಜಾಲತಾಣದಲ್ಲೂ ಆಕೆ ಸದಾ ಸಕ್ರಿಯ. ತನ್ನ ಮಾದಕ ಭಂಗಿಯ ಫೋಟೊಗಳನ್ನು ಹಂಚಿಕೊಳ್ಳುವುದರಲ್ಲೂ ಆಕೆ ಹಿಂದೆ ಬಿದ್ದವರಲ್ಲ. ಈಗ ಬಿಕಿನಿ ಫೋಟೊಗಳನ್ನು ಹಂಚಿಕೊಂಡು ಮತ್ತೆ ಸುದ್ದಿಯಾಗಿದ್ದಾರೆ.

ಹಳದಿ ಬಣ್ಣದ ಬಿಕಿನಿ ಧರಿಸಿ ಈಜುಕೊಳದಲ್ಲಿ ಪ್ಲಾಸ್ಟಿಕ್‌ ಕುದುರೆ ಏರಿ ಕುಳಿತಿರುವ ಫೋಟೊಗಳನ್ನು ಆಕೆ ಇನ್‌ಸ್ಟಾಗ್ರಾಮ್‌ ಮತ್ತು ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸುರಿಯುತ್ತಿರುವ ಮಳೆಯಲ್ಲಿ ಸಾರಾ ಕಲ್ಪನೆಯ ಲೋಕದಲ್ಲಿ ವಿಹರಿಸುತ್ತಿದ್ದಾರೆ.

‘ಚಂಡಮಾರುತ ಬೀಸುವ ಮೊದಲು ಶಾಂತವಾಗಿರುತ್ತದೆ. ಹವಾಮಾನ ಬದಲಾಗಿ ಅದು ಮಳೆಯಾಗಿ ರೂಪಾಂತರಗೊಳ್ಳುತ್ತದೆ. ಆ ಮಳೆಯನ್ನು ನಾವು ಅಪ್ಪಿಕೊಳ್ಳುತ್ತೇವೆ. ಆಗ ನಾವು ನಾವಾಗಿಯೇ ಇರುತ್ತೇವೆ ಎಂಬುದು ಗೊತ್ತಾಗುವುದಿಲ್ಲ’ ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಮತ್ತು ಧನುಶ್‌ ನಟನೆಯ ‘ಅಟ್ರಂಗಿ ರೆ’ ಹಿಂದಿ ಸಿನಿಮಾದಲ್ಲಿಸಾರಾ ಅಲಿಖಾನ್‌ ನಟಿಸುತ್ತಿದ್ದಾರೆ. ಅಕ್ಟೋಬರ್‌ನಿಂದ ಇದರ ಎರಡನೇ ಹಂತದ ಶೂಟಿಂಗ್‌ ಶುರುವಾಗಲಿದೆ. ಸಾರಾ ಇದರ ಸಿದ್ಧತೆಯಲ್ಲಿ ಮುಳುಗಿದ್ದಾರೆ. ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿರುವುದು ಆನಂದ್‌ ಎಲ್‌. ರೈ. ಈಗಾಗಲೇ, ಅಕ್ಷಯ್ ಕುಮಾರ್‌ ಮತ್ತು ಧನುಶ್ ಅವರುಸಾರಾ ಅಲಿಖಾನ್ ಕೆನ್ನೆಗೆ ‘ಮುತ್ತು’ ನೀಡುತ್ತಿರುವ ಫಸ್ಟ್‌ ಲುಕ್ ಪೋಸ್ಟರ್‌ ಬಿಡುಗಡೆಯಾಗಿದೆ.

ಡೇವಿಡ್ ಧವನ್‌ ನಿರ್ದೇಶನದ ‘ಕೂಲಿ ನಂ. 1’ ಚಿತ್ರಕ್ಕೂ ಸಾರಾ ಅವರೇ ನಾಯಕಿ. ವರುಣ್‌ ಧವನ್‌ ನಾಯಕರಾಗಿ ನಟಿಸಿದ್ದಾರೆ. ಮೇ 1ರಂದು ಈ ಸಿನಿಮಾ ತೆರೆ ಕಾಣಬೇಕಿತ್ತು. ಕೋವಿಡ್‌–19 ಪರಿಣಾಮ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT