'ಧುರಂಧರ್' ಚಿತ್ರದ ಮೂಲಕ ಖ್ಯಾತಿ ಪಡೆದ ಸಾರಾ ಅರ್ಜುನ್ ನಟನೆಯ 'ಯುಫೋರಿಯಾ' ಚಿತ್ರವು ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಈ ಚಿತ್ರ ಕುರಿತು ನಟಿ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
.ಅವಳೇ ಇವಳು.. ಧುರಾಂಧರ್ನಲ್ಲಿ ರಣವೀರ್ ಸಿಂಗ್ಗೆ 20 ವರ್ಷದ ಸಾರಾ ಅರ್ಜುನ್ ನಾಯಕಿ.
‘ಯುಫೋರಿಯಾ’ ಚಿತ್ರತಂಡದ ಬಗ್ಗೆ ನಟಿ ಸಾರಾ ಅರ್ಜುನ್, 'ಕೆಲವು ಕಥೆಗಳಿಗೆ ನಮ್ಮನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ.. ಅವೇ ನಮ್ಮನ್ನು ಹುಡುಕಿ ಬರುತ್ತವೆ. ನಂತರ ನಮ್ಮೊಳಗೆ ಆ ಕಥೆಗಳು ಉಳಿದು ಬಿಡುತ್ತವೆ. ಎಲ್ಲವೂ ಅನಿಶ್ಚಿತವಾಗಿದ್ದ ಸಮಯದಲ್ಲಿ ಈ ಚಿತ್ರವು ನನ್ನ ಕೈ ಹಿಡಿದು ಎಲ್ಲವೂ ಸಾಧ್ಯ ಎಂಬ ಭರವಸೆ ನೀಡಿತು’ ಎಂದಿದ್ದಾರೆ.

‘ನನ್ನ ಮೇಲೆ ನಂಬಿಕೆ ಇಟ್ಟು ಈ ಸಿನಿಮಾದಲ್ಲಿ ನಟಿಸಿಲು ಅವಕಾಶ ನೀಡಿದ್ದಕ್ಕಾಗಿ ನಿರ್ದೇಶಕ ಗುಣಶೇಖರ್ ಹಾಗೂ ನಿರ್ಮಾಪಕಿ ನೀಲಿಮಾ ಗುಣವರಿಗೆ ಕೃತಜ್ಞತೆಗಳು' ಎಂದಿದ್ದಾರೆ.

‘ನನ್ನ ಇಚ್ಛೆಯ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಲು ಕುಟುಂಬದವರು ಸಹಕರಿಸಿದರು. ಮುಖ್ಯವಾಗಿ ನನ್ನ ತಂದೆ ಕೈ ಹಿಡಿದು ಮೇಲೆತ್ತಿದರು. ಈ ಚಿತ್ರದ ಮೂಲಕ ನಿರೀಕ್ಷೆಗೂ ಮೀರಿದ ಪ್ರೀತಿಯನ್ನು ಪಡೆದಿದ್ದೆನೆ. ಅಲ್ಲದೆ, ಈ ಚಿತ್ರದ ಜೊತೆ ಭಾವನಾತ್ಮಕ ನಂಟು ಹೊಂದಿದ್ದೇನೆ. ನನ್ನ ಜೀವನದಲ್ಲಿ ‘ಯುಫೋರಿಯಾ’ಕ್ಕೆ ವಿಶೇಷ ಸ್ಥಾನ ನೀಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.
.ಚಿತ್ರಮಂದಿರಗಳಲ್ಲಿ ‘ಧುರಂಧರ್’ ಅಬ್ಬರ.
20ರ ಹರೆಯದ ಸಾರಾ ಅರ್ಜುನ್ ಧುರಂಧರ್ನಲ್ಲಿ ರಣವೀರ್ ಸಿಂಗ್ ಜೊತೆ ಕಾಣಿಸಿಕೊಂಡು ನೆಟ್ಟಿಗರ ಗಮನ ಸೆಳೆದಿದ್ದರು. ಫೆ.6ರಂದು ತೆರೆಗೆ ಬಂದ 'ಯುಫೋರಿಯಾ’ ಚಿತ್ರದ ಮೂಲಕ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.