ಸೋಮವಾರ, ಜನವರಿ 20, 2020
29 °C
ಸರಿಲೇರು ನೀಕೆವ್ವರು ಹೊಸ ಟ್ರೇಲರ್

ಟ್ರೇಲರ್ | ಬ್ಯೂಟಿಫುಲ್ ರಶ್ಮಿಕಾ, ಹೊಡೆದಾಟಕ್ಕೂ ಸೈ ಎಂದ ಮಹೇಶ್‌ಬಾಬು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಟಾಲಿವುಡ್‌ನ ಖ್ಯಾತ ನಟ ಪ್ರಿನ್ಸ್‌ ಮಹೇಶ್‌ ಬಾಬು ಮತ್ತು ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ  ಅವರ ‘ಸರಿಲೇರು ನೀಕೆವ್ವರು’ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. 

ಭಾನುವಾರ ಬಿಡುಗಡೆಯಾಗಿರುವ ಟೀಸರ್‌ ಅನ್ನು ಯೂಟ್ಯೂಬ್‌ನಲ್ಲಿ ಈ ವರೆಗೆ 9.71 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದು, ಟಾಪ್‌ ಟ್ರೆಂಡಿಂಗ್‌ನಲ್ಲಿದೆ. 

‘ನಿನಗ್ಯಾರೂ ಸರಿಸಾಟಿಯಲ್ಲ‘ ಎಂಬುದು ‘ಸರಿಲೇರು ನೀಕೆವ್ವರು‘ ಎಂಬುದರ ಕನ್ನಡ ಅರ್ಥ. ಸೇನಾ ಮೇಜರ್‌ ಪಾತ್ರವನ್ನು ನಿಭಾಯಿಸುತ್ತಿರುವ ನಾಯಕನ ಸುತ್ತಲ ಕತೆಯನ್ನು ಈ ಸಿನಿಮಾ ವಿವರಿಸುತ್ತದೆ. ‘ಮೇಜರ್‌ ಅಜಯ್‌ ಕೃಷ್ಣ’ ಎಂಬುದು ಸಿನಿಮಾದಲ್ಲಿ ಮಹೇಶ್‌ ಬಾಬು ಅವರ ಹೆಸರು.   

ಚಿತ್ರವನ್ನು ಅನಿಲ್‌ ರವಿಪುಡಿ ನಿರ್ದೇಶಿಸಿದ್ದಾರೆ. ನಿರ್ಮಾಪಕ ದಿಲ್‌ ರಾಜು, ಅನಿಲ್‌ ಸುಂಕರ ಅವರು ಸಿನಿಮಾಕ್ಕೆ ದುಡ್ಡು ಹಾಕಿದ್ದಾರೆ. 
ಕನ್ನಡತಿ ರಶ್ಮಿಕಾ ಅವರು ನಾಯಕಿಯಾಗಿ ಅಭಿನಯಿಸಿರುವ ಈ ಚಿತ್ರದಲ್ಲಿ ಒಟ್ಟು 5 ಹಾಡುಗಳಿವೆ.  ರಶ್ಮಿಕಾ ಅವರದ್ದು ತೆಲುಗಿನಲ್ಲಿ ಇದು ಐದನೇ ಚಿತ್ರ. 

ಹಿರಿಯ ನಟಿ ವಿಜಯಶಾಂತಿ ಅವರು ಕಾಲೇಜು ಪ್ರೊಫೆಸರ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  ಇದೇ 11ರಂದು ಬಿಡುಗಡೆಯಾಗುತ್ತಿರುವ ಈ ಸಿನಿಮಾ ಭಾರಿ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು