‘ಸತ್ತೇ ಪೆ ಸತ್ತಾ’ ಹೃತಿಕ್ ಆಯ್ಕೆ

‘ಸೂಪರ್ 30’ ಸಿನಿಮಾದ ಟ್ರೇಲರ್ ಬಿಡುಗಡೆ ಖುಷಿಯಲ್ಲಿರುವ ಹೃತಿಕ್ ರೋಷನ್ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. 80ರ ದಶಕದಲ್ಲಿ ಬಿಗ್ ಬಿ ನಟಿಸಿದ್ದ ‘ಸತ್ತೇ ಪೆ ಸತ್ತಾ’ ಸಿನಿಮಾದ ರಿಮೇಕ್‌ನಲ್ಲಿ ತಾವು ನಟಿಸುತ್ತಿರುವುದಾಗಿ ಹೃತಿಕ್ ಇನ್‌ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದಾರೆ.
ಅಮಿತಾಭ್ ನಟಿಸಿದ್ದ ಪಾತ್ರಕ್ಕೆ ಹೃತಿಕ್ ಆಯ್ಕೆಯಾಗಿದ್ದು, ಈ ಬಗ್ಗೆ ಚಿತ್ರದ ನಿರ್ದೇಶಕ ಫರ‍್ಹಾ ಖಾನ್ ಜೊತೆಗೆ ಚರ್ಚಿಸಿರುವುದಾಗಿ ಮೂಲಗಳು ತಿಳಿಸಿವೆ. ಹೃತಿಕ್ ಮತ್ತು ಫರ‍್ಹಾ ಅವರದ್ದು ದಶಕಕ್ಕೂ ಮಿಗಿಲಾದ ಸ್ನೇಹ. ಅಮಿತಾಭ್ ಪಾತ್ರಕ್ಕೆ ಹೃತಿಕ್‌ಗಿಂತ ಮತ್ತೊಬ್ಬ ಸೂಪರ್ ಸ್ಟಾರ್ ಇಲ್ಲ ಎಂದು ಫರ‍್ಹಾ ಮನಗಂಡು ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರಂತೆ. ಆ್ಯಕ್ಷನ್ ಕಾಮಿಡಿ ‘ಸತ್ತೇ ಪೆ ಸತ್ತಾ’ದಲ್ಲಿ ಅಮಿತಾಭ್‌ಗೆ ಜೋಡಿಯಾಗಿ ಹೇಮಾಮಾಲಿನಿ ನಟಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.