ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕ್ಯಾಮ್‌ 1770 ಚಿತ್ರದಲ್ಲಿ ಜಾಣನಾದ ‘ದಡ್ಡ ಪ್ರವೀಣ’

Published 1 ಏಪ್ರಿಲ್ 2024, 23:58 IST
Last Updated 1 ಏಪ್ರಿಲ್ 2024, 23:58 IST
ಅಕ್ಷರ ಗಾತ್ರ

ರಿಷಬ್‌ ಶೆಟ್ಟಿ ನಿರ್ದೇಶನದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರದಲ್ಲಿ ದಡ್ಡ ಪ್ರವೀಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ರಂಜನ್‌ ಬಳಿಕ ‘ಕಾಂತಾರ’ ಸಿನಿಮಾದಲ್ಲೂ ಮಿಂಚಿದ್ದರು. ಇದೀಗ ‘ಸ್ಕ್ಯಾಮ್‌ 1770’ ಚಿತ್ರದಲ್ಲಿ ಜಾಣ ವಿದ್ಯಾರ್ಥಿಯಾಗಿ ರಂಜನ್‌ ಕಾಣಿಸಿಕೊಂಡಿದ್ದು, ಶಿಕ್ಷಣ ಕ್ಷೇತ್ರದ ದೊಡ್ಡ ಸ್ಕ್ಯಾಮ್‌ ಹಿಂದೆ ಬಿದ್ದಿದ್ದಾರೆ.   

ವಿಕಾಸ್‌ ಪುಷ್ಪಗಿರಿ ಆ್ಯಕ್ಷನ್‌ ಕಟ್‌ ಹೇಳಿರುವ ‘ಸ್ಕ್ಯಾಮ್‌ 1770’ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಯಿತು. ಡಿ ಕ್ರಿಯೇಷನ್ಸ್ ಲಾಂಛನದಲ್ಲಿ ದೇವರಾಜ್ ಆರ್. ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ‘ಪ್ರಸ್ತುತ ಶಿಕ್ಷಣ ವ್ಯವಸ್ಥೆ ಕುರಿತಾದ ಚಿತ್ರ ಇದಾಗಿದೆ. ಶಿಕ್ಷಣ ಇಂದು ವ್ಯವಹಾರ ಆಗಿದೆ‌. ಮಕ್ಕಳಿಗೆ ವಿದ್ಯಾಭ್ಯಾಸ ತಪ್ಪಿದ್ದರೆ ಬದುಕುವುದು ಕಷ್ಟ. ಆದರೆ ಅಂತಹ ವಿದ್ಯಾಭ್ಯಾಸ ಇಂದು ಬಡವರಿಗೆ ಹಾಗೂ ಮಧ್ಯಮವರ್ಗದ ಜನರಿಗೆ ದುಬಾರಿಯಾಗಿದೆ. ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿನ ನ್ಯೂನತೆಗಳನ್ನು ತೋರಿಸುವ ಪ್ರಯತ್ನ ಇದಾಗಿದೆ. ಏಪ್ರಿಲ್ 12 ರಂದು ಚಿತ್ರ ತೆರೆಗೆ ಬರಲಿದೆ’ ಎನ್ನುತ್ತಾರೆ ವಿಕಾಸ್ ಪುಷ್ಪಗಿರಿ.

‘ಸ.ಹಿ.ಪ್ರಾ.ಶಾಲೆ ಕಾಸರಗೋಡು’ ಚಿತ್ರದಲ್ಲಿ ‘ದಡ್ಡ ಪ್ರವೀಣ’ನಾಗಿದ್ದ ನಾನು ಇದರಲ್ಲಿ ಜಾಣ ವಿದ್ಯಾರ್ಥಿಯ ಪಾತ್ರ ಮಾಡಿದ್ದೇನೆ. ಸ್ಕ್ಯಾಮ್‌ ಬಯಲಿಗೆಳೆಯುವ ವಿದ್ಯಾರ್ಥಿಯಾಗಿ ನಾನು ಕಾಣಿಸಿಕೊಂಡಿದ್ದೇನೆ’ ಎಂದರು ರಂಜನ್. ಚಿತ್ರದಲ್ಲಿ ನಾಯಕಿಯಾಗಿ ನಿಶ್ಚಿತ ನಟಿಸಿದ್ದು, ಹರಿಣಿ, ನಾರಾಯಣಸ್ವಾಮಿ, ನಟನ ಪ್ರಶಾಂತ್, ರಾಘು ಶಿವಮೊಗ್ಗ ಮುಂತಾದವರಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT