ಬುಧವಾರ, ಅಕ್ಟೋಬರ್ 28, 2020
28 °C

‘ಜೊತೆ ಜೊತೆಯಲಿ’ ಶೀರ್ಷಿಕೆ ಗೀತೆ ಒಂದು ಕೋಟಿ ವೀಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೀ಼ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ಜೊತೆ ಜೊತೆಯಲಿ’ಯ ಶೀರ್ಷಿಕೆಗೀತೆಯನ್ನು ಯೂಟ್ಯೂಬ್‌ನಲ್ಲಿ ಒಂದು ಕೋಟಿಗೂ ಹೆಚ್ಚು ಜನರು ವೀಕ್ಷಿಸಿದ್ದು, ಹೊಸ ದಾಖಲೆ ಮಾಡಿದೆ.

‘ನೂರು ಜನ್ಮ ಕೂಡಿ ಬಾಳುವ ಜೋಡಿ ನಮ್ಮದು...ಜೊತೆಜೊತೆಯಲಿ’ – ಶೀರ್ಷಿಕೆ ಗೀತೆ ಅಷ್ಟು ಜನಪ್ರಿಯಗೊಂಡಿದೆ.  

ಸುನಾದ್ ಗೌತಮ್ ಸಂಗೀತ ಸಂಯೋಜನೆಯ ಈ ಗೀತೆಯನ್ನು ಹರ್ಷಪ್ರಿಯ ಭದ್ರಾವತಿ ರಚಿಸಿದ್ದಾರೆ. ನಿನಾದ ನಾಯಕ್, ನಿಹಾಲ್ ತಾವ್ರೊ, ರಜತ್ ಹೆಗ್ಡೆ ಹಾಡಿದ್ದಾರೆ.

ಧಾರಾವಾಹಿಯ ಶೀರ್ಷಿಕೆ ಗೀತೆಯೊಂದು ಹೀಗೆ ಕೋಟಿ ವೀಕ್ಷಣೆ ಪಡೆದಿರುವುದು ಖುಷಿಯ ಸಂಗತಿ. ಕನ್ನಡ ಕಿರುತೆರೆ ಲೋಕದಲ್ಲಿ ಇದೊಂದು ಸಾಧನೆ. ಧಾರಾವಾಹಿಯ ಜನಪ್ರಿಯತೆಗೂ ಇದು ಸಾಕ್ಷಿ ಎಂದು ಜೀ ಕನ್ನಡ ಬ್ಯುಸಿನೆಸ್‌ ಮುಖ್ಯಸ್ಥ ರಾಘವೇಂದ್ರ ಹುಣಸೂರು ಹೇಳಿದ್ದಾರೆ. ಈ ಧಾರಾವಾಹಿಯಲ್ಲಿ ಅನಿರುದ್ಧ್, ಮೇಘಾ ಶೆಟ್ಟಿ, ಆರೂರು ಜಗದೀಶ್, ವಿಜಯಲಕ್ಷ್ಮಿ ಸಿಂಗ್ ಮೊದಲಾದವರು ನಟಿಸಿದ್ದಾರೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು