ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಚ್ಚನ್‌ ಅಭಿನಯದ ಚಿತ್ರವೂ ಸೇರಿ ಏಳು ಸಿನಿಮಾಗಳು ಒಟಿಟಿಯಲ್ಲೇ ಬಿಡುಗಡೆ

Last Updated 16 ಮೇ 2020, 19:56 IST
ಅಕ್ಷರ ಗಾತ್ರ

ಚೆನ್ನೈ: ಕನ್ನಡ ಚಿತ್ರಗಳಾದ ಲಾ, ಫ್ರೆಂಚ್‌ ಬಿರಿಯಾನಿ, ಅಮಿತಾಬ್‌ ಬಚ್ಚನ್‌ ಅಭಿನಯಿಸಿರುವ ಗುಲಾಬೊ ಸಿತಾಬೊ ಚಿತ್ರ ಸೇರಿದಂತೆ ಏಳು ಚಿತ್ರಗಳು ಒಟಿಟಿ ವೇದಿಕೆಯಾದ ಅಮೆಜಾನ್‌ ಪ್ರೈಂ ವಿಡಿಯೊದಲ್ಲಿ ಮೇ 29ರ ಬಳಿಕ ನೇರವಾಗಿ ಬಿಡುಗಡೆಯಾಗಲಿವೆ. ಈ ಚಿತ್ರಗಳು ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುವುದಿಲ್ಲ.

ಮುಂಬರುವ ದಿನಗಳಲ್ಲಿ ದೇಶದ ಮನೋರಂಜನಾ ಉದ್ದಿಮೆಯ ಭವಿಷ್ಯ ಹೇಗಿರಲಿದೆ ಎನ್ನುವುದಕ್ಕೆ ಈ ಬೆಳವಣಿಗೆ ನಿದರ್ಶನದಂತೆ ಇದೆ.

ಜ್ಯೋತಿಕಾ ಅಭಿನಯದ ಪೊನ್ಮಗಳ್‌ ವಂಧಲ್‌ ಚಿತ್ರದ ಪ್ರೀಮಿಯರ್‌ ಮೇ 29ರಂದು ಪ್ರೈಂ ವಿಡಿಯೊದಲ್ಲಿ ಬಿಡುಗಡೆ ಯಾಗಲಿದೆ. ಬಚ್ಚನ್‌ ಹಾಗೂ ಆಯುಷ್ಮಾನ್‌ ಖುರಾನಾ ಅಭಿನಯದ ಗುಲಾಬೊ ಸಿತಾಬೊ ಚಿತ್ರ ಜೂನ್‌ 12ರಂದು ಬಿಡುಗಡೆಯಾಗಲಿದೆ.

ಕನ್ನಡದ ಲಾ ಮತ್ತು ಫ್ರೆಂಚ್‌ ಬಿರಿಯಾನಿ ಕ್ರಮವಾಗಿ ಜೂನ್‌ 26 ಹಾಗೂ ಜುಲೈ 24ರಂದು, ನಟಿ ಕೀರ್ತಿ ಸುರೇಶ್‌ ಅಭಿನಯದ ಚಿತ್ರ ಪೆಂಗ್ವಿನ್‌ (ತಮಿಳು ಹಾಗೂ ತೆಲುಗು) ಜೂನ್‌ 19ರಂದು ಬಿಡುಗಡೆಯಾಗಲಿವೆ. ವಿದ್ಯಾಬಾಲನ್‌ ನಟನೆಯ ಶಕುಂತಲಾ ದೇವಿ (ಹಿಂದಿ), ಸೂಫಿಯಂ ಸುಜತಯುಂ (ಮಲಯಾಳ) ಬಿಡುಗಡೆ ದಿನಾಂಕ ನಿಗದಿಯಾಗಿಲ್ಲ.

ಚಿತ್ರಗಳ ಹಕ್ಕುಗಳನ್ನು ಮಾರಾಟ ಮಾಡಿ ತಕ್ಷಣವೇ ಹಣ ಪಡೆಯುವುದರಿಂದ ನಿರ್ಮಾಪಕರಿಗೆ ಒಟಿಟಿ ವರದಾನದಂತೆ ಆಗಿದೆ. ಆದರೆ, ಈ ವೇದಿಕೆಗಳಲ್ಲಿ ಚಿತ್ರಗಳ ಬಿಡು ಗಡೆಗೆ ಐನಾಕ್ಸ್‌, ಪಿವಿಆರ್‌ ಚಿತ್ರಮಂದಿರಗಳ ಮಾಲೀಕರ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT