ನಟ ವಿನೋದ್ ಪ್ರಭಾಕರ್ ಅವರು ಸಿನಿಮಾದ ಪಾತ್ರಗಳಿಗೆ ತಕ್ಕಂತೆ ದೇಹ ದಂಡಿಸುತ್ತಾರೆ. ‘ರಗಡ್’ ಚಿತ್ರಕ್ಕಾಗಿ ಅವರು ಎಂಟು ಪ್ಯಾಕ್ ಮಾಡಿದ್ದು, ದೊಡ್ಡ ಸುದ್ದಿಯಾಗಿತ್ತು. ಪ್ರಯೋಗಕ್ಕೆ ಒಗ್ಗಿಕೊಂಡರೂ ಈ ಹೀರೊಗೆ ಗೆಲುವು ಮರೀಚಿಕೆಯಾಗಿಯೂ ಉಳಿದಿದೆ. ಆದರೂ, ಅವರ ಕೈಯಲ್ಲಿ ಹಲವು ಚಿತ್ರಗಳಿವೆ.

ವಿನೋದ್ ನಟಿಸಿರುವ ‘ಶ್ಯಾಡೊ’ ಚಿತ್ರ ಅವರ ಪಾತ್ರದ ಮೂಲಕವೇ ಸಾಕಷ್ಟು ಸದ್ದು ಮಾಡುತ್ತಿದೆ. ಇದರಲ್ಲಿಯೂ ಅವರು ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅವರ ಪಾತ್ರದ ಹೆಸರು ಸಿಎಂ. ಹಾಗೆಂದಾಕ್ಷಣ ಅವರು ಮುಖ್ಯಮಂತ್ರಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆಯೇ? ಎಂದು ಹುಬ್ಬೇರಿಸಬೇಡಿ. ಸಿಎಂ ಅಂದರೆ ಕಾಮನ್ ಮ್ಯಾನ್ ಎಂದರ್ಥವಂತೆ.

ಸಿನಿಮಾದ ಶೂಟಿಂಗ್ ಪೂರ್ಣಗೊಳಿಸಿರುವ ಚಿತ್ರತಂಡ ಆಡಿಯೊ ಬಿಡುಗಡೆಗೊಳಿಸಿತು.

‘ಸಿನಿಮಾದ ಹಾಡಿನ ತುಣುಕುಗಳು ಇಷ್ಟವಾಗಿವೆ ಎಂದು ನಂಬಿದ್ದೇನೆ. ಜನರು ನೋಡಲೆಂದು ನಾವು ಸಿನಿಮಾ ಮಾಡುತ್ತೇವೆ. ಪ್ರಚಾರ ಸಿಕ್ಕಿದರೆ ಚಿತ್ರ ಜನರಿಗೆ ತಲುಪುತ್ತದೆ. ಒಳ್ಳೆಯ ಸಮಯ ನೋಡಿಕೊಂಡು ಬಿಡುಗಡೆ ಮಾಡುವುದು ಸೂಕ್ತ’ ಎಂದು ಅಭಿಪ್ರಾಯಪಟ್ಟರು ವಿನೋದ್ ಪ್ರಭಾಕರ್.

‘ಶರತ್ ಲೋಹಿತಾಶ್ವ ಅವರು ಚಿತ್ರದ ಮತ್ತೊಬ್ಬ ನಾಯಕ’ ಎಂದು ಹೊಗಳುವುದನ್ನು ಅವರು ಮರೆಯಲಿಲ್ಲ.

ಸಿಜಿ ಕೆಲಸ ಹೆಚ್ಚಿರುವ ಕಾರಣ ಚಿತ್ರದ ಬಿಡುಗಡೆಗೆ ತಡವಾಗಿದೆಯಂತೆ. ಪಕ್ಕಾ ಆ್ಯಕ್ಷನ್, ಥ್ರಿಲ್ಲರ್ ಸಿನಿಮಾ ಇದಾಗಿದೆ. ಇದಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ರವಿಗೌಡ. ಅವರು ತೆಲುಗಿನ ನಿರ್ದೇಶಕ ಪೂರಿ ಜಗನ್ನಾಥ್ ಅವರ ಶಿಷ್ಯ.

ಶೋಭಿತಾ ಈ ಚಿತ್ರದ ನಾಯಕಿ. ಶೇಕಡ 80ರಷ್ಟು ಚಿತ್ರೀಕರಣ ನಡೆದಿರುವುದು ಹೈದರಾಬಾದ್ನಲ್ಲಿ. ನಿರ್ಮಾಪಕ ಚಕ್ರವರ್ತಿ ಬಂಡವಾಳ ಹೂಡಿದ್ದಾರೆ. ಛಾಯಾಗ್ರಹಣ ಮನೋಹರ್ ಜೋಶಿ ಅವರದ್ದು. ಅಚ್ಚು ಸಂಗೀತ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.