ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಸಂಸತ್ ಭವನ ಉದ್ಘಾಟನೆ: ಶಾರುಖ್ ಖಾನ್, ಅಕ್ಷಯ್ ಕುಮಾರ್ ಸಂಭ್ರಮಿಸಿದ್ದು ಹೀಗೆ..

Published 28 ಮೇ 2023, 13:27 IST
Last Updated 28 ಮೇ 2023, 13:27 IST
ಅಕ್ಷರ ಗಾತ್ರ

ನವದೆಹಲಿ; ನವಭಾರತಕ್ಕೆ ಹೊಸ ಸಂಸತ್ ಭವನವು ತನ್ನ ಕೊಡುಗೆ ನೀಡಲಿದೆ. ದೇಶದ ಅಭಿವೃದ್ಧಿ ಸಂಕೇತವಾಗಿದೆ ಎಂದು ಬಾಲಿವುಡ್ ನಟರಾದ ಶಾರುಖ್ ಖಾನ್ ಮತ್ತು ಅಕ್ಷಯ್ ಕುಮಾರ್ ಕೊಂಡಾಡಿದ್ದಾರೆ.

ಶನಿವಾರ ರಾತ್ರಿಯೇ ಸಂಸತ್ ಭವನದ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಶಾರುಖ್ ಖಾನ್, ಪ್ರಧಾನಿ ಮೋದಿಯವರಿಂದ ಉದ್ಘಾಟನೆಯಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದರು.

‘ನಮ್ಮ ಸಂವಿಧಾನವನ್ನು ಎತ್ತಿಹಿಡಿಯುವ, ಈ ಮಹಾನ್ ರಾಷ್ಟ್ರದ ಎಲ್ಲ ನಾಗರಿಕರನ್ನು ಪ್ರತಿನಿಧಿಸುವ ಹಾಗೂ ವಿವಿಧತೆಯಲ್ಲಿ ಏಕತೆಯನ್ನು ರಕ್ಷಿಸುವ ಜನರಿಗೆ ಎಂತಹ ಭವ್ಯ ನಿವಾಸ ನರೇಂದ್ರ ಮೋದಿಜೀ. ನವ ಭಾರತಕ್ಕಾಗಿ ಹೊಸ ಸಂಸತ್ತಿನ ಕಟ್ಟಡ. ಗತವೈಭವದ ಕನಸಿನೊಂದಿಗೆ ಭಾರತ. ಜೈ ಹಿಂದ್! #MyParliamentMyPride’ಎಂದು ಶಾರುಖ್ ತಮ್ಮ ಧ್ವನಿಯನ್ನು ಒಳಗೊಂಡ ವಿಡಿಯೊ ಜೊತೆಗೆ ಬರೆದಿದ್ದಾರೆ.

‘ದೇಶಕ್ಕೆ ಸಂಸತ್ ಎಂಬುದು ದೇಹದಲ್ಲಿ ಆತ್ಮವಿದ್ದಂತೆ’ಎಂದು ಪ್ರಸಿದ್ಧ ಸ್ವದೇಶ್ ಆಡಿಯೊ ಟ್ರ್ಯಾಕ್‌ನ ವಿಡಿಯೊದಲ್ಲಿ ಶಾರುಖ್ ಖಾನ್ ಹೇಳಿದ್ದಾರೆ.

‘ಪ್ರಜಾಪ್ರಭುತ್ವದ ಆತ್ಮವು ತನ್ನ ಹೊಸ ಮನೆಯಲ್ಲಿ ದೃಢವಾಗಿ ಉಳಿಯಲಿ ಮತ್ತು ಮುಂದಿನ ಪೀಳಿಗೆಗೆ ಸ್ವಾತಂತ್ರ್ಯ, ಭ್ರಾತೃತ್ವ ಮತ್ತು ಸಮಾನತೆಯನ್ನು ಒದಗಿಸಲಿ ಎಂದು ಪ್ರಾಮಾಣಿಕವಾಗಿ ಪ್ರಾರ್ಥಿಸುತ್ತೇನೆ’ಎಂದು ಅವರು ಹೇಳಿದ್ದಾರೆ.

‘ನಮ್ಮ ಗತವೈಭವದ ಕನಸುಗಳ ಜೊತೆ ನವಭಾರತಕ್ಕೆ ಹೊಸ ಸಂಸತ್ ಭವನ... ಜೈಹಿಂದ್’ಎಂದು ಶಾರುಖ್ ಹೇಳಿದ್ದಾರೆ.

ಸಂಸತ್ ಭವನ ಉದ್ಘಾಟನೆ ಕೊಂಡಾಡಿದ ಶಾರುಖ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

‘ಹೊಸ ಸಂಸತ್ ಭವನದ ಕಟ್ಟಡವು ಪ್ರಜಾಪ್ರಭುತ್ವದ ಶಕ್ತಿ ಮತ್ತು ಅಭಿವೃದ್ಧಿಯ ಸಂಕೇತವಾಗಿದೆ. ಇದು ಸಂಪ್ರದಾಯದ ಜೊತೆ ಆಧುನಿಕತೆಯನ್ನು ಬೆಸೆಯುತ್ತದೆ’ ಎಂದು ಮೋದಿ ಹೇಳಿದ್ದಾರೆ.

ನಟ ಅಕ್ಷಯ್ ಕುಮಾರ್ ಸಹ ಸಂಸತ್ ಭವನದ ವಿಡಿಯೊಗೆ ತಮ್ಮದೇ ಧ್ವನಿ ನೀಡಿ ಸಂಭ್ರಮಿಸಿದ್ದಾರೆ.

‘ಸಂಸತ್ತಿನ ಈ ವೈಭವದ ಹೊಸ ಕಟ್ಟಡವನ್ನು ನೋಡಲು ಹೆಮ್ಮೆಯಾಗುತ್ತದೆ. ಇದು ಭಾರತದ ಬೆಳವಣಿಗೆಯ ಪ್ರತೀಕವಾಗಲಿ. #MyParliamentMyPride’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ದೆಹಲಿಯ ಚಾಂದಿನಿ ಚೌಕ್ ಪ್ರದೇಶದಲ್ಲಿ ಹುಟ್ಟಿ ಬೆಳೆದಿರುವ ಅಕ್ಷಯ್, ಇಂಡಿಯಾ ಗೇಟ್ ಬಳಿಯಿರುವ ಹೆಚ್ಚಿನ ಕಟ್ಟಡಗಳನ್ನು ಬ್ರಿಟಿಷರು ನಿರ್ಮಿಸಿರುವುದನ್ನು ಬಾಲ್ಯದಲ್ಲಿ ಗಮನಿಸುತ್ತಿದ್ದೆ ಎಂದು ಹೇಳಿದ್ದಾರೆ.

‘ಇಂದು, ಈ ಹೊಚ್ಚಹೊಸ ಮತ್ತು ಭವ್ಯವಾದ ಹೊಸ ಕಟ್ಟಡವನ್ನು ನೋಡಿದಾಗ ನನ್ನ ಹೃದಯವು ಹೆಮ್ಮೆಯಿಂದ ತುಂಬಿದೆ, ಭಾರತೀಯ ಸಂಸತ್ತು ಪ್ರಜಾಪ್ರಭುತ್ವದ ದೇವಾಲಯವಾಗಿದೆ, ಇದು ನವ ಭಾರತದ ಸಂಕೇತವಾಗಿದೆ. ಭಾರತವು ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಮಾತ್ರವಲ್ಲದೆ ಪ್ರಗತಿಯೊಂದಿಗೆ ಜಗತ್ತಿನ ಜೊತೆ ಮುನ್ನಡೆಯುತ್ತಿದೆ’ಎಂದು ಅವರು ಹೇಳಿದ್ದಾರೆ.

ಈ ದಿನವನ್ನು ಸಾಧ್ಯವಾಗಿಸಿದ್ದಕ್ಕಾಗಿ ಅಕ್ಷಯ್ ಕುಮಾರ್, ಪ್ರಧಾನಿ ಮೋದಿಯನ್ನು ಅಭಿನಂದಿಸಿದ್ದಾರೆ. ಮುಂದಿನ ವರ್ಷಗಳಲ್ಲಿ ಭಾರತವು ಹೆಚ್ಚು ಹೆಚ್ಚು ಪ್ರಗತಿ ಹೊಂದಲು ದೇವರ ಆಶೀರ್ವಾದ ಇರಲಿದೆ ಎಂದು ಅವರು ಹೇಳಿದ್ದಾರೆ.

ಅಕ್ಷಯ್ ಅವರ ಪೋಸ್ಟ್‌ಗೆ ಉತ್ತರಿಸಿರುವ ಪ್ರಧಾನಿ ಮೋದಿ, ‘ಹೊಸ ಸಂಸತ್ ಭವನವು ನಿಜವಾಗಿಯೂ ನಮ್ಮ ಪ್ರಜಾಪ್ರಭುತ್ವದ ದಾರಿದೀಪವಾಗಿದೆ’ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಿಗ್ಗೆ ಸಂಸತ್ ಭವನವನ್ನು ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT