ಭಾನುವಾರ, ಅಕ್ಟೋಬರ್ 24, 2021
28 °C

ಶಾರೂಖ್‌, ನಯನತಾರಾ ನಟಿಸುತ್ತಿರುವ ಹೊಸ ಸಿನಿಮಾದ ಹೆಸರು ಲೀಕ್‌?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್‌ ಬಾದ್‌ಶಾ ಶಾರೂಖ್‌ ಖಾನ್‌ ಹಾಗೂ ದಕ್ಷಿಣ ಭಾರತದ ಖ್ಯಾತ ನಟಿ ತಲೈವಿ ನಯನತಾರಾ ನಟಿಸುತ್ತಿರುವ ಹಿಂದಿ ಸಿನಿಮಾದ ಹೆಸರು ಲೀಕ್‌ ಆಗಿದೆ.  

ತಮಿಳು ನಿರ್ದೇಶಕ ಅಟ್ಲೀ ಕುಮಾರ್‌ ಅವರ ಚೊಚ್ಚಲ ಹಿಂದಿ ಚಿತ್ರದಲ್ಲಿ ಶಾರೂಖ್‌ ಖಾನ್‌ ಜೊತೆ ನಯನತಾರ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ಅವರು ಬಾಲಿವುಡ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಟ್ಲೀ ಕುಮಾರ್‌ ನಿರ್ದೇಶನದಲ್ಲಿ ನಯನತಾರಾ ನಟಿಸಿದ್ದ ತಮಿಳಿನ ರಾಜ-ರಾಣಿ, ಬಿಗಿಲ್‌ ಚಿತ್ರಗಳು ಯಶಸ್ಸು ಕಂಡಿವೆ. ಹಾಗಾಗಿ ತಮ್ಮ ಮೊದಲ ಬಾಲಿವುಡ್‌ ಚಿತ್ರದಲ್ಲಿ ನಯನತಾರಾಗೆ ಮುಖ್ಯ ಪಾತ್ರ ನೀಡಿದ್ದಾರೆ ಎಂದು ಕಾಲಿವುಡ್‌ ಮಂದಿ ಹೇಳುತ್ತಿದ್ದಾರೆ. 

ಪುಣೆ ನಗರದ ಮೆಟ್ರೊ ನಿಲ್ದಾಣದಲ್ಲಿ ಅಟ್ಲೀ ನಿರ್ದೇಶನದಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಶಾರುಖ್‌ ಹಾಗೂ ನಯನತಾರಾ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಚಿತ್ರತಂಡದವರು, ಮೆಟ್ರೊ ನಿಲ್ದಾಣದ ಅಧಿಕಾರಿಗಳಿಗೆ ಸಿನಿಮಾ ತಂಡದ ವಾಹನಗಳಿಗೆ ಪಾರ್ಕಿಂಗ್‌ ವ್ಯವಸ್ಥೆ ಮಾಡಿಕೊಡುವಂತೆ ಪತ್ರ ಬರೆದಿದ್ದರು. ಆ ಪತ್ರದಲ್ಲಿ ಸಿನಿಮಾ ಹೆಸರನ್ನು ಉಲ್ಲೇಖ ಮಾಡಲಾಗಿದೆ. 

ವಿಜಯ ಬಾಲನ್ ಎಂಬುವರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಈ ಸಿನಿಮಾದ ಬಗೆಗಿನ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. 

ಅಂದಹಾಗೇ ಆ ಪತ್ರದ ಪ್ರಕಾರ ಸಿನಿಮಾಗೆ ’ಲಯನ್‌’ ಎಂದು ಹೆಸರಿಡಲಾಗಿದೆ. ಆದರೆ ಚಿತ್ರತಂಡ ಸಿನಿಮಾದ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು