ಮುಂಬೈ: ಬಾಲಿವುಡ್ ನಟ ಶಾರುಕ್ ಖಾನ್ ನಟನೆಯ ಬಹುನಿರೀಕ್ಷಿತ ಚಿತ್ರ ‘ಕಿಂಗ್’ ಟೈಟಲ್ ವಿಡಿಯೊ ಭಾನುವಾರ ಬಿಡುಗಡೆಯಾಗಿದೆ.

ಶಾರುಕ್ 60ನೇ ಹುಟ್ಟುಹಬ್ಬದ ದಿನವೇ ಟೈಟಲ್ ವಿಡಿಯೊ ಬಿಡುಗಡೆಗೊಂಡಿದ್ದು, ಅಭಿಮಾನಿಗಳಲ್ಲಿ ಖುಷಿ ಹೆಚ್ಚಿಸಿದೆ.

‘ಪಠಾಣ್’ ಅದ್ಭುತ ಯಶಸ್ಸಿನ ಬೆನ್ನಲ್ಲೆ ಸಿದ್ದಾರ್ಥ ಆನಂದ್ ಅವರು ‘ಕಿಂಗ್’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸ್ವತಃ ಶಾರುಕ್ ಅವರೇ ಚಿತ್ರದ ನಿರ್ಮಾಣದ ಹೊಣೆಯನ್ನು ಹೊತ್ತಿದ್ದು, ಅವರ ಮಗಳು ಸುಹನಾ ಖಾನ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

ಇದೊಂದು ಪಕ್ಕಾ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಟೈಟಲ್ ವಿಡಿಯೊದಲ್ಲಿ ಇದನ್ನು ಕಾಣಬಹುದು. ಸಮುದ್ರ ಮಧ್ಯದಲ್ಲಿ ವಿಲನ್ಗಳ ಜೊತೆ ಕಾದಾಡುವ ಶಾರುಕ್, ರಕ್ತಸಿಕ್ತವಾಗಿ ಕಿಂಗ್ ಕಾರ್ಡ್ ಅನ್ನು ಬಾಯಲ್ಲಿ ಕಚ್ಚಿಹಿಡಿಯುವ ದೃಶ್ಯದ ಮೂಲಕ ಟೀಸರ್ ಕೊನೆಗೊಳ್ಳುತ್ತದೆ.

ಗ್ರೇ ಬಣ್ಣದ ಕೂದಲು, ಸಿಗ್ನೆಚರ್ ನಡಿಗೆ... ಹಿಂದೆಂದೂ ಕಾಣದ ಶಾರುಕ್ರನ್ನು ಕಿಂಗ್ನಲ್ಲಿ ತೋರಿಸಲಾಗಿದೆ. ‘ನೂರು ದೇಶಗಳಲ್ಲಿ ಕುಖ್ಯಾತನಾದ ಇವನನ್ನು ಒಂದೇ ಒಂದು ಹೆಸರಿನಲ್ಲಿ ಕರೆಯುತ್ತಾರೆ... ಕಿಂಗ್’ ಎಂಬ ಡೈಲಾಗ್ ಮೂಲಕ ಶಾರುಕ್ ಪಾತ್ರವನ್ನು ಪರಿಚಯಿಸಲಾಗಿದೆ.

ಟೈಟಲ್ ಟೀಸರ್ ನೋಡಿದ ಅಭಿಮಾನಿಗಳು ಸಂತಸ ಹಂಚಿಕೊಂಡಿದ್ದಾರೆ. ಕಿಂಗ್ ಮತ್ತೊಂದು ಬ್ಲಾಕ್ಬಾಸ್ಟರ್ ಆಗುವುದಲ್ಲಿ ಅನುಮಾನವಿಲ್ಲ ಎಂದು ಹೇಳಿದ್ದಾರೆ.

ಡಂಕಿ ಸಿನಿಮಾದ ನಂತರ ಚಿತ್ರರಂಗದಿಂದ ಸಾಕಷ್ಟು ವಿರಾಮ ತೆಗೆದುಕೊಂಡಿದ್ದ ಶಾರುಕ್, ಮತ್ತೊಂದು ಆ್ಯಕ್ಷನ್ ಪ್ಯಾಕ್ ಸಿನಿಮಾದ ಮೂಲಕ ಅಭಿಮಾನಿಗಳು ರಂಜಿಸಲು ಸಿದ್ಧರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.