ಭಾನುವಾರ, ನವೆಂಬರ್ 27, 2022
27 °C
ಶಾರುಖ್ ಖಾನ್ ಮೈಕಟ್ಟು ನೋಡಿ ಅಭಿಮಾನಿಗಳು ಫಿದಾ

ಆಕರ್ಷಕ ಮೈಕಟ್ಟು ಪ್ರದರ್ಶಿಸಿದ ಬಾಲಿವುಡ್ ನಟ ಶಾರುಖ್ ಖಾನ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ಬಾಲಿವುಡ್ ನಟ ಶಾರುಖ್ ಖಾನ್ ಎಂದರೆ ಅವರ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಅದರಲ್ಲೂ ಶಾರುಖ್ ಹೊಸ ಸಿನಿಮಾ ಬಿಡುಗಡೆಯಾಗುತ್ತದೆ ಎಂದಾದರೆ ಅಲ್ಲಿ ವಿಶೇಷ ಕ್ರೇಜ್ ಇದ್ದೇ ಇರುತ್ತದೆ.

ಈ ಬಾರಿ ಶಾರುಖ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ, ಶರ್ಟ್ ಬಿಚ್ಚಿರುವ, ಕಟ್ಟುಮಸ್ತಾದ ದೇಹವನ್ನು ಪ್ರದರ್ಶಿಸುವ ಫೋಟೊ ಒಂದನ್ನು ಪೋಸ್ಟ್ ಮಾಡಿದ್ದರು.

ಶಾರುಖ್ ಅವರ ಫೋಟೊ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಯುವಕರನ್ನೂ ನಾಚಿಸುವಂತೆ ಅವರು ಮೈ ಹುರಿಗೊಳಿಸಿದ್ದಾರೆ ಎನ್ನುವ ಮಾತು ಕೇಳಿಬಂದಿದೆ.

ಶಾರುಖ್ ಫೋಟೊಗೆ ಅಭಿಮಾನಿಗಳು ಮಾತ್ರವಲ್ಲ, ಸೆಲೆಬ್ರಿಟಿಗಳು ಕೂಡ ಕಾಮೆಂಟ್ ಮಾಡಿದ್ದಾರೆ.

ಶಾರುಖ್ ಪತ್ನಿ ಗೌರಿ ಖಾನ್ ಅವರು, ಓ ಗಾಡ್, ಅವರೀಗ ಶರ್ಟ್ ಅನ್ನೂ ತೆಗೆಯುತ್ತಿದ್ದಾರೆ ಎಂದು ಆಶ್ಚರ್ಯದಿಂದ ಫೋಟೊಗೆ ಕಾಮೆಂಟ್ ಮಾಡಿದ್ದಾರೆ.

ಪಠಾಣ್ ಚಿತ್ರದ ಪ್ರಚಾರದಲ್ಲಿ ಶಾರುಖ್ ತೊಡಗಿಸಿಕೊಂಡಿದ್ದು, 2023ರ ಜನವರಿ 25ರಂದು ಚಿತ್ರ ತೆರೆಗೆ ಬರಲಿದೆ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು