ಮುಂಬೈ: 50 ದಿನಗಳ ಕಾಲ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿರುವ ಈ ವರ್ಷದ ಬಾಲಿವುಡ್ ಬ್ಲಾಕ್‌ಬಸ್ಟರ್, ಶಾರುಖ್ ಖಾನ್–ದೀಪಿಕಾ ಪಡುಕೋಣೆ ಅಭಿನಯದ‘ಪಠಾಣ್’ ಚಿತ್ರ ನಾಳೆಯಿಂದ ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗಲಿದೆ.

ಈ ಬಗ್ಗೆ ಪ್ರೈಮ್ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಅಧಿಕೃತವಾಗಿ ಹಂಚಿಕೊಂಡಿದ್ದು, ನಾಲ್ಕು ವರ್ಷಗಳಿಗಿಂತಲೂ ಹೆಚ್ಚು ಕಾಲ ಹಿರಿತೆರೆಯಿಂದ ದೂರವಿದ್ದ ಶಾರುಖ್ ಖಾನ್ ಬ್ಲಾಕ್‌ಬಸ್ಟರ್ ಚಿತ್ರದೊಂದಿಗೆ ಮತ್ತೆ ಬಂದಿದ್ದಾರೆ ಎಂದಿದೆ.

ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಮಾರ್ಚ್ 22 ರಂದು ಪಠಾಣ್ ಸ್ಟ್ರೀಮ್ ಆಗಲಿದೆ ಎಂದು ಪ್ರೈಮ್ ವಿಡಿಯೊ ಟ್ವೀಟ್ ಮಾಡಿದೆ.

ಸಿದ್ಧಾರ್ಥ್ ಆನಂದ್ ನಿರ್ದೇಶನದ ಚಿತ್ರ ಜನವರಿ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆಯಲ್ಲಿ ವಿಶ್ವದಾದ್ಯಂತ ₹ 1,000 ಕೋಟಿ ಬಾಚಿತ್ತು.

ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಚಿತ್ರದಲ್ಲಿ ಜಾನ್ ಅಬ್ರಹಾಂ, ದೀಪಿಕಾ ಪಡುಕೋಣೆ, ಡಿಂಪಲ್ ಕಪಾಡಿಯಾ ಮತ್ತು ಅಶುತೋಷ್ ರಾಣಾ ಸಹ ನಟಿಸಿದ್ದಾರೆ. ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ಬಂದುಹೋಗುತ್ತಾರೆ.

ಸಲ್ಮಾನ್ ಖಾನ್ ಅವರ ‘ಏಕ್ ಥಾ ಟೈಗರ್’ ಮತ್ತು ‘ಟೈಗರ್ ಜಿಂದಾ ಹೈ’, ಮತ್ತು ಹೃತಿಕ್ ರೋಷನ್ ಅವರ ‘ವಾರ್’ ನಂತರ ನಿರ್ಮಾಪಕ ಆದಿತ್ಯ ಚೋಪ್ರಾ ಅವರು ಗೂಢಚಾರಿಕೆ ಕಥಾವಸ್ತು ಇಟ್ಟುಕೊಂಡು ನಿರ್ಮಿಸಿರುವ ನಾಲ್ಕನೇ ಚಿತ್ರ ‘ಪಠಾಣ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.