ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿ ಅವೃತ್ತಿಯಲ್ಲಿ ಅಧಿಕ ಗಳಿಕೆ ಕಂಡ ಬಾಲಿವುಡ್ ಸಿನಿಮಾ 'ಪಠಾಣ್'

Last Updated 11 ಫೆಬ್ರವರಿ 2023, 11:33 IST
ಅಕ್ಷರ ಗಾತ್ರ

ಮುಂಬೈ: ಶಾರುಖ್‌ ಖಾನ್‌ ನಟನೆಯ ಬಾಲಿವುಡ್‌ ಚಿತ್ರ ‘ಪಠಾಣ್‌’, ಬಿಡುಗಡೆಗೊಂಡ 3ನೇ ವಾರವೂ ಗಳಿಕೆಯಲ್ಲಿ ಮುಂಚೂಣಿಯಲ್ಲಿದೆ. ಪ್ರಪಂಚದಾದ್ಯಂತ ₹ 901 ಕೋಟಿ ಗಳಿಸಿದೆ.

ಯಶ್ ರಾಜ್ ಫಿಲ್ಮ್ಸ್ ನೀಡಿರುವ ಮಾಹಿತಿ ಪ್ರಕಾರ, ಸಿದ್ಧಾರ್ಥ್ ಆನಂದ್ ನಿರ್ದೇಶನದ ಚಿತ್ರವು ವಿದೇಶಗಳಲ್ಲಿ ₹ 342.60 ಕೋಟಿ ಮತ್ತು ಭಾರತದಲ್ಲಿ ₹ 558.40 ಕೋಟಿ ಗಳಿಸಿದೆ.

‘ಪಠಾಣ್’ ಚಿತ್ರವು ಹಿಂದಿ ಆವೃತ್ತಿಯಲ್ಲಿ ವಿಶ್ವದಾದ್ಯಂತ ಅತಿ ಹೆಚ್ಚು ಹಣ ಗಳಿಸಿದ ಬಾಲಿವುಡ್‌ ಸಿನಿಮಾ ಎನಿಸಿದೆ.

ನಾಲ್ಕು ವರ್ಷಗಳ ನಂತರ ಶಾರುಖ್ ದೊಡ್ಡ ಪರದೆಯಲ್ಲಿ ಕಾಣಿಸಿಕೊಂಡಿದ್ದು, ದೀಪಿಕಾ ಪಡುಕೋಣೆ, ಡಿಂಪಲ್ ಕಪಾಡಿಯಾ ಮತ್ತು ಆಶುತೋಷ್ ರಾಣಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಸಲ್ಮಾನ್ ಖಾನ್ ಅವರ ‘ಏಕ್ ಥಾ ಟೈಗರ್’ ಮತ್ತು ‘ಟೈಗರ್ ಜಿಂದಾ ಹೈ’, ಹಾಗೂ ಹೃತಿಕ್ ರೋಷನ್ ಅವರ ‘ವಾರ್’ ನಂತರ ನಿರ್ಮಾಪಕ ಆದಿತ್ಯ ಚೋಪ್ರಾ ಅವರು ನಿರ್ಮಿಸಿರುವ ಚಿತ್ರ ‘ಪಠಾಣ್‌’.

ಚಿತ್ರದ ‘ಬೇಷರಮ್‌ ರಂಗ್‌’ ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣದ ತುಂಡು ಉಡುಗೆ ಧರಿಸಿ ಕಾಣಿಸಿಕೊಂಡಿದ್ದರು. ಈ ಮೂಲಕ ಚಿತ್ರತಂಡ ಕೆಲವರ ಭಾವನೆ ಘಾಸಿಗೊಳಿಸಿದೆ ಎಂದು ಕೆಲ ಸಂಘಟನೆಗಳು ಚಿತ್ರ ಬಹಿಷ್ಕಾರಕ್ಕೆ ಕರೆ ನೀಡಿದ್ದವು. ಇದರ ಹೊರತಾಗಿಯೂ ‘ಪಠಾಣ್‌’ ಅಭಿಮಾನಿಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT