ಶಕುನ್ ಭಾತ್ರಾ ಅವರ ಮುಂದಿನ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ, ಸಿದ್ಧಾಂತ್ ಚತುರ್ವೇದಿ ಹಾಗೂ ಅನನ್ಯಾ ಪಾಂಡೆ ಮೂರು ಜನ ನಟಿಸಲಿದ್ದಾರೆ. ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವವರು ಕರಣ್ ಜೋಹರ್.

ಸುಮಾರು ಎರಡು ವರ್ಷಗಳ ನಂತರ ನಟಿ ದೀಪಿಕಾ ಪಡುಕೋಣೆ ‘ಛಪಾಕ್’ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ಅವರು ಆ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದು, ಮುಂದಿನ ಸಿನಿಮಾ ಯಾವುದು ಎಂದು ಅವರು ಘೋಷಣೆ ಮಾಡಬೇಕಷ್ಟೆ.

ಈಗ ದೀಪಿಕಾ ಪಡುಕೋಣೆ, ಶಕುನ್ ಭಾತ್ರಾ ಅವರು ನಿರ್ದೇಶಿಸುತ್ತಿರುವ ಹೊಸ ಸಿನಿಮಾವೊಂದರಲ್ಲಿ ಸಿದ್ಧಾಂತ್ ಚತುರ್ವೇದಿ ಹಾಗೂ ಅನನ್ಯಾ ಪಾಂಡೆ ಜೊತೆ ನಟಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಈ ಹಿಂದೆ ಶಕುನ್ ‘ಕಪೂರ್ ಆ್ಯಂಡ್ ಸನ್ಸ್’ ಸೇರಿ ಎರಡು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈ ಎರಡೂ ಚಿತ್ರಗಳನ್ನು ನಿರ್ಮಾಣ ಮಾಡಿದವರು ಕರಣ್ ಜೋಹರ್.

‘ಕಪೂರ್ ಆ್ಯಂಡ್ ಸನ್ಸ್’ ಬಾಕ್ಸ್ ಆಫೀಸಿನಲ್ಲಿ ಒಳ್ಳೆ ಗಳಿಕೆ ಮಾಡಿತ್ತು. ಹಾಗೇ ಅದಕ್ಕೆ ವಿಮರ್ಶೆಗಳು ಕೇಳಿಬಂದಿದ್ದವು.

ಈಗ ಈ ಹೊಸ ಸಿನಿಮಾದಲ್ಲಿ ಸಿದ್ಧಾಂತ್ ಚತುರ್ವೇದಿ ಅವರು ನಟಿಸುತ್ತಿದ್ದಾರೆ. ‘ಗಲ್ಲಿ ಬಾಯ್’ ಚಿತ್ರದ ಎಂ.ಸಿ.ಷೇರ್ ಪಾತ್ರಧಾರಿಯಾಗಿ ನಟಿಸಿದ್ದ ಸಿದ್ಧಾಂತ್ಗೆ, ಆ ಪಾತ್ರ ಹೆಚ್ಚು ಜನಪ್ರಿಯತೆಯನ್ನು ತಂದುಕೊಟ್ಟಿದೆ. ಇದಲ್ಲದೇ ‘ಬಂಟಿ ಔರ್ ಬಬ್ಲಿ 2’ ಚಿತ್ರದಲ್ಲೂ ನಾಯಕನಾಗಿ ನಟಿಸುತ್ತಿದ್ದಾರೆ. ಅನನ್ಯಾ ಪಾಂಡೆ ನಟಿಸಿರುವ ‘ಪತಿ, ಪತ್ನಿ ಔರ್ ವೋ’ ಚಿತ್ರವು ಥಿಯೇಟರ್ಗಳಲ್ಲಿ ಪ್ರದರ್ಶನವಾಗುತ್ತಿದ್ದು, ಒಳ್ಳೆ ಗಳಿಕೆ ಮಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.