ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಶಾಕುಂತಲಂ’: ಹೊಸ ಚಿತ್ರ ಹಂಚಿಕೊಂಡ ನಟಿ ಸಮಂತಾ– ಪ್ರಚಾರ ಜೋರು

Published : 19 ಜನವರಿ 2023, 6:30 IST
ಫಾಲೋ ಮಾಡಿ
Comments

ಹೈದಾರಾಬಾದ್: ಟಾಲಿವುಡ್‌ ಬ್ಯೂಟಿ ಸಮಂತಾ ರುತ್ ಪ್ರಭು ತಮ್ಮ ಮುಂದಿನ ಚಿತ್ರ ’ಶಾಕುಂತಲಂ’ನ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ.

ಶಾಕುಂತಲಂ ಚಿತ್ರದ ಕೆಲವು ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿಹಂಚಿಕೊಂಡಿದ್ದಾರೆ. ಪೌರಾಣಿಕ ಹಿನ್ನಲೆ ಹೊಂದಿರುವ ಶಾಕುಂತಲಂ ಚಿತ್ರದಲ್ಲಿ ನಟಿಸಿರುವ ಸಮಂತಾ, ಶ್ವೇತವರ್ಣದ ಉಡುಗೆಯಲ್ಲಿ ಮಿಂಚುತ್ತಿದ್ದಾರೆ. ನಟಿ ಪೋಟೋಗಳಲ್ಲಿ ಹೂವಿನ ಆಭರಣಗಳನ್ನು ಧರಿಸಿ ಕಾಣಿಸಿಕೊಂಡಿದ್ದಾರೆ. ಈ ದೃಶ್ಯಗಳು ಮನಮೋಹಕರವಾಗಿ ಮೂಡಿಬಂದಿದೆ.

ಚಿತ್ರದ ಕೆಳಗೆ ನಿಮಗಾಗಿ ಮಲ್ಲಿಕಾ, ಶಾಕುಂತಲಂ ಎಂದು ನಟಿ ಬರೆದುಕೊಂಡಿದ್ದಾರೆ. ಚಿತ್ರದ ಹೊಸ ಹಾಡಿನ ಹೆಸರು ಮಲ್ಲಿಕಾ. ಸಮಂತಾರವರ ಪೋಸ್ಟ್‌ಗಳಿಗೆ ಅಭಿಮಾನಿಗಳ ಹೃದಯ ಎಮೋಜಿಗಳು ಇನ್ಟಾಗ್ರಾಮ್‌ಗಳಲ್ಲಿ ತುಂಬಿತ್ತು. ಸಮಂತಾ ಅವರ ಮಾಜಿ ಪತಿ ನಾಗ ಚೈತನ್ಯ ಅವರ ಸೋದರ ಸಂಬಂಧಿ ಆಶ್ರಿತಾ ದಗ್ಗುಬಾಟಿ ಅವರು ಬಿಳಿ ಹೃದಯದ ಎಮೋಜಿ ಕೊಟ್ಟಿದ್ದಾರೆ. ಈ ಅಲೌಕಿಕ ನೋಟವು ಪ್ರತಿಯೊಬ್ಬರ ಹೃದಯವನ್ನು ಖಚಿತವಾಗಿ ಕದ್ದಿದೆ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.

ಈ ಹಿಂದೆ ನಟಿ ಸಮಂತಾ ಮಯೋಸೈಟಿಸ್ ಕಾಯಿಲೆಗೆ ತುತ್ತಾಗಿದ್ದರು. ಈ ವಿಚಾರವಾಗಿ ಬಹಳ ನೊಂದಿದ್ದ ನಟಿ, ಕೇಲವರ ಕಮೆಂಟ್‌ಗಳಿಗೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದರು. ತೆಲುಗು ನಟ ನಾಗ ಚೈತನ್ಯರವರಿಂದ ವಿಚ್ಛೇದನ ಪಡೆದ ಬಳಿಕ ಮಾನಸಿಕವಾಗಿ ಕುಗ್ಗಿ ಹೋಗಿದ್ದರು.

ಇದರ ನಡುವೆ ಸಾಲು ಸಾಲು ಚಿತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಯವ ಮೂಲಕ ಮತ್ತೆ ವೃತ್ತಿ ಜೀವನದಲ್ಲಿ ಕಾಮ್‌ ಬ್ಯಾಕ್ ಮಾಡಿದ್ದಾರೆ. ಶಾಕುಂತಲಂ ಚಿತ್ರ ಇದೇ ಫೆಬ್ರುವೆರಿ 17ಕ್ಕೆ ತೆರೆ ಕಾಣಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT