ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಡಾರ್ಲಿಂಗ್‌ ಕೃಷ್ಣ ಜೊತೆ ಶಶಾಂಕ್‌ ಮತ್ತೊಂದು ಸಿನಿಮಾ

Published 26 ಜೂನ್ 2024, 18:34 IST
Last Updated 26 ಜೂನ್ 2024, 18:34 IST
ಅಕ್ಷರ ಗಾತ್ರ

‘ಮೊಗ್ಗಿನ ಮನಸು’ ಖ್ಯಾತಿಯ ನಿರ್ದೇಶಕ ಶಶಾಂಕ್‌ ನಟ ಡಾರ್ಲಿಂಗ್‌ ಕೃಷ್ಣ ಅವರಿಗೆ ಮತ್ತೊಮ್ಮೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ‘ಕೌಸಲ್ಯಾ ಸುಪ್ರಜಾ ರಾಮ’ ಸಿನಿಮಾ ಬಳಿಕ ಈ ಕಾಂಬಿನೇಷನ್‌ನಲ್ಲಿ ಹೊಸಚಿತ್ರ ಸೆಟ್ಟೇರಲಿದ್ದು, ಇದೊಂದು ಪ್ಯಾನ್‌ ಇಂಡಿಯಾ ಸಿನಿಮಾ ಎಂದಿದ್ದಾರೆ ಶಶಾಂಕ್‌.  

‘ಮೊಗ್ಗಿನ ಮನಸು’, ‘ಕೃಷ್ಣನ್‌ ಲವ್‌ ಸ್ಟೋರಿ’, ‘ಕೃಷ್ಣ ಲೀಲಾ’, ‘ಲವ್‌ 360’.. ಹೀಗೆ ಸಾಲು ಸಾಲು ಪ್ರೇಮಕಥೆಗಳನ್ನು ತೆರೆಯ ಮೇಲೆ ಹೊತ್ತು ತಂದಿದ್ದ ನಿರ್ದೇಶಕ ಶಶಾಂಕ್‌, ‘ಕೌಸಲ್ಯಾ ಸುಪ್ರಜಾ ರಾಮ’ ಸಿನಿಮಾದಲ್ಲಿ ಹೊಸ ಬಗೆಯ ಕಥೆಯೊಂದನ್ನು ಪ್ರೇಕ್ಷಕರ ಎದುರಿಗೆ ಇರಿಸಿದ್ದರು. ಇದು ಪ್ರೇಕ್ಷಕರನ್ನು ಸೆಳೆದಿತ್ತು. ‘ನಮ್ಮ ಮೊದಲ ಸಿನಿಮಾಗೆ ಪ್ರೇಕ್ಷಕರು ತೋರಿದ ಪ್ರೀತಿ, ಬೆಂಬಲಕ್ಕೆ ಧನ್ಯವಾದ. ಇದೀಗ ನಾವು ಮತ್ತೆ ಹೊಸ ಸಿನಿಮಾದೊಂದಿಗೆ ಬರುತ್ತಿದ್ದೇವೆ’ ಎಂದಿದ್ದಾರೆ ಶಶಾಂಕ್‌. ಸದ್ಯ ಡಾರ್ಲಿಂಗ್‌ ಕೃಷ್ಣ ಅವರು ‘ಆರ್‌.ಸಿ. ಸ್ಟುಡಿಯೊಸ್‌’ನಡಿ ನಿರ್ದೇಶಕ ಆರ್‌.ಚಂದ್ರು ನಿರ್ಮಾಣ ಮಾಡುತ್ತಿರುವ, ರಾಜ್‌ ಮೋಹನ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ‘ಫಾದರ್‌’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಪೂರ್ಣಗೊಂಡ ಬಳಿಕ ಹೊಸ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. 

ಶಶಾಂಕ್‌ 
ಶಶಾಂಕ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT