ಬಿಗ್‌ಬಾಸ್‌ನಿಂದ ಇಲ್ಲಿಯವರೆಗಿನ ಪಯಣ ಹೇಗಿತ್ತು?
ಕನ್ನಡ ಸಿನಿಮಾದಲ್ಲಿ ನಾಯಕನಾಗಿ ಇದು ನನ್ನ ಮೊದಲ ಹೆಜ್ಜೆ. ಬಿಗ್‌ಬಾಸ್ ವಿಜೇತನಾದ ಬೆನ್ನಲ್ಲೇ ಎರಡು ಒಳ್ಳೆಯ ಸಿನಿಮಾಗಳು ಬಂದಿದ್ದವು. ಆದರೆ ದುರದೃಷ್ಟವಶಾತ್ ಕೋವಿಡ್ ಬಂದು ಅವುಗಳು ಸೆಟ್ಟೇರಲೇ ಇಲ್ಲ. ಬಿಗ್‌ಬಾಸ್‌ನಿಂದ ಹೊರಬಂದಾಕ್ಷಣ ಒಂದಿಷ್ಟು ಸಿನಿಮಾಗಳ ಅವಕಾಶ ಸಿಗುವುದು ಸಾಮಾನ್ಯ. ನನಗೂ ಹೀಗೆ ಆಗಿತ್ತು. ಆದರೆ ಯಾವ ಪಾತ್ರಗಳೂ ನನ್ನನ್ನು ಸೆಳೆಯಲಿಲ್ಲ. ಬಿಗ್‌ಬಾಸ್‌ನಲ್ಲಿದ್ದ ಸಂದರ್ಭದಲ್ಲಿ ಸುದೀಪ್ ಅವರು ಹೇಳಿದ ಮಾತೊಂದನ್ನು ನೆನಪಿಸಿಕೊಳ್ಳುತ್ತೇನೆ. ‘ಬಿಗ್‌ಬಾಸ್ ಗೆಲುವು ಒಂದು ಬೆಟ್ಟ ಹತ್ತಿದಂತೆ’ ಎಂದು ಅವರು ಹೇಳಿದ್ದರು. ಒಂದು ಶಿಖರ ಹತ್ತುವುದು ಒಂದು ಸಾಧನೆ ಮಾಡಿದಂತೆ.
ಈಗಾಗಲೇ ಏರಿದ ಬೆಟ್ಟದಿಂದ ನೇರವಾಗಿ ಇನ್ನೊಂದು ಬೆಟ್ಟಕ್ಕೆ ಹಾರಲು ಸಾಧ್ಯವಿಲ್ಲವಲ್ಲ. ಒಂದು ಬೆಟ್ಟವನ್ನು ಇಳಿದು ಮತ್ತೊಂದು ಬೆಟ್ಟಕ್ಕೆ ಏರಲು ಪ್ರತಿಯೊಬ್ಬರೂ ಅವರದೇ ಆದ ಸಮಯ ತೆಗೆದುಕೊಳ್ಳುತ್ತಾರೆ. ನಾನು ಇದೀಗ ಸಿನಿಮಾವೆಂಬ ಇನ್ನೊಂದು ಬೆಟ್ಟ ಹತ್ತಲು ಮೊದಲ ಹೆಜ್ಜೆ ಇಟ್ಟಿದ್ದೇನೆ. ಹಲವು ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದೆ. ‘ಕಾಂತಾರ’ದ ಪಾತ್ರ ಈ ನಿಟ್ಟಿನಲ್ಲಿ ನನಗೆ ಹೊಸ ತಿರುವು ನೀಡಿತು. ನನಗೆ ಆ ಸಿನಿಮಾದಲ್ಲಿ ಸಿಕ್ಕ ಪಾತ್ರದ ತೆರೆ ಅವಧಿ ಚಿಕ್ಕದಾಗಿದ್ದರೂ ಅದನ್ನು ನನ್ನ ನಟನೆಯ ಸಾಮರ್ಥ್ಯವನ್ನು ಪ್ರದರ್ಶಿಸಲು ಸಮರ್ಥವಾಗಿ ಬಳಸಿಕೊಂಡೆ. ಈ ಎರಡನೇ ಬೆಟ್ಟ ಏರುವಾಗಲೂ ಹಲವು ಅಡೆತಡೆಗಳು ಎದುರಾಗಿವೆ. ಇವುಗಳನ್ನು ಎದುರಿಸಿ ಮುನ್ನಡೆಯಲು ಕೊಂಚ ಸಮಯ ಹಿಡಿಯಿತು. ಸಿನಿಮಾದಲ್ಲಿ ಇಲ್ಲಿಯವರೆಗೆ ಸಿಕ್ಕ ಅವಕಾಶಗಳೆಲ್ಲವೂ ಚೆನ್ನಾಗಿದ್ದವು. ನಿಧಾನವಾದರೂ ಅಚ್ಚುಕಟ್ಟಾಗಿ ನನ್ನ ಸಿನಿಪಯಣ ಸಾಗಿದೆ.

ಉದ್ಯಮಿಯಾಗಿದ್ದವರು ‘ಗಲ್ಲಿ ಕಿಚನ್’ ಬಿಟ್ಟಿದ್ದು ಏಕೆ?
ಅದು ನನ್ನ ಆರು ವರ್ಷದ ಕೂಸಾಗಿತ್ತು. ಹೋಟೆಲ್ ಉದ್ಯಮ ಎನ್ನುವುದು ಸೇವಾಕ್ಷೇತ್ರ. ಸಿನಿಮಾದಲ್ಲೇ ಮುಂದಿನ ಹೆಜ್ಜೆಗಳನ್ನು ಇಡಲು ಇದು ಸೂಕ್ತ ಸಮಯ ಎಂದು ನನಗೆ ಅನಿಸಿತು. ಇಲ್ಲಿಗೆ ಹೆಜ್ಜೆ ಇಟ್ಟ ಮೇಲೆ ಜವಾಬ್ದಾರಿಯೂ ಹೆಚ್ಚುತ್ತದೆ. ಇದೀಗ ‘ಜಸ್ಟ್ ಮ್ಯಾರಿಡ್’ ಬಿಡುಗಡೆಯಾಗುತ್ತಿದೆ. ಸೆ.12ಕ್ಕೆ ‘ನಿದ್ರಾದೇವಿ ನೆಕ್ಸ್ಟ್ ಡೋರ್’ ತೆರೆಗೆ ಬರಲಿದೆ. ಹೀಗೆ ಸಿನಿಮಾದಲ್ಲೇ ಮುಂದುವರಿಯಲು ನಿರ್ಧರಿಸಿದ ಕಾರಣ ಗಲ್ಲಿ ಕಿಚನ್ ಮಾರಿದೆ. ನನ್ನಂತೆಯೇ ಆಸಕ್ತಿಯಿಂದ ಈ ಉದ್ಯಮವನ್ನು ನಡೆಸುವವರ ಕೈಗೆ ಅದನ್ನು ಕೊಟ್ಟಿದ್ದೇನೆ.
‘ಜಸ್ಟ್ ಮ್ಯಾರಿಡ್’ ಹೇಗೆ ಮೂಡಿಬಂದಿದೆ?
ಇಡೀ ಚಿತ್ರ ಬಹಳ ರಿಚ್ ಆಗಿ ಬಂದಿದೆ. ಟ್ರೇಲರ್‌ನಲ್ಲೇ ಇದಕ್ಕೆ ನಿಮಗೆ ಸಾಕ್ಷಿಯಿದೆ. ನಿರ್ದೇಶಕರಾದ ಬಾಬಿ ಅವರಿಗೆ ಅವರದ್ದೇ ಆದ ಯೋಚನೆಯಿತ್ತು. ಸಿನಿಮಾದೊಳಗೆ ಕುಟುಂಬವನ್ನು ಈ ರೀತಿಯೇ ರಿಚ್ ಆಗಿ ತೋರಿಸಬೇಕು ಎನ್ನುವ ಆಸೆ ಅವರಿಗಿತ್ತು. ಇದಕ್ಕೆ ತಕ್ಕ ಹಾಗೆ ಸಿನಿಮಾ ನಿರ್ಮಾಣಗೊಂಡಿದೆ. ಅಜನೀಶ್ ಅವರು ಸಂಗೀತದ ಕೆಲಸಗಳಲ್ಲಿ ತಲ್ಲೀನರಾಗಿದ್ದರು. ಹೀಗಾಗಿ ಬಾಬಿ ಅವರೇ ಇಡೀ ಸಿನಿಮಾವನ್ನು ಮುನ್ನಡೆಸಿದರು. ನಿರ್ಮಾಪಕನಾಗಿ ಸಿನಿಮಾಗೆ ಬೇಕಾದ ಎಲ್ಲವನ್ನೂ ಅಜನೀಶ್ ನೀಡಿದ್ದಾರೆ.
ನಿಮ್ಮ ಪಾತ್ರದ ಬಗ್ಗೆ..
ನಾನು ‘ಸೂರ್ಯ’ ಎಂಬ ಪಾತ್ರದಲ್ಲಿ ನಟಿಸಿದ್ದು, ಅಂಕಿತಾ ‘ಸಹನ’ ಎಂಬ ಪಾತ್ರದಲ್ಲಿದ್ದಾರೆ. ಒಂದು ದೊಡ್ಡ ಕುಟುಂಬದಲ್ಲಿ ಒಬ್ಬನೇ ಮಗ ಇದ್ದಾಗ ಆತನಿಗೆ ಸಿಗುವ ಪ್ರೀತಿ ಬೆಟ್ಟದಷ್ಟಿರುತ್ತದೆ. ಇಂತಹ ಮಕ್ಕಳಿಗೆ ಜವಾಬ್ದಾರಿ ಕಮ್ಮಿ ಇರುತ್ತದೆ. ಬಹಳ ಸ್ವಾತಂತ್ರ್ಯ ಇವರಿಗೆ ದೊರಕಿರುತ್ತದೆ. ದುಡ್ಡಿಗೆ ಏನೂ ಬರವಿಲ್ಲ. ಈ ರೀತಿ ಇರುವ ಮಗನಾಗಿ ನಾನು ಕಾಣಿಸಿಕೊಂಡಿದ್ದೇನೆ. ಅವನ ಜೀವನದಲ್ಲೂ ಮದುವೆ ಎನ್ನುವುದು ಬಂದಾಗ ಆಗುವ ಬದಲಾವಣೆಗಳು ಏನೇನು? ಆತನಿಗೆ ಜವಾಬ್ದಾರಿ ಬರುತ್ತಾ? ಇಂತಹ ಪ್ರಶ್ನೆಗಳಿಗೆ ಉತ್ತರ ಕೊಡುವ ಪಾತ್ರ ನನ್ನದು.
ಖ್ಯಾತ ಕಲಾವಿದರ ಜೊತೆ ನಟಿಸಿದ ಅನುಭವ...
ಸಿನಿಮಾ ಕ್ಷೇತ್ರಕ್ಕೆ ಹೆಜ್ಜೆ ಇಟ್ಟಾಗ ಹಲವು ಖ್ಯಾತ ಕಲಾವಿದರ ಜೊತೆ ಕೆಲಸ ಮಾಡಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಅದೃಷ್ಟವಶಾತ್ ನನಗೆ ಮೊದಲ ಸಿನಿಮಾದಲ್ಲೇ ದೇವರಾಜ್, ಅಚ್ಯುತ್ ಕುಮಾರ್, ಮಾಳವಿಕ ಅವಿನಾಶ್, ಅನೂಪ್ ಭಂಡಾರಿ, ಶೃತಿ ಹರಿಹರನ್, ಶ್ರುತಿ, ರವಿಶಂಕರ್ ಗೌಡ ಹೀಗೆ ಸಾಲು ಸಾಲು ಅದ್ಭುತ ಕಲಾವಿದರ ಜೊತೆ ನಟಿಸುವ ಅವಕಾಶ ದೊರೆಯಿತು. ಜೊತೆಗೆ ಅಪ್ಪಟ ಕನ್ನಡತಿ ಅಂಕಿತಾ ಅಮರ್ ಜೊತೆಗೆ ತೆರೆ ಹಂಚಿಕೊಂಡಿದ್ದು ಇನ್ನೊಂದು ಖುಷಿ ವಿಚಾರ. ನಟನೆ ಎನ್ನುವುದು ಎದುರಿಗೆ ಇರುವ ವ್ಯಕ್ತಿಯ ನಟನೆಗೆ ಪ್ರತಿಕ್ರಿಯೆ ನೀಡುವುದು. ಈ ವಿಚಾರದಲ್ಲಿ ಅಂಕಿತಾ ಅಮರ್ ಪ್ರತಿಭಾನ್ವಿತ ನಟಿ. ಕನ್ನಡ ಚಿತ್ರರಂಗದಲ್ಲಿ ಬಹಳ ಸರಳವಾಗಿರುವ, ಚೆಂದದ ನಟನೆ ಮಾಡುವ ನಟಿ ಇವರು.
ಶೈನ್ ಶೆಟ್ಟಿ ಕನಸುಗಳೇನು?
ಒಳ್ಳೊಳ್ಳೆಯ ಕಥೆ, ಚಿತ್ರತಂಡ, ನಿರ್ದೇಶಕರನ್ನು ಆಯ್ಕೆ ಮಾಡಿಕೊಂಡು ಸಿನಿಮಾಗಳನ್ನು ಮಾಡಲಿದ್ದೇನೆ. ಭಾರತೀಯ ಚಿತ್ರರಂಗಕ್ಕೆ ಕನ್ನಡದ ಸಿನಿಮಾ ಮೂಲಕ ಕೊಡುಗೆ ನೀಡಬೇಕು ಎನ್ನುವ ಕನಸಿದೆ. ಬರುವ ಎಲ್ಲಾ ಅವಕಾಶವನ್ನು ನಾನು ಕೇವಲ ಪಾತ್ರದ ದೃಷ್ಟಿಯಿಂದ ನೋಡುತ್ತೇನೆ. ನಾಯಕನ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತೇನೋ ಅಷ್ಟೇ ಪ್ರಾಮುಖ್ಯತೆಯನ್ನು ಒಂದು ಸಣ್ಣ ಪಾತ್ರವನ್ನು ನಿಭಾಯಿಸುವಾಗಲೂ ನೀಡುತ್ತೇನೆ.
ಶೈನ್ ಮುಂದಿನ ಸಿನಿಮಾಗಳು..
ಮುಂದಿನ ಸೆ.12ಕ್ಕೆ ‘ನಿದ್ರಾದೇವಿ ನೆಕ್ಸ್ಟ್ ಡೋರ್’ ರಿಲೀಸ್ ಆಗುತ್ತಿದೆ. ಜೊತೆಗೆ ಮತ್ತೊಂದು ಕನ್ನಡ ಸಿನಿಮಾದ ಮಾತುಕತೆ ನಡೆಯುತ್ತಿದೆ. ಇದು ಶೀಘ್ರದಲ್ಲೇ ಘೋಷಣೆಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.