ಶಿವರಾಜ್ಕುಮಾರ್ ನಟನೆಯ ‘ಗುಮ್ಮಡಿ ನರಸಯ್ಯ’ ಚಿತ್ರದ ಫಸ್ಟ್ಲುಕ್ ಪೋಸ್ಟರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಆಂಧ್ರಪ್ರದೇಶದ ಯೆಲ್ಲಾಂಡು ರಾಜಕಾರಣಿ ಗುಮ್ಮಡಿ ನರಸಯ್ಯ ಅವರ ಪಾತ್ರದಲ್ಲಿ ಶಿವರಾಜ್ಕುಮಾರ್ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಪರಮೇಶ್ವರ್ ಹಿವ್ರಲೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ನಟರಾಗಿ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಇವರ ಚೊಚ್ಚಲ ನಿರ್ದೇಶನದ ಚಿತ್ರವಿದು.

ಸೈಕಲ್ ತಳ್ಳುತ್ತಾ, ಹೆಗಲಿಗೆ ಕೆಂಪು ಶಾಲು ಹಾಕಿಕೊಂಡು, ವಿಧಾನಸೌಧದ ಮುಂದೆ ಶಿವಣ್ಣ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಎನ್.ಸುರೇಶ್ ರೆಡ್ಡಿ ಬಂಡವಾಳ ಹೂಡುತ್ತಿದ್ದಾರೆ. ತೆಲುಗು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಚಿತ್ರ ಸಿದ್ಧಗೊಳ್ಳುತ್ತಿದೆ.

‘ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಸದಸ್ಯರಾಗಿದ್ದರು. ಗುಮ್ಮಡಿ ನರಸಯ್ಯ 1983 ರಿಂದ ಐದು ಸಲ ಯೆಲ್ಲಾಂಡು ಕ್ಷೇತ್ರದಿಂದ ವಿಧಾನಸಭೆಯ ಸದಸ್ಯರಾಗಿದ್ದರು. ಐದು ಬಾರಿ ಶಾಸಕರಾಗಿದ್ದರೂ ಸೈಕಲ್ನಲ್ಲಿಯೇ ಓಡಾಟ, ರಸ್ತೆ ಬದಿಯಲ್ಲಿ ಊಟ, ಹಳೆ ಮನೆಯಲ್ಲಿಯೇ ವಾಸ ಇವರ ವಿಶೇಷವಾಗಿತ್ತು. ಅಂಥ ಸಜ್ಜನ ರಾಜಕಾರಣಿ ಪಾತ್ರದಲ್ಲಿ ಶಿವರಾಜ್ಕುಮಾರ್ ಕಾಣಿಸಿಕೊಳ್ಳಲಿದ್ದಾರೆ’ ಎಂದಿದೆ ಚಿತ್ರತಂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.