ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉತ್ತರಕಾಂಡ’ ಪ್ರವೇಶಿಸಿದ ಶಿವರಾಜ್‌ಕುಮಾರ್‌

Published 21 ಮೇ 2024, 22:30 IST
Last Updated 21 ಮೇ 2024, 22:30 IST
ಅಕ್ಷರ ಗಾತ್ರ

ರೋಹಿತ್‌ ಪದಕಿ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ‘ಉತ್ತರಕಾಂಡ’ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ನಟ ಶಿವರಾಜ್‌ಕುಮಾರ್‌ ಇದೀಗ ಚಿತ್ರತಂಡ ಸೇರಿಕೊಂಡಿದ್ದಾರೆ.

ವಿಜಯಪುರದಲ್ಲಿ ‘ಉತ್ತರಕಾಂಡ’ದ ಮೊದಲ ಹಂತದಲ್ಲಿ 15 ದಿನಗಳ ಚಿತ್ರೀಕರಣ ಇದೀಗ ಮುಕ್ತಾಯಗೊಂಡಿದೆ. ಬೆಳಗಾವಿಯಲ್ಲಿ ಮುಂದಿನ ಹಂತದ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರತಂಡ ತಿಳಿಸಿದೆ. ಇದೊಂದು ಆ್ಯಕ್ಷನ್ ಡ್ರಾಮಾ ಚಿತ್ರವಾಗಿದ್ದು, ಚಿತ್ರದಲ್ಲಿ ಶಿವರಾಜ್‌ಕುಮಾರ್ ಮತ್ತು ಧನಂಜಯ ಮುಖ್ಯ ಭೂಮಿಕೆಯಲ್ಲಿದ್ದಾರೆ. ಧನಂಜಯ ‘ಗಬ್ರು ಸತ್ಯ’ನಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದು, ಅವರ ಲುಕ್‌ ಹೇಗಿರಲಿದೆ ಎನ್ನುವುದನ್ನು ಟೀಸರ್‌ ಮೂಲಕವೇ ಚಿತ್ರತಂಡ ಹೇಳಿದೆ. ಆದರೆ ಶಿವರಾಜ್‌ಕುಮಾರ್‌ ಅವರ ಪಾತ್ರದ ಬಗ್ಗೆ ಚಿತ್ರತಂಡ ಗುಟ್ಟುಬಿಟ್ಟುಕೊಟ್ಟಿಲ್ಲ. 

ಧನಂಜಯ ಜೋಡಿಯಾಗಿ ‘ದುರ್ಗಿ’ ಎಂಬ ಪಾತ್ರದಲ್ಲಿ ಐಶ್ವರ್ಯ ರಾಜೇಶ್‌, ‘ಲಚ್ಚಿ’ಯಾಗಿ ಚೈತ್ರಾ ಜೆ.ಆಚಾರ್‌, ‘ಮಿರ್ಚಿ ಮಲ್ಲಿಗೆ’ ಎಂಬ ಪಾತ್ರದಲ್ಲಿ ದಿಗಂತ್‌, ‘ಬಂಡೆ ಕಾಕ’ನಾಗಿ ರಂಗಾಯಣ ರಘು, ‘ಧರ್ಮ’ನಾಗಿ ಗೋಪಾಲಕೃಷ್ಣ ದೇಶಪಾಂಡೆ, ‘ಪಂಡ್ರಿ ಬಾಯ್‌’ಯಾಗಿ ಉಮಾಶ್ರೀ, ‘ಪಾಟೀಲ’ ಎಂಬ ಪಾತ್ರದಲ್ಲಿ ಯೋಗರಾಜ್‌ ಭಟ್‌ ಕಾಣಿಸಿಕೊಳ್ಳಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT