ಬೆಂಗಳೂರು: 2024ರ ಡಿಸೆಂಬರ್ 24ರಂದು ಅಮೆರಿಕದ ಮಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನಟ ಶಿವರಾಜ್ಕುಮಾರ್, ಕ್ಯಾನ್ಸರ್ನಿಂದ ಸಂಪೂರ್ಣವಾಗಿ ಗುಣಮುಖರಾಗಿ ಇಂದಿಗೆ ಒಂದು ವರ್ಷ ಕಳೆದಿದೆ.

ಈ ಕುರಿತು ನಟ ಶಿವರಾಜ್ಕುಮಾರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡದ್ದಾರೆ. ಜೊತೆಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರಿಗೆ ವಂದನೆಗಳನ್ನು ತಿಳಿಸಿದ್ದಾರೆ.
.ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ ನಟ ಶಿವರಾಜ್ಕುಮಾರ್.ಕ್ಯಾನ್ಸರ್ ಶಸ್ತ್ರಚಿಕಿತ್ಸೆ: ಶೂಟಿಂಗ್ಗೆ ಮರಳಿದ ನಟ ಶಿವರಾಜ್ಕುಮಾರ್.
ಶಿವಣ್ಣ ವಿಶೇಷ ಪೋಸ್ಟ್

‘ನನ್ನ ಜೀವನದ ಅತೀ ದೊಡ್ಡ ಸವಾಲು ಗೆದ್ದು ಇಂದಿಗೆ ಒಂದು ವರ್ಷ. ನಾನು ಮತ್ತೆ ಅದೇ ಚೇತನದಿಂದ ಮುನ್ನಡೆಯಲು ಸಾಧ್ಯವಾದದ್ದು ನಿಮ್ಮೆಲ್ಲರ ಪ್ರೀತಿ, ಆಶೀರ್ವಾದದಿಂದ. ಡಾ. ಮನೋಹರನ್ ಮುರುಗೇಶನ್ ಮತ್ತು ತಂಡ, ಡಾ. ದಿಲೀಪ್, ಡಾ. ಶಶಿಧರ್, ಡಾ. ವಿ.ಕೆ ಶ್ರೀನಿವಾಸ್, ಡಾ. ಯೋಗಿತಾ, ಮತ್ತು ಡಾ ಅನಿತಾ ಧರ್ಮಲಿಂಗಂ ಅವರಿಗೆ ನನ್ನ ಅನಂತ ಅನಂತ ವಂದನೆಗಳು.

ನಿಮ್ಮ ಪ್ರೀತಿಗೆ ಸದಾ ಚಿರಋಣಿ.

ನಿಮ್ಮ ಶಿವಣ್ಣ’ ಎಂದು ಬರೆದುಕೊಂಡಿದ್ದಾರೆ.

ನಟ ಶಿವರಾಜ್ಕುಮಾರ್ ಅವರಿಗೆ ಅನಾರೋಗ್ಯದ ಕಾರಣದಿಂದ ಹೆಚ್ಚಿನ ಚಿಕಿತ್ಸೆ ಪಡೆಯಲು 2024 ಡಿಸೆಂಬರ್ 18ರಂದು ರಾತ್ರಿ ಅಮೆರಿಕಕ್ಕೆ ತೆರಳಿದರು. ಡಿ.24ರಂದು ಅಮೆರಿಕದ ಮಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಂದು ಶಿವರಾಜ್ಕುಮಾರ್ ಅವರ ಜೊತೆಗೆ ಗೀತಾ ಶಿವರಾಜ್ಕುಮಾರ್ ಹಾಗೂ ಮಗಳು ನಿವೇದಿತಾ ಶಿವರಾಜ್ಕುಮಾರ್ ಅವರೂ ಅಮೆರಿಕಕ್ಕೆ ತೆರಳಿದ್ದರು. ವೈದ್ಯರಾದ ಮುರುಗೇಶನ್ ಮನೋಹರನ್ ಅವರು ಶಿವರಾಜ್ಕುಮಾರ್ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದರು. ಇದೀಗ ಶಿವಣ್ಣ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಿ ಇಂದಿಗೆ ಒಂದು ವರ್ಷ ಕಳೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.